Film News

ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟ ಶಾಕಿಂಗ್ ಘಟನೆ ಏನು ಗೊತ್ತಾ?

ಮುಂಬೈ: ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಆಟೋ ಬಯೋಗ್ರ್ರಫಿಯಲ್ಲಿ ಕೆಲವೊಂದು ಅಹಿತಕರ ಘಟನೆಗಳ ಬಗ್ಗೆ ಬಹಿರಂಗಪಡಿಸುತ್ತಿರುತ್ತಾರೆ. ಇದೀಗ ಮತ್ತೊಂದು ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟ ಸತ್ಯ ಏನೆಂದರೇ, ಸಿನೆಮಾದಲ್ಲಿ ಅವಕಾಶಕ್ಕಾಗಿ ನಿರ್ದೇಶಕರೊಬ್ಬರ ಬಳಿ ತೆರಳಿದಾಗ, ನಿರ್ದೇಶಕರು ಕೆಲ ಸಮಯ ಮಾತನಾಡಿ ನಂತರ ಎದ್ದು ನಿಲ್ಲುವಂತೆ ಹೇಳಿದರು. ನಂತರ ಒಂದು ಸುತ್ತು ತಿರುಗುವಂತೆ ಹೇಳಿದ್ರು, ಅದಾದ ನಂತರ ನನ್ನನ್ನು ತುಂಬಾ ಸಮಯ ನೋಡುತ್ತಿದ್ದರು. ಇದಾದ ಬಳಿಕ ನನಗೆ ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡುವುದರ ಜೊತೆಗೆ ದೇಹದ ಇತರೆ ಅಂಗಾಂಗಗಳ ಗಾತ್ರವನ್ನು ಸಹ ಹೆಚ್ಚಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದರು ಎಂಬ ವಿಚಾರವನ್ನು ತಮ್ಮ ಆಟೋಬಯೋಗ್ರಫಿಯಲ್ಲಿ ಬಹಿರಂಗಪಡಿಸಿದ್ದಾರೆ.

ಇನ್ನೂ ನಟಿ ಪ್ರಿಯಾಂಕಾ ಕಳೆದ 2002 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಂತರ ಸಿನೆಮಾಗಳಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿರುತ್ತಿದ್ದರು. ಈ ವೇಳೆ ಪ್ರಿಯಾಂಕ ನಾಯಕಿಯಾಗಿ ತಮ್ಮ ಚಿತ್ರಗಳಲ್ಲಿ ನಟಿಸುವಂತೆ ನಿರ್ಮಾಪಕರು ಕಾಯುತ್ತಿದ್ದರು. ಇನ್ನೂ ಇದೇ ವೇಳೆ ನಿರ್ದೇಶಕರೊಬ್ಬರ ಜೊತೆ ಸಿನೆಮಾ ಕುರಿತು ಮಾತುಕತೆ ನಡೆಸುತ್ತಿದ್ದಾಗ ಆ ನಿರ್ದೇಶಕರು ಪ್ರಿಯಾಂಕಾ ಬಳಿ ಸ್ತನದ ಗಾತ್ರದ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದರಂತೆ. ಈ ವಿಚಾರವನ್ನು ತಮ್ಮ ಆಟೋಬಯೋಗ್ರಫಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಅಂದಹಾಗೆ ಈ ಎಲ್ಲಾ ವಿಚಾರಗಳು ಪ್ರಿಯಾಂಕಾ ರವರ ಆತ್ಮಚರಿತ್ರೆಯಾದ ’ಅನ್ ಫಿನಿಶಿಡ್’ ಅನ್ನು ಬಿಡುಗಡೆ ಮಾಡಲು ಕಾಯುತ್ತಿದ್ದು, ಬಿಡುಗಡೆಗೂ ಮುನ್ನವೇ ಇದರಲ್ಲಿ ಕೆಲವೊಂದು ವಿಚಾರಗಳು ಬಹಿರಂಗವಾಗುತ್ತಿದ್ದು, ಸಖತ್ ವೈರಲ್ ಆಗುತ್ತಿದೆ ಎನ್ನಲಾಗಿದೆ.

Trending

To Top