Film News

ಹಿಂದೂ ಸಂಪ್ರದಾಯದಂತೆ ಅಮೇರಿಕಾದ ಗೃಹಪ್ರವೇಶ ಮಾಡಿದ ಪ್ರಿಯಾಂಕಾ!

ಮುಂಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್‌ನಲ್ಲೂ ಅನೇಕ ಸಿನೆಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಪ್ರಿಯಾಂಕಾ ಅಮೇರಿಕಾದಲ್ಲಿ ನೆಲೆಸಿದ್ದು ಹಿಂದೂ ಸಂಪ್ರದಾಯದಂತೆ ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಸಂಭ್ರಮದಿಂದ ಮಾಡಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗಷ್ಟೆ ಅಮೇರಿಕಾದಲ್ಲಿ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದ್ದು, ಭಾರತೀಯ ಹಿಂದೂ ಸಂಪ್ರದಾಯದಂತೆ ಮನೆಗೆ ಪ್ರವೇಶ ಮಾಡಿ ಭಾರತೀಯರ ಮನ ಗೆದ್ದಿದ್ದಾರೆ. ಅಮೇರಿಕಾದ ಸೊಸೆಯಾದರೂ ಭಾರತೀಯ ಸಂಪ್ರದಾಯವನ್ನು ಮರೆಯದ ಪ್ರಿಯಾಂಕಾ ಚೋಪ್ರಾ ರವರನ್ನು ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜಾನಸ್ ಜೊತೆ ಹಿಂದೂ ಸಂಪ್ರದಾಯದಂತೆ ಗೃಹಪ್ರವೇಶ ಸಮಾರಂಭದಲ್ಲಿ ಭಾಗಿಯಾಗಿರುವ ಪೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಿಯಾಂಕಾ ತಲೆಯ ಮೇಲೆ ಕಳಶ ಹೊತ್ತುಕೊಂಡು ಮನೆಯೊಳಗೆ ಹೋಗುವ ಪೊಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೊತೆಗೆ ಪ್ರಿಯಾಂಕಾ ಹಿಂದೆಯೇ ನಿಕ್ ಕೈಯಲ್ಲಿ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಮನೆಯೊಳಗೆ ಬರುತ್ತಿದ್ದಾರೆ. ಇನ್ನೂ ಹಿಂದೂ ಸಂಪ್ರದಾಯ ಮರೆಯದ ಪ್ರಿಯಾಂಕಾ ಚೋಪ್ರಾ ರವರಿಗೆ ಅಭಿನಂದನೆಗಳು ಸುರಿಮಳೆಗೈದಿದ್ದಾರೆ.

ಇನ್ನೂ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದಲ್ಲಿನ ಘಟನೆಗಳನ್ನು ತನ್ನ ಅನ್ ಫಿನಿಶಿಡ್ ಎಂಬ ಆತ್ಮಚರಿತ್ರೆ ಮೂಲಕ ಬಿಡುಗಡೆಗೆ ತಯಾರಿಯಲ್ಲಿದ್ದು, ಕೆಲವೊಂದು ಪ್ರಮುಖ ಘಟನೆಗಳು ಆಗಾಗಾ ಲೀಕ್ ಆಗುತ್ತಿದ್ದು, ಅಚ್ಚರಿ ಮೂಡಿಸುತ್ತಿದೆ. ಇನ್ನೂ ಹಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕ ಎರಡು ವೆಬ್ ಸಿರೀಸ್‌ಗಳಲ್ಲಿ ಅಭಿನಯಿಸುತ್ತಿದ್ದಾರೆ.

Trending

To Top