Film News

ಡಿಫರೆಂಟ್ ಉಡುಪು ಧರಿಸಿ ಟ್ರೋಲ್ ಆದ ಪ್ರಿಯಾಂಕಾ!

ಮುಂಬೈ: ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಾರಾಗಿರುತ್ತಾರೆ. ಜೊತೆಗೆ ಡಿಫರೆಂಟ್ ರೀತಿಯಲ್ಲಿ ಬಟ್ಟೆಗಳನ್ನು ಧರಸಿ ಪೊಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ವಿಚಿತ್ರವಾದ ಬಟ್ಟೆ ಧರಿಸಿ ಶೇರ್ ಮಾಡಿದ ಪೊಟೋ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದು, ಟ್ರೋಲ್ ಆಗುತ್ತಿದೆ.

ನಟಿ ಪ್ರಿಯಾಂಕಾ ಚೋಪ್ರಾ ಫ್ಯಾಷನ್ ಗೆ ತುಂಬಾ ಒತ್ತು ನೀಡುತ್ತಾರೆ. ಬಾಲಿವುಡ್ ಸೇರಿದಂತೆ ಹಾಲಿವುಡ್‌ನಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ. ಇದೀಗ ಮ್ಯಾಗೈನ್ ಒಂದಕ್ಕೆ ಮಾಡಿಸಿದ ಪೊಟೋಶೂಟ್‌ನ ಪೊಟೋಗಳು ಸೊಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಜೊತೆಗೆ ಈ ಪೊಟೋಗಳು ಟ್ರೋಲ್ ಆಗುತ್ತಿದ್ದು ನೆಟ್ಟಿಗರು ಮೀಮ್ಸ್ ಗಳನ್ನು ಮಾಡಿ ಶೇರ್ ಸಹ ಮಾಡುತ್ತಿದ್ದಾರೆ.

ಇನ್ನೂ ಪೊಟೋ ವಿಚಾರಕ್ಕೆ ಬಂದರೇ ಚೆಂಡಿನ ರೀತಿಯಲ್ಲಿರುವ ಬಟ್ಟೆ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಗ್ರೀನ್ ಕಲರ್ ಬಟ್ಟೆಯ ಮೇಲೆ ಬ್ಲಾಕ್ ಕಲರ್ ಚುಕ್ಕೆಗಳಿವೆ. ಈ ಪೊಟೋಗಳಿಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು ಟ್ರೋಲ್‌ಗಳನ್ನು ಪ್ರಿಯಾಂಕಾ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಕೆಲವು ಟ್ರೋಲ್‌ಗಳನ್ನು ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಸಹ ಹಂಚಿಕೊಂಡಿದ್ದು, ಟ್ರೋಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್‌ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ಪ್ರಿಯಾಂಕಾ ಆಗಾಗಾ ಸೋಷಿಯಲ್ ಮೀಡಿಯಾ ಮೂಲಕ ಕೆಲವೊಂದು ಪೊಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗುತ್ತಿರುತ್ತಾರೆ.

Trending

To Top