ಬೆಂಗಳೂರು: ಪ್ಯಾನ್ ಇಂಡಿಯಾದಡಿ ನಿರ್ಮಾಣವಾಗಲಿರುವ ಹೊಂಬಾಳೆ ಫಿಲಂ ಬ್ಯಾನರ್ನ ಸಲಾರ್ ಚಿತ್ರದ ಪರ-ವಿರೋಧದ ಚರ್ಚೆಗೆ ಹಾಗೂ ಟೀಕೆಗಳ ಕುರಿತಂತೆ ಕೊನೆಗೂ ಪ್ರಶಾಂತ್ ನೀಲ್ ಮೌನ ಮುರಿದಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನೆಮಾ ಕುರಿತು ಪ್ರಕಟಿಸಿದಾಗಿನಿಂದಲೂ ಹೀರೋ ಆಯ್ಕೆ ಹಾಗೂ ಚಿತ್ರದ ಶಿರ್ಷಿಕೆಯ ವಿಚಾರದ ಕುರಿತಂತೆ ಟ್ರೋಲ್ ಮಾಡಲು ಶುರು ಮಾಡಿದ್ದರು. ಈ ಬಗ್ಗೆ ಇಲ್ಲಿಯವರೆಗೂ ಮೌನ ತಾಳಿದ್ದ ಪ್ರಶಾಂತ್ ಕೊನೆಗೂ ಮೌನ ಮುರಿದಿದ್ದು, ಸಲಾರ್ ಚಿತ್ರದ ಶೀರ್ಷಿಕೆ ಹಾಗೂ ನಾಯಕ ಆಯ್ಕೆ ಮಾಡಲು ಕಾರಣಗಳನ್ನು ಮುಂದಿಟ್ಟಿದ್ದಾರೆ.
ಸಲಾರ್ ಚಿತ್ರದಲ್ಲಿ ಮುಗ್ಧತೆ ಕೂಡಿದ ನಾಯಕನ ಅವಶ್ಯಕತೆಯಿತ್ತು, ಇದರ ಭಾಗವಾಗಿ ಇತರೆ ನಟರಿಗೆ ಹೋಲಿಕೆ ಮಾಡಿದರೇ ಪ್ರಭಾಸ್ ಮುಗ್ದತೆಯನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಪ್ರಭಾಸ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಖಾಸಗಿ ಸುದ್ದಿಸಂಸ್ಥೆಯೊಂದರ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಸಲಾರ್ ಚಿತ್ರದ ಶೀರ್ಷಿಕೆಯ ಕುರಿತು ಸಲಾರ್ ಎಂಬ ಪದದ ಕುರಿತು ಅನೇಕ ಅರ್ಥಗಳಿವೆ. ಅದು ಆಡುಮಾತುಗಳಿಂದ ಬಂದಂತಹ ಪದ. ರಾಜನೊಬ್ಬನ ಬಲಗೈ ಬಂಟ ಎಂದು ಹೇಳಬಹುದಾಗಿದ್ದು, ಈ ಚಿತ್ರದಲ್ಲಿ ದಂಡನಾಯಕನಾಗಿ ಸಲಾರ್ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಶಿರ್ಷಿಕೆಯ ಬಗೆಗಿನ ಗೊಂದಲವನ್ನು ನಿವಾರಿಸಿದ್ದಾರೆ.
