ಮುಂಬೈ: ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೇ ಹಾಲಿವುಡ್ ನ ಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ರವರ ಹಾಟ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಪಡ್ಡೆ ಹುಡುಗರ ನಿದ್ದೆಯನ್ನು ಸಹ ಕೆಡಿಸುತ್ತಿದೆ ಪ್ರಿಯಾಂಕಳ ಹಾಟ್ ಹಾಟ್ ಪೋಟೊಗಳು.
ಅಂದಹಾಗೆ ಮ್ಯಾಗ್ಜೈನ್ ಒಂದಕ್ಕೆ ಪೊಟೋ ಶೂಟ್ ಮಾಡಿಸಿರುವ ಪ್ರಿಯಾಂಕಾ ಚೋಪ್ರಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದು, ಈ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ದೊಡ್ಡದಾಗಿ ವೈರಲ್ ಆಗುತ್ತಿದೆ. ನಟಿ ಪ್ರಿಯಾಂಕಾ ತಮ್ಮ ಪತಿಯೊಂದಿಗೆ ಅಮೇರಿಕಾದಲ್ಲಿ ನೆಲೆಸಿದ್ದು, ಹಲವು ಹಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಮ್ಯಾಗ್ಜೈನ್ ಗಾಗಿ ಪೊಟೋಶೂಟ್ ಮಾಡಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಈ ಮಾದಕ ಲುಕ್ಗೆ ಅಭಿಮಾನಿಗಳು ಫಿದಾ ಆಗಿರುವುದರ ಜೊತೆಗೆ ಪಡ್ಡೆಹುಡುಗರ ನಿದ್ದೆಯನ್ನು ಸಹ ಕೆಡಿಸಿದ್ದಾರೆ.
ಇನ್ನೂ ನಟಿ ಪ್ರಿಯಾಂಕಾ ಚೋಪ್ರಾ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಪ್ರಿಯಾಂಕ ತಮ್ಮ ಇನ್ಸ್ಟಾಗ್ರಾಂನಲ್ಲಿ ನಾಯಿಯ ಜೊತೆ ಇರುವಂತಹ ಪೊಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಇದೀಗ ಹಾಟ್ ಪೊಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು. ಸಖತ್ ವೈರಲ್ ಆಗುತ್ತಿದೆ.
ನಟಿ ಪ್ರಿಯಾಂಕಾ ಚೋಪ್ರಾ ರವರ ವೈಟ್ ಟೈಗರ್ ಚಿತ್ರದ ಬಳಿಕ ಸಿಟಾಡೆಲ್ ಎಂಬ ವೆಬ್ ಸರಣಿಯಲ್ಲಿ ನಟಿಸುತ್ತಿದ್ದು, ಇದಕ್ಕಾಗಿ ಅಮೇರಿಕಾದಿಂದ ಲಂಡನ್ಗೆ ತೆರಳಿದ್ದಾರೆ. ಸಿರೀಸ್ ಮುಗಿಯವರೆಗೂ ಲಂಡನ್ ನಲ್ಲಿಯೇ ನೆಲೆಸಲಿದ್ದಾರೆ ಎನ್ನಲಾಗುತ್ತಿದೆ.
