Film News

ಗುರುಶಿಷ್ಯರು ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ!

ಬೆಂಗಳೂರು: 40 ವರ್ಷಗಳ ಬಳಿಕ ಗುರುಶಿಷ್ಯರು ಎಂಬ ಹೆಸರಿನಲ್ಲಿ ಚಲನಚಿತ್ರವೊಂದು ಸಿದ್ದವಾಗುತ್ತಿದ್ದು, ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಒಂದನ್ನು ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅನಾವರಣ ಗೊಳಿಸಿದ್ದಾರೆ.

1981 ರಲ್ಲಿ ತೆರೆಮೇಲೆ ಕಾಣಿಸಿಕೊಂಡ ಹೆಚ್.ಆರ್.ಭಾರ್ಗವ ನಿರ್ದೇಶನದಲ್ಲಿ ಮೂಡಿಬಂದ ಗುರುಶಿಷ್ಯರು ಚಿತ್ರ ಸಖತ್ ಪಾಪುಲರ್ ಆಗಿತ್ತು. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ರವರು ಈ ಚಿತ್ರದಲ್ಲಿ ನಟಿಸಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಮಂಜುಳ, ಜಯಮಾಲಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಪ್ರಸ್ತುತ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಗುರು ಶಿಷ್ಯರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇನ್ನೂ ಈ ಚಿತ್ರ ಫಸ್ಟ್ ಲುಕ್ ಹಾಗೂ ಟೈಟಲ್ ಅನ್ನು ನಿರ್ಮಾಪಕ ದ್ವಾರಕೀಶ್ ರವರು ಅನಾವರಣ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡ ಶರಣ್ ದ್ವಾರಕೀಶ್ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದು, ನಮ್ಮ ಮುಂದಿನ ಪ್ರಯತ್ನ ಗುರು-ಶಿಷ್ಯರು, ಹಾರೈಸಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಚಿತ್ರದ ಪೋಸ್ಟರ್ ನಲ್ಲಿ ಒಂದು ಕಡೆ ಶರಣ್ ಹಾಗೂ ಮತ್ತೊಂದು ಕಡೆ ಮಕ್ಕಳು ಹಗ್ಗಜಗ್ಗಾಟ ಆಡುತ್ತಿರುವ ಚಿತ್ರವಿದೆ. ಇನ್ನೂ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಜನವರಿಯಿಂದ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನೂ 40 ವರ್ಷಗಳ ಬಳಿಕ ಗುರುಶಿಷ್ಯರ ಹೆಸರಿನಲ್ಲಿ ಸಿನೆಮಾ ಮೂಡಿಬರುತ್ತಿರುವುದು ಸಿನಿರಸಿಕರಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

Trending

To Top