ಹೈದರಾಬಾದ್: ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸುತ್ತಿರುವ ಸರ್ಕಾರುವಾರಿ ಪಾಟ ಚಿತ್ರದಲ್ಲಿ ಮಹೇಶ್ ಬಾಬು ಲುಕ್ ಒಂದು ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೊ ವೈರಲ್ ಆಗುತ್ತಿದೆ.
ಕಳೆದ 2020 ಜನವರಿ ಮಾಹೆಯಲ್ಲಿ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೇವ್ವರು ಚಿತ್ರ ಬಿಡುಗಡೆಯಾಗಿದ್ದು, ಸೂಪರ್ ಡೂಪರ್ ಹಿಟ್ ಹೊಡೆದಿತ್ತು. ಅದಾದ ಬಳಿಕ 2021 ರಲ್ಲಿ ಮಹೇಶ್ಬಾಬು ರವರ ಸಿನೆಮಾ ಬಿಡುಗಡೆಯಾಗದೇ ಇರುವುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ ಎನ್ನಬಹುದು. ಕೊರೋನಾ ಕಾರಣದಿಂದಾಗಿ ಈ ವರ್ಷ ಮಹೇಶ್ ಬಾಬು ಸಿನೆಮಾ ತಡವಾಗುತ್ತಿದೆ. ಕೊರೋನಾ ಇರದೇ ಇದ್ದಿದ್ದರೇ ಎರಡು ಚಿತ್ರಗಳಾದರೂ ಬಿಡುಗಡೆಯಾಗುತ್ತಿತತ್ತು.
ಇದೀಗ ಮಹೇಶ್ ಬಾಬು ಅಭಿನಯದ ಸರ್ಕಾರುವಾರಿ ಪಾಟ ಚಿತ್ರದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿದ್ದು, ಈ ಚಿತ್ರಕ್ಕಾಗಿ ತಮ್ಮ ಸ್ಟೈಲ್ ಬದಲಾಯಿಸಿದ್ದಾರೆ ಎನ್ನಲಾಗಿದೆ. ಶೂಟಿಂಗ್ ಸೆಟ್ನಲ್ಲಿ ತೆಗೆದ ಒಂದು ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಪೊಟೋದಲ್ಲಿ ಮಹೇಶ್ಬಾಬು ತಮ್ಮ ಹೇರ್ ಸ್ಟೈಲ್ ಜೊತೆಗೆ ಬಾಡಿ ಫಿಟ್ನೆಸ್ ನಲ್ಲೂ ಸಹ ಸ್ವಲ್ಪ ಮಾರ್ಪಾಡಾಗಿದೆ. ಈ ಪೊಟೋಗೆ ಕೆಲವು ನೆಟ್ಟಿಗರು ೨೫ ವರ್ಷದ ಯುವಕನಂತೆ ಮಹೇಶ್ ಬಾಬು ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಇನ್ನೂ ಸರ್ಕಾರುವಾರಿ ಪಾಟ ಚಿತ್ರದ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದ್ದು, ಮಹೇಶ್ ಬಾಬು ಕುಟುಂಬ ದುಬೈನಲ್ಲಿ ಬೀಡುಬಿಟ್ಟಿದೆ. ಇನ್ನೂ ನಿರಂತರವಾಗಿ ಶೂಟಿಂಗ್ ನಲ್ಲಿ ಭಾಗವಹಿಸುವುದರ ಜೊತೆಗೆ ತಮ್ಮ ಕುಟುಂಬದೊಂದಿಗೂ ಸಹ ಸಮಯ ಕಳೆಯುತ್ತಿರುತ್ತಾರೆ. ಇನ್ನೂ ಸಿನೆಮಾ 2022 ರ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗಲಿದೆ.
