(video)ನಾನು ಯಾವ ನನ್ನ ಮಗನಿಗೂ ಕ್ಷಮೆ ಕೇಳಲ್ಲ ಎಂದು ಖಡಕ್ ಆಗಿ ಮಾತಾಡಿದ ಪ್ರೇಮ್! ವಿಡಿಯೋ ನೋಡಿ

prem
prem

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಿರ್ದೇಶಕ ಪ್ರೇಮ್ ಅವರ ದಿ ವಿಲನ್ ಚಿತ್ರ ಎಲ್ಲೆಡೆ ಬಿಡುಗಡೆ ಆಗಿ ಬಹಳ ಸಡ್ಡು ಮಾಡಿತ್ತು. ಆದರೆ ಚಿತ್ರ ಹೇಳಿಕೊಳ್ಳುವಷ್ಟು ಯೆಶಸನ್ನು ತಂದಿರಲಿಲ್ಲ. ಅದೇ ಸಮಯದಲ್ಲಿ ಮತ್ತೊಬ್ಬ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಅವರು ಪ್ರೇಮ್ ವಿರುದ್ಧ ದೂರನ್ನು ಕೊಟ್ಟಿದ್ದರು. ಸುಮಾರು 10 ವರ್ಷಗಳ ಹಿಂದೆ ಕನಕಪುರ ಶ್ರೀನಿವಾಸ್ ಅವರು ಪ್ರೇಮ್ ಅವರಿಗೆ ಒಂದು ಸಿನಿಮಾ ಮಾಡಲು ಸುಮಾರು 10 ಲಕ್ಷ ಕೊಟ್ಟಿದ್ದರಂತೆ, ಆದರೆ ಪ್ರೇಮ್ ಅವರು ಈ ದುಡ್ಡನ್ನು ವಾಪಾಸ್ ಕೊಡುತ್ತಿಲ್ಲ ಹಾಗು ಸಿನಿಮಾ ನು ಮಾಡಿಲ್ಲ ಎಂದು ಕನಕಪುರ ಶ್ರೀನಿವಾಸ್ ಅವರ ಆರೋಪ. ಈ ಬಗ್ಗೆ ಮಾತಾಡಬೇಕಾದ್ರೆ ಪ್ರೇಮ್ ಅವರು “ನಾನು ಯಾರಿಗೆ ಕ್ಷಮೆ ಕೇಳುವುದಿಲ್ಲ” ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಇತ್ತೀಚಿಗೆ ಕನಕಪುರ ಶ್ರೀನಿವಾಸ್ ಅವರು ಜೋಗಿ ಪ್ರೇಮ್ ವಿರುದ್ಧ ಖಡಕ್ ಆಗಿ ಗರಂ ಆಗಿ ಮಾತಾಡಿದ್ದರು. ಪ್ರೇಮ್ ಅವರ ಮನೆ ಹತ್ತಿರ ಹೋದರು ನಮಗೆ ಮರ್ಯಾದೆ ಕೊಡುವುದಿಲ್ಲ, ಮನೆ ಇಂದ ಆಚೆ ಓಡಿಸುತ್ತಾರೆ ಎಂದೆಲ್ಲ ಹೇಳಿದ್ದರು. ಇದಲ್ಲದೆ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಅವರು ಮೀಡಿಯಾಗಳಲ್ಲಿ ಹೋಗಿ ಕೂತುಕೊಂಡು ಪ್ರೇಮ್ ವಿರುದ್ಧ ಆರೋಪ ಮಾಡಿದ್ದರು. “ಜೋಗಿ ಪ್ರೇಮ್ ಅಲ್ಲ ಟೋಪಿ ಪ್ರೇಮ್” ಎಂದೆಲ್ಲ ಹೇಳಿದ್ದರು. ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಪ್ರೇಮ್ ವಿರುದ್ಧ ಹೇಗೆ ಮಾತಾಡಿದ್ದಾರೆ ಎಂದು ಈ ಕೆಳಗಿನ ವಿಡಿಯೋ ನೋಡಿರಿ

ಈಗ ನಿರ್ದೇಶಕ ಪ್ರೇಮ್ ಅವರು ಹೇಳುವ ಪ್ರಕಾರ ” ನಾನು 9 ಲಕ್ಷ ಅವರ ಹತ್ತಿರ ಇಸ್ಕೊಂಡಿದ್ದು ನಿಜ, ಆದರೆ ನಾನು 5 ಲಕ್ಷ ಅವರಿಗೆ ವಾಪಸ್ ಕೊಟ್ಟಿದ್ದೇನೆ, ಅದಲ್ಲದೆ ಅವರು ಕಥೆ ಮಾಡಿ ಅಂತ ಹೇಳಿ ಸುಮಾರು 2 ವರ್ಷ ಆದಮೇಲೆ ಬಂದರೆ, ನಾನು ಏನ್ ಮಾಡಬೇಕು, ನನಗು ಹುಡುಗರಿಗೆ ಸಂಬಳ ಕೊಡಬೇಕು” ಎಂದು ಪ್ರೇಮ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಇದಲ್ಲದೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

Previous articleಬಿಗ್ ಬಾಸ್ ಸೀಸನ್ 6 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಿರುವ ಜೀವಿತ! ಎಸ್ಕ್ಲ್ಯೂಸಿವ್ ಸುದ್ದಿ
Next article(video)ಜೋಗಿ ಪ್ರೇಮ್ ನನ್ನ ದುಡ್ಡನ್ನು ತಿಂದಿದ್ದಾನೆ! ನನ್ನ ದುಡ್ಡಲ್ಲಿ ಮಜಾ ಮಾಡಿದ್ದಾನೆ, ಥು ಎಂದು ಬೈದಿದ್ದಾರೆ