Cinema

ಪ್ರಭಾಸ್ ಅವರಿಗೆ ಸಿನಿಮಾ ನಿರ್ದೇಶನ ಮಾಡ್ತಾರಂತೆ ಕೆ ಜಿ ಫ್ ಖ್ಯಾತಿಯ ಪ್ರಶಾಂತ್ ನೀಲ್!

ಭಾರತ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದ ಚಿತ್ರ ಕೆಜಿಎಫ್ ಚಾಪ್ಟರ್ 1. ಸ್ಯಾಂಡಲ್ ವುಡ್ ಪ್ರತಿಭೆಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸಿನ ಕೂಸು ಈ ಸಿನಿಮಾ. ಇದೊಂದು ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರೂ, ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹಿಂದೆಂದೂ ಕಂಡಿರದ ಕೇಳಿರದ ಕುತೂಹಲಭರಿತ ಕಥಾ ಹಂದರ, ಅದ್ಭುತವಾದ ಮೇಕಿಂಗ್, ರೋಮಾಂಚನ ಗೊಳಿಸುವಂತಹ ಬಿಜಿಎಂ ಗಳು, ಯಶ್, ಹಾಗೂ ವಿಲನ್ ಗಳ ಅತ್ಯದ್ಭುತ ಅಭಿನಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು ಕೆಜಿಎಫ್ ಚಾಪ್ಟರ್ 1.
2018 ರ ಸಾಲಿನ ಬಹುತೇಕ ಎಲ್ಲಾ ಅವಾರ್ಡ್ ಗಳನ್ನು ಬಾಚಿಕೊಂಡಿತು. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಕೂಡ ತೆರೆಕಂಡ ಕೆಜಿಎಫ್, ಎಲ್ಲಾ ಭಾಷೆಗಳನ್ನು ಯಶಸ್ಸು ಕಂಡಿತು. ಕೆಜಿಎಎಫ್ ಚಾಪ್ಟರ್ 1 ನ ಮುಂದುವರೆದ ಭಾಗ, ಕೆಜಿಎಫ್ ಚಾಪ್ಟರ್ 2 ನಂತರ ಪ್ರಶಾಂತ್ ನೀಲ್ ಯಾವ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಕಳೆದ ಕೆಲವು ದಿನಗಳ ಹಿಂದೆ, ಕೆಜಿಎಫ್2 ನಂತರ ಜ್ಯೂನಿಯರ್ ಎನ್. ಟಿ.ಆರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಜ್ಯೂನಿಯರ್ ಎನ್. ಟಿ.ಆರ್ ಅವರಿಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುವುದೇನೋ ಖಚಿತ. ಪ್ರಶಾಂತ್ ನೀಲ್ ಮತ್ತು ಎನ್.ಟಿ.ಆರ್ ಕಾಂಬಿನೇಷನ್ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಿರ್ಮಾಣ ಮಾಡಲಿದೆ. ಈ ಸಿನಿಮಾಗೆ ಮಿಸೈಲ್ ಅಥವಾ ನ್ಯೂಕ್ಲಿಯರ್ ಎಂದು ಹೆಸರಿಡಲಾಗುತ್ತದೆ.
ಇದರ ಜೊತೆ, ಬಾಹುಬಲಿ ನಟ ಪ್ರಭಾಸ್ ಅವರಿಗೂ ಪ್ರಶಾಂತ್ ಜೆಎಲ್ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಧ್ಯಕ್ಕೆ ಪ್ರಭಾಸ್ ಅವರು ರಾಧೇಶ್ಯಾಮ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ, ಇದಾದ ಬಳಿಕ ಬಾಲಿವುಡ್ ನಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ಪ್ರಭಾಸ್ ಅವರದ್ದು. ಪ್ರಭಾಸ್ ನಟಿಸಲಿರುವ ಹಿಂದಿ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರಾ ? ಅಥವಾ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಯಾವುದು ? ಎಂಬುದನ್ನು ತಿಳಿಯಲು ಇನ್ನು ಕೆಲವು ದಿನ ಕಾಯಬೇಕು.

Trending

To Top