News

(video)ಯಾರೀ ಆತುರಗೆಟ್ಟ ಆಂಜನೇಯ, ಎಂದು ಪ್ರಥಮ್ ಗೆ ಹೇಳಿದ ಶಂಕರ್ ಅಶ್ವತ್! ಯಾಕೆ ಗೊತ್ತ, ವಿಡಿಯೋ ನೋಡಿ

pratham

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಕನ್ನಡದ ಲೆಜೆಂಡ್ ನಟ ಚಾಮಯ್ಯ ಮೇಷ್ಟ್ರು ಅಶ್ವತ್ ಅವರ ಪುತ್ರ ಶಂಕರ್ ಅಶ್ವತ್ ಅವರು ಫಸ್ಟ್ ನ್ಯೂಸ್ ಜೊತೆ ಮಾತಾಡುವಾಗ ತಾವು ಅನುಭವಿಸದ ಕಷ್ಟಗಳ ಬಗ್ಗೆ, ತಮಗೆ ಯಾರಾರು ಸಹಾಯ ಮಾಡಿದ್ರು, ತಮ್ಮ ಜೀವನ ಹೇಗೆ ಸಾಗುತ್ತಿದೆ ಎಂದು ಅದರ ಬಗ್ಗೆ ಮಾತಾಡಿದ್ದರು. ಇದಲ್ಲದೆ ಶಂಕರ್ ಅಶ್ವತ್ ಅವರು ಕನ್ನಡದ ಒಳ್ಳೆ ಹುಡ್ಗ ಪ್ರಥಮ್ ಬಗ್ಗೆ “ಯಾರೀ ಆತುರಗೆಟ್ಟ ಆಂಜನೇಯ” ಎಂದು ಹೇಳಿದ್ದು ಯಾಕೆ ಗೊತ್ತ! . ನಿಮಗೆಲ್ಲ ಗೊತ್ತಿರೋ ಹಾಗೆ ಪ್ರಥಮ್ ಅವರು ಬಿಗ್ ಬಾಸ್ ಕನ್ನಡದ ವಿನ್ನರ್ ಆಗಿದ್ದರು. ಇದಲ್ಲದೆ ಶಂಕರ್ ಅಶ್ವತ್ ಅವರಿಗೆ ಸ್ವಲ್ಪ ಸಹಾಯ ಕೂಡ ಮಾಡಿದ್ದ ಸುದ್ದಿ ಬಂದಿತ್ತು. ಯಾಕೆ ಶಂಕರ್ ಅವರು ಪ್ರಥಮ್ ಮೇಲೆ ಹೀಗೆ ಹೇಳಿದ್ದಾರೆ! ಈ ಕೆಳಗಿನ ವಿಡಿಯೋ
ನೋಡಲೇ ಬೇಕು Karaganahalli Subbaraya ಅಶ್ವಥನಾರಾಯಣ (KS ಅಶ್ವತ್) ಕನ್ನಡ ಚಿತ್ರ ರಂಗ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು. ಅಶ್ವಥ್ ಅವರು 1955 ರಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಶುರು ಮಾಡಿ ಸುಮಾರು 370 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. KS ಅಶ್ವತ್ ಅವರ ಮೊದಲ ಚಿತ್ರ Shivasharane Nambiyakka ಹಾಗು ಅವರ ಕೊನೆಯ ಚಿತ್ರ 2007 ರಲ್ಲಿ ತೆರೆಕಂಡ ಭೂಪತಿ. ಇದಾದ ನಂತರ ತಮ್ಮ ಅರೋಗ್ಯ ಸಮಸ್ಯೆ ಇಂದ KS ಅಶ್ವತ್ ಅವರು ಸಿನೆಮಾಗಳಲ್ಲಿ ಕಾಣಿಸಿ ಕೊಂಡಿರಲಿಲ್ಲ. KS ಅಶ್ವತ್ ಅವರು ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಎಂಬ ಪಾತ್ರದಿಂದ ಕರ್ನಾಟಕದ ಮನೆ ಮಾತಾಗಿದ್ದರು. 2010 ರಲ್ಲಿ ನಮ್ಮ ಚಾಮಯ್ಯ ಮೇಷ್ಟ್ರು ಅಶ್ವತ್ ಅವರು ವಿಧಿ ವಾಸರಾಗಿದ್ದರು. KS ಅಶ್ವತ್ ಅವರ ಪುತ್ರ ಶಂಕರ್ ಅಶ್ವತ್ ಅವರು ಕೂಡ ಬಹಳಷ್ಟು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶಂಕರ್ ಅಶ್ವತ್ ಅವರು ಸುಮಾರು 60 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಶಂಕರ್ ಅವರಿಗೆ ಈಗ 60 ವರ್ಷ ವಯಸ್ಸು,ಇಂತಹ ಸಂದರ್ಭ ದಲ್ಲಿ ಅವರಿಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆ ಆದವು. ಇತ್ತೀಚಿಗೆ ಸುಮಾರು 5 – 6 ವರ್ಷಗಳಿಂದ ಸಿನಿಮಾ ರಂಗದಲ್ಲಿ ಅವಕಾಶ ಸಿಗದೇ ಶಂಕರ್ ಅಶ್ವತ್ ಅವರು uber ಟ್ಯಾಕ್ಸಿ ಚಾಲಕ ನಾಗಿದ್ದಾರೆ. ಇದಲ್ಲದೆ ಲೆಜೆಂಡ್ KS ಅಶ್ವತ್ ಅವರ ಪುತ್ರ ಶಂಕರ್ ಅವರು ತಮ್ಮ ಜೀವನದಲ್ಲಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ತಮ್ಮ ತಂದೆ ತೀರಿಕೊಂಡ ಮೇಲೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸಮಸ್ಯೆ ಶಂಕರ್ ಅವರಿಗೆ ಬಂದಿತ್ತು. ಇವರ ಕರುಣಾ ಜನಕ ಕಥೆಯನ್ನು ಅವರ ಬಾಯಲ್ಲೇ ಕೇಳಿರಿ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ KS ಅಶ್ವತ್ ಅವರ ಪುತ್ರ ಶಂಕರ್ ಅಶ್ವತ್ ಅವರು ನಟ ಭಯಂಕರ ಎಂಬ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು ಒಂದು ವರ್ಷದ ಕೆಳಗೆ KS ಅಶ್ವಥ್ ಅವರ ಪುತ್ರ ಶಂಕರ್ ಅಶ್ವತ್ ಅವರು uber ಕಂಪನಿಯಲ್ಲಿ ಟ್ಯಾಕ್ಸಿ ಚಾಲಕರಿಗೆ ಕೆಲಸ ಮಾಡುತ್ತಿರುವ ವಿಷ್ಯ ಮಾಧ್ಯಮ ಗಳಲ್ಲಿ , ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿತ್ತು. ಶಂಕರ್ ಅಶ್ವತ್ ಅವರು pharmacy ಅಲ್ಲಿ ಡಿಪ್ಲೋಮ ವನ್ನು ಮಾಡಿದ್ದಾರೆ. ತಮ್ಮ ವಿದ್ಯಾಭಸ್ಯ ವನ್ನು ಮುಗಿಸಿದ ಮೇಲೆ ಶಂಕರ್ ಅಶ್ವತ್ ಅವರು ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ತಂದೆ KS ಅಶ್ವಥ್ ಇರುವಾಗ ಶಂಕರ್ ಅಶ್ವಥ್ ಅವರಿಗೆ ಅವಕಾಶಗಳ ಸುರಿಮಳೆ ಇತ್ತು. KS ಅಶ್ವಥ್ ಅವರು ತೀರಿಕೊಂಡ ಮೇಲೆ ಚಿತ್ರ ರಂಗದಲ್ಲಿ ಅವಕಾಶವು ಗಳು ಕೂಡ ನಿಂತೇ ಹೋಯಿತು.
ಇದಲ್ಲದೆ ಫಸ್ಟ್ ನ್ಯೂಸ್ ಮಾಧ್ಯಮದವರ ಜೊತೆ ಮಾತಾಡುವಾಗ ಶಂಕರ್ ಅವರು “ನಾನು ಬಹಳ ಅಧೃಷ್ಠವಂತ ಹಾಗು ನಾನು ಬಹಳ ನತದೃಷ್ಟವಂತ” ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ತಮ್ಮನ್ನು ತಾವು ಬಹಳ unlucky ಎಂದು ಹೇಳಿದ್ದಾರೆ. ಶಂಕರ್ ಅವರು ಮೊಟ್ಟ ಮೊದಲು ಬಂದ ಅಮಿತಾಭ್ ಬಚ್ಚನ್ ಅವರ koun banega karodpati ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ಕಳೆದ ವರ್ಷ IPL ಜಾಹಿರಾತು ಒಂದರಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ಜೊತೆ ಕೂಡ ನಟಿಸಿದ್ದರು. ಶಂಕರ್ ಅಶ್ವತ್ ಅವರು ತಮ್ಮ ಜೀವದಲ್ಲಿ ಬಹಳ ಕಷ್ಟ ಪಟ್ಟಿದ್ದಾರೆ. ಈಗೀಗ ಕೆಲವೊಂದು ಕನ್ನಡ ಚಿತ್ರ ಗಳಲ್ಲಿ ಶಂಕರ್ ಅವರು ಕಾಣಿಸಿ ಕೊಳ್ಳುತ್ತಿದ್ದಾರೆ. ಶಂಕರ್ ಅಶ್ವತ್ ಅವರಿಗೆ ಒಳ್ಳೆದಾಗಲಿ.

Trending

To Top