Film News

ವಿಶೇಷವಾಗಿ ಪತ್ನಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ ಪ್ರಿನ್ಸ್ ಮಹೇಶ್ ಬಾಬು

ಹೈದರಾಬಾದ್: ಸ್ಯಾಂಡಲ್‌ವುಡ್ ನ ಟಾಪ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ರವರ ಧರ್ಮಪತ್ನಿ ನಮ್ರತಾ ಹುಟ್ಟುಹಬ್ಬ ಇಂದು. ಇನ್ನೂ ಮಹೇಶ್ ಬಾಬು ತಮ್ಮ ಪತ್ನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ.

ನಟ ಮಹೇಶ್ ಬಾಬು ರವರ ಪತ್ನಿ ನಮ್ರತಾ ಶಿರೋಡ್ಕರ್ ಹುಟ್ಟುಹಬ್ಬದ ಆಚರಣೆಯನ್ನು ದುಬೈನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಪತ್ನಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯಿಂದ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ. ನಾನು ತುಂಬಾ ಪ್ರೀತಿ ಮಾಡುವ ವ್ಯಕ್ತಿ ಹುಟ್ಟುದ ದಿನ, ನಾನು ನಿನ್ನೊಂದಿಗೆ ಇರುವ ಪ್ರತೀಕ್ಷಣ ನನಗೆ ವಿಶೇಷವಾಗಿರುತ್ತದೆ. ಆದರೆ ಇಂದು ಇನ್ನೂ ಸ್ವಲ್ಪ ಜಾಸ್ತಿ ಇದೆ. ನನ್ನ ಜೀವನದ ಅದ್ಬುತ ಮಹಿಳೆಯ ಹುಟ್ಟುಹಬ್ಬದ ಆಚರಣೆಯಾಗಿದ್ದು, ಜನ್ಮ ದಿನದ ಶುಭಾಷಯಗಳು ಮೈ ಲೇಡಿ ಬಾಸ್ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಸದ್ಯ ಮಹೇಶ್ ಬಾಬು ಕುಟುಂಬ ದುಬೈನಲ್ಲಿ ಕಳೆಯುತ್ತಿದ್ದಾರೆ. ಅಂದಹಾಗೆ ಮಹೇಶ್ ಬಾಬು ಕುಟುಂಬ ರಜಾ ದಿನಗಳನ್ನು ಕಳೆಯಲು ದುಬೈಗೆ ಹೋಗುತ್ತಿರುತ್ತಾರೆ. ಜೊತೆಗೆ ಪತ್ನಿಯ ಹುಟ್ಟುಹಬ್ಬವನ್ನು ಸಹ ದುಬೈನಲ್ಲಿ ಆಚರಿಸಿದ್ದಾರೆ. ಇನ್ನೂ ನಟ ಮಹೇಶ್ ಬಾಬು ಹಾಗೂ ನಮ್ರತಾ ಇಬ್ಬರೂ ಪ್ರೀತಿ ಮಾಡಿ 2005 ರಲ್ಲಿ ಮದುವೆಯಾದರು. ಸಿನೆಮಾ ಸೆಟ್ ಒಂದರಲ್ಲಿ ಇವರಿಬ್ಬರೂ ಭೇಟಿಯಾಗಿ ಮೊದಲಿಗೆ ಒಳ್ಳೆಯ ಸ್ನೇಹಿತರಾಗಿದ್ದು, ನಂತರ ಸ್ನೇಹ ಪ್ರೀತಿಯಾಗಿ ಹಿಂದೂ ಸಂಪ್ರದಾಯದಂತೆ ವಿವಾಹ ಜೀವನಕ್ಕೆ ಎಂಟ್ರಿ ಕೊಟ್ಟರು. ಇನ್ನೂ ಮಹೇಶ್ ಬಾಬು ದಂಪಂತಿಗೆ ಸಿತಾರಾ ಮತ್ತು ಗೌತಮ್ ಇಬ್ಬರು ಮಕ್ಕಳಿದ್ದಾರೆ.

Trending

To Top