Entertainment

ಬಹುಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿ, ಅವರ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ನಿನ್ನೆ ಕನ್ನಡ ಚಿತ್ರರಂಗ ಪುನೀತ ನಮನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಹಲವು ಕಲಾವಿದರು ಭಾಗಿಯಾಗಿ, ಪುನೀತ್ ಅವರ ಬಗ್ಗೆ ಮಾತನಾಡಿದರು..

ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುನೀತ್ ಅವರ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ಹಿರಿಯ ಕಲಾವಿದರೆಲ್ಲರು, ಪುನೀತ್ ರಾಜ್ ಕುಮಾರ್ ಅವರು ನಮ್ಮ ಶ್ರದ್ಧಾಂಜಲಿ ಕಾರ್ಯಕ್ಕೆ ಬರಬೇಕಿತ್ತು, ಆದರೆ ನಾವೇ ಬರುವ ಹಾಗೆ ಆಗಿದೆ ಎಂದು ಬಹಳ ಬೇಸರ ಮಾಡಿಕೊಂಡರು.

ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 23 ದಿನಗಳು ಕಳೆದ ನಂತರ ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ಸ್ ವಿಷಯದಲ್ಲಿ ಒಂದು ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗ ಪಿ.ಆರ್.ಕೆ ಪ್ರೊಡಕ್ಶನ್ಸ್ ಸಂಸ್ಥೆ ಪುನರಾರಂಭವಾಗಲಿದ್ದು, ಎಲ್ಲರ ಸಪೋರ್ಟ್ ಬೇಕು ಎಂದು ಅಶ್ವಿನಿ ಅವರು ಮನವಿ ಮಾಡಿದ್ದಾರೆ.

Trending

To Top