Film News

ಪ್ರಶಾಂತ್ ಸಂಬರ್ಗಿ ಗರಂ ಆಗಿದ್ದು ಏಕೆ?

ಬೆಂಗಳೂರು: ಸೂಪರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8 ಎರಡನೇ ದಿನ ಮುಕ್ತಾಯವಾಗಿದ್ದು, ಕ್ಯಾಪ್ಟನ್ ವಿರುದ್ದ ಪ್ರಶಾಂತ್ ಸಂಬರ್ಗಿ ಗರಂ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಿನೆಮಾ ಶೂಟಿಂಗ್ ಟಾಸ್ಕ್ ನಡೆಯುತ್ತಿರುತ್ತದೆ. ಇದರಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯಾ ಡ್ಯುಯೆಟ್ ಹಾಡುತ್ತಿದ್ದಾಗ ಮನೆಯ ಕ್ಯಾಪ್ಟನ್ ಬ್ರೋ ಗೌಡ ಶೂಟ್ ಮಾಡುತ್ತಿರುತ್ತಾರೆ. ಆದರೆ ಇವರಿಬ್ಬರ ಸಾಂಗ್ ಗೆ ಕ್ಯಾಪ್ಟನ್ ಆದ ಬ್ರೋ ಗೌಡ ಅಡ್ಡಿಪಡಿಸಿದ್ದಾರೆ ಎಂದು ಪ್ರಶಾಂತ್ ಸಂಬರ್ಗಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೇ ಇವರಿಬ್ಬರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂರೇ ದಿನಕ್ಕೆ ವೈಮನಸ್ಸು ಮೂಡಿದೆ.

ಕಳೆದ ದಿನ ನಾಮಿನೇಷನ್ ಆಗಿದ್ದ ಕೆಲವು ಸ್ಪರ್ಧಿಗಳು ನಾಮಿನೇಷನ್ ತೂಗುಗತ್ತಿಯನ್ನು ಬೇರೆಯವರಿಗೆ ವರ್ಗಾಯಿಸಿದ್ದಾರೆ. ಆದರೆ ನಾಮಿನೇಷನ್ ಆದವರೂ ಮಾತ್ರ ತಲೆಕೆಡಿಸಿಕೊಂಡಿದ್ದಾರೆ. ಇನ್ನೂ ಕ್ಯಾಪ್ಟನ್ ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರ್ಗಿ ಇವರಿಬ್ಬರ ನಡುವೆ ನಡೆದ ಘಟನೆಯಾದರೂ ಏನು ಎಂಬುದು ದಿನದ ಪೂರ್ಣ ಎಪಿಸೋಡ್ ನಿಂದ ತಿಳಿಯಲಿದೆ.

ಎಂದಿನಂತೆ ಎರಡನೇ ದಿನವೂ ಸಹ ಬಿಗ್ ಬಾಸ್ ಮನೆಯಲ್ಲಿ ನಗು, ಅಳು, ಸಂತೋಷ, ಕುಣಿತ, ವಾಕ್ಸಮರ ಇದ್ದವು. ಇನ್ನೂ ಕ್ಯಾಪ್ಟನ್ ಬ್ರೋ ಗೌಡ ಪ್ರಶಾಂತ್ ಸಂಬರ್ಗಿ ವಿರುದ್ದ ಸ್ವಲ್ಪ ಗಾಟಾಗಿಯೇ ಉತ್ತರ ನೀಡಿದ್ದಾರೆ. ನಾನು ಕ್ಯಾಪ್ಟನ್ ಎಂಬ ದರ್ಪದಿಂದ ಮಾತನಾಡುತ್ತಿಲ್ಲ. ಎಲ್ಲರೂ ತಮಾಷೆಯಾಗಿ ಮಾಡುತ್ತಿದ್ವಿ ಅಷ್ಟೆ ಎಂದು ಸಂಬರ್ಗಿ ವಿರುದ್ದ ಮಾತನಾಡಿದ್ದಾರೆ.

 

 

 

 

 

 

 

 

 

 

 

 

ಪೊಟೋ ಕೃಪೆ: ಕಲರ್‍ಸ್ ಕನ್ನಡ

Trending

To Top