Cinema

ಧ್ರುವ ಸರ್ಜಾ ಪ್ರೇರಣಾ ಅವರಿಗೆ ಕರೋನ ಬಂದಿದ್ದು ಎಲ್ಲಿಂದ ಗೊತ್ತಾ? ನಿಜಕ್ಕೂ ಬೇಸರವಾಗುತ್ತೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾರಿಗೆ ಕರೊನಾ ಸೋಂಕು ಪಾಸಿಟಿವ್ ಬಂದಿರುವ ಸುದ್ದಿ ಎಲ್ಲರಲ್ಲೂ ಆತಂಕ ಮೂಡಿಸಿದೆ. ಚಿರು ಅವರ ಅಗಲಿಕೆಯ ನಂತರ ಧ್ರುವ ಹೆಚ್ಚಾಗಿ ಎಲ್ಲೂ ಹೊರಗಡೆ ಬಂದಿರಲಿಲ್ಲ ಆದರೆ ಸೋಂಕು ಹೇಗೆ ಹರಡಿರಬಹುದು ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಚಿರಂಜೀವಿ ಅವರು ನಿಧನರಾದ ನಂತರ ಅವರಿಗೂ ಸಹ ಕರೊನಾ ಟೆಸ್ಟ್ ಮಾಡಲಾಗಿತ್ತು, ಆದರೆ ಚಿರು ಅವರ ಟೆಸ್ಟ್ ರಿಪೋರ್ಟ್ ನೆಗಟಿವ್ ಬಂದಿತ್ತು. ಚಿರಂಜೀವಿ ಸರ್ಜಾ ಅವರ ಅಗಲಿಕೆಯ ಸಮಯ, ಅವರ ಅಂತಿಮ ದರ್ಶನ ಹಾಗೂ ಅವರ ಅಂತ್ಯ ಕ್ರಿಯೆಗಳ ಸಂದರ್ಭದಲ್ಲಿ ಹಲವಾರು ಜನ ಸೇರಿದ್ದರು.
ಆ ಸಮಯದಲ್ಲಿ ನಿಯಮಗಳು ಉಲ್ಲಂಘನೆಯವಾಗಿವೆ ಎಂದು ಪೊಲೀಸ್ ಪ್ರಕರಣ ಕೂಡ ದಾಖಲಾಗಿತ್ತು. ಇದರ ನಂತರ ಹಲವಾರು ಮಂದಿ ತಪಸಣೆಗೂ ಒಳಪಟ್ಟಿದ್ದರು ಅವರೆಲ್ಲರ ವರದಿ ನೆಗಟಿವ್ ಬಂದಿತ್ತು ಎನ್ನಲಾಗಿದೆ. ನಂತರ ಚಿರು ಅವರ ಪುಣ್ಯತಿಥಿ ಕಾರ್ಯದ ಸಮಯದಲ್ಲೂ ಸಹ 30ಜನಕ್ಕೂ ಹೆಚ್ಚು ಜನ ಸೇರಿದ್ದರು. ಕಾರ್ಯ ಇರುವುದರಿಂದ ಅನಿವಾರ್ಯವಾಗಿ ಕುಟುಂಬದವರು ಸೇರಲೇಬೇಕಾಗಿತ್ತು. ಆದರೆ ಕಾರ್ಯಗಳು ಮುಗಿದ ನಂತರ ಕುಟುಂಬದವರು ಹಾಗೂ ಎಲ್ಲರೂ ಟೆಸ್ಟ್ ಮಾಡಿಸಿಕೊಂಡಿದ್ದು ಅವರೆಲ್ಲರ ರಿಪೋರ್ಟ್ ಕೂಡ ನೆಗಟಿವ್ ಬಂದಿದೆ ಎಂದು ಮಾಹಿತಿ ದೊರಕಿದೆ.
ಚಿರು ಅವರ ನಿಧನದ ನಂತರ ಎಲ್ಲಾ ಜವಾಬ್ದಾರಿಗಳು ಧ್ರುವ ಅವರ ಮೇಲೆ ಬಿದ್ದಿದ್ದರಿಂದ ಅವರು ಹೆಚ್ಚು ಓಡಾಡುವಂತೆ ಆಗಿತ್ತು ಎನ್ನಲಾಗಿದೆ. ಮೊದಲಿಗೆ ಧ್ರುವ ಅವರ ಪತ್ನಿ ಪ್ರೇರಣಾರಿಗೆ ರೋಗಲಕ್ಷಣಗಳು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಎರಡು ದಿನದಿಂದ ಜ್ವರ ಕೆಮ್ಮು ಕಾಣಿಸಿದ ನಂತರ, ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ, ಕರೊನಾ ಸೋಂಕು ಪಾಸಿಟಿವ್ ಇರುವುದು ತಿಳಿದುಬಂದಿದೆ. ಒಂದೆರಡು ದಿನದಿಂದ ಜ್ವರ ಕೆಮ್ಮು ಕಾಣಿಸಿಕೊಂಡಿದ್ದರಿಂದ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ಹೋದಾಗ, ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಗುಣಮುಖವಾಗಿ ಬರುತ್ತೇನೆ ಎಂದು ತಿಳಿಸಿದ್ದಾನೆ. ಸಧ್ಯಕ್ಕೆ ಧ್ರುವ ಅಪೋಲೊ ಅಸ್ಪತ್ರೆಯಲ್ಲಿದ್ದಾನೆ, ಚಿರು ನಿಧನದ ನಂತರ ಜವಾಬ್ದಾರಿಗಳು ಹೆಚ್ಚಾಗಿದ್ದರಿಂದ ಎಲ್ಲಾ ಹೊಣೆ ಆತನ ಮೇಲೆ ಬಿದ್ದಿತ್ತು ಹಾಗಾಗಿ ಹೆಚ್ಚು ಓಡಾಡುವಂತಾಗಿತ್ತು ಎಂದು ನಟಿ ತಾರಾ ತಿಳಿಸಿದ್ದಾರೆ.
ಜೊತೆಗೆ, ಅಣ್ಣನ ಅಗಲಿಕೆ ಧ್ರುವ ಅವರ ಮನಸ್ಸಿಗೆ ಬಹಳ ನೋವು ತಂದಿತ್ತು. ಇದರಿಂದ ಹೊರಬರಲಾಗದೆ ಅವರಿಗೆ ಮಾನಸಿಕ ಖಿನ್ನತೆಯಾಗಿತ್ತು. ಅದರಿಂದಾಗಿ ಅಸ್ಪತ್ರೆಗೆ ಸಹ ತೆರಳಿದ್ದರು ಎನ್ನಲಾಗಿತ್ತು. ಆ ಸಂದರ್ಭದಲ್ಲಿ ಸಹ ಧ್ರುವ ಕುಟುಂಬದ ಇನ್ನಿತರ ಸದಸ್ಯರು ಸಹ ಟೆಸ್ಟ್ ಮಾಡಿಸಿಕೊಂಡಿದ್ದರು, ಆ ಸಮಯದಲ್ಲಿ ಸಹ ಎಲ್ಲರ ಟೆಸ್ಟ್ ರಿಪೋರ್ಟ್ ಗಳು ಕೂಡ ನೆಗಟಿವ್ ಬಂದಿದೆ. ಸಧ್ಯಕ್ಕೆ, ಧ್ರುವ ಅವರ ಜೊತೆ ಹೆಚ್ಚಿನ ಸಂಪರ್ಕದಲ್ಲಿದ್ದ ಎಲ್ಲರಿಗೂ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಧ್ರುವ ಜೊತೆ ಅವರ ಅಪ್ಪ ಅಮ್ಮ ಇದ್ದರು ಹಾಗಾಗಿ ಅವರಿಬ್ಬರಿಗೂ ಟೆಸ್ಟ್ ಮಾಡಿಸಬೇಕು, ಮೇಘನಾ ರಾಜ್ ಅವರು ತಂದೆ ತಾಯಿ ಮನೆಯಲ್ಲಿ ಇರುವುದರಿಂದ ಅವರಿಗೆ ಏನು ಸಮಸ್ಯೆ ಇಲ್ಲ ಎನ್ನಲಾಗಿದೆ. ಧ್ರುವ ಪ್ರೇರಣ ಜೊತೆ ಬೇರೆ ಯಾರೆಲ್ಲ ಸಂಪರ್ಕದಲ್ಲಿ ಇದ್ದರು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

Trending

To Top