Film News

ಡಿ.30 ರಂದು ಚೆನೈನಲ್ಲಿ ಸಲಾರ್ ಚಿತ್ರಕ್ಕೆ ಆಡಿಷನ್

ಬೆಂಗಳೂರು: ಪೋಸ್ಟರ್ ಮೂಲಕವೇ ಭಾರಿ ಕ್ರೇಜ್ ಹುಟ್ಟಿಸಿರುವ ಸಲಾರ್ ಚಿತ್ರದಲ್ಲಿ ನಿಮಗೆ ನಟಿಸಲು ಆಸೆಯಿದ್ದರೇ, ಡಿ.30 ಚೆನೈನಲ್ಲಿ ನಡೆಯುವ ಆಡಿಷನ್ ನಲ್ಲಿ ಪಾಲ್ಗೊಳ್ಳುವಂತೆ ಚಿತ್ರತಂಡ ಆಹ್ವಾನ ನೀಡಿದೆ.

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬರಲಿರುವ ಸಲಾರ್ ಸಿನೆಮಾ ಈಗಾಗಲೇ ದೇಶದಾದ್ಯಂತ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಜೊತೆಗೆ ಸಲಾರ್ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ, ಚಿತ್ರದ ನಾಯಕ ಪ್ರಭಾಸ್ ಜೊತೆಗೆ ನಾಯಕಿ ಯಾರು ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಪ್ರಸ್ತುತ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಲು ಪ್ರಶಾಂತ್ ನೀಲ್ ಹಾಗೂ ಚಿತ್ರ ತಂಡ ಅವಕಾಶ ನೀಡಿದ್ದು, ಈ ಹಿಂದೆ ಹೈದರಾಬಾದ್ ನಲ್ಲಿ ಸಹ ಆಡಿಷನ್ ನಡೆಸಿತ್ತು. ಇದೀಗ ಚೆನ್ನೈನಲ್ಲಿ ಕಾಸ್ಟಿಂಗ್ ಕಾಲ್ ಕರೆದಿದ್ದು, ಚೆನೈನ ಶೋಭ ಕಲ್ಯಾಣ ಮಂಟಪಂನಲ್ಲಿ ಆಡಿಷನ್ ನಡೆಯಲಿದೆ. ಇನ್ನೂ ಡಿಸೆಂಬರ್ 30 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು, ಆಸಕ್ತರು ಒಂದು ನಿಮಿಷದ ವಿಡಿಯೋವನ್ನು ಯಾವುದೇ ಭಾಷೆಯಲ್ಲಾದರು ಮಾಡಿ ಕಳುಹಿಸಬೇಕು. ಮುಖ್ಯವಾಗಿ ಈ ಆಡಿಷನ್ ನಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶವಿದ್ದು, ಮಕ್ಕಳಾದರೇ 8 ರಿಂದ 12 ವರ್ಷದೊಳಗಿನೆ ಮಕ್ಕಳು ಮಾತ್ರ ಭಾಗವಹಿಸಬೇಕೆಂದು ಟ್ವಿಟರ್ ಮೂಲಕ ಪ್ರಕಟಣೆ ನೀಡಿದ್ದಾರೆ.

ಈ ಹಿಂದೆ ಹೈದರಾಬಾದ್ ನಲ್ಲಿ ನಡೆದ ಆಡಿಷನ್ ನಲ್ಲಿ ಜನಸಾಗರವೇ ಸೇರಿತ್ತು. ಪ್ರಸ್ತುತ ಚೆನೈನಲ್ಲಿ ನಡೆಯಲಿರುವ ಆಡಿಷನ್ ನಲ್ಲಿಯೂ ಕೂಡ ಅಪಾರ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಇನ್ನೂ ಚೆನೈನಲ್ಲಿ ಆಡಿಷನ್ ಮುಕ್ತಾಯವಾದ ನಂತರ ಬೆಂಗಳೂರಿನತ್ತ ಆಡಿಷನ್‌ಗಾಗಿ ತಂಡ ಬರಲಿದ್ದು, ದಿನಾಂಕ ಘೋಷಣೆಯಾಗಿಲ್ಲ.

 

Trending

To Top