Saturday, September 30, 2023
HomeFilm Newsಜೂನಿಯರ್ ಎನ್.ಟಿ.ಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನೆಮಾದ ಪೋಸ್ಟರ್ ರಿಲೀಸ್.…….

ಜೂನಿಯರ್ ಎನ್.ಟಿ.ಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನೆಮಾದ ಪೋಸ್ಟರ್ ರಿಲೀಸ್.…….

ಇಂದು (ಮೇ.20) ಜೂನಿಯರ್ ಎನ್.ಟಿ.ಆರ್ ರವರಿಗೆ ಹುಟ್ಟು ಹಬ್ಬದ ಸಂಭ್ರಮ. ಎನ್.ಟಿ.ಆರ್ ರವರ ಕುಟುಂಬಸ್ಥರು, ಅಭಿಮಾನಿಗಳು ಶುಭಾಷಯಗಳನ್ನು ಹರಿಸುತ್ತಿದ್ದಾರೆ. ಇಂತಹ ಶುಭ ಸಮಯದಲ್ಲಿ ಬಹುನಿರೀಕ್ಷಿತ ಎನ್.ಟಿ.ಆರ್‍ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನೆಮಾದ ಪೊಸ್ಟರ್‍ ಒಂದು ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಪೋಸ್ಟರ್‍ ನಲ್ಲಿನ ಎನ್.ಟಿ.ಆರ್‍ ರಗಡ್ ಲುಕ್ ಗೆ ಮಾಸ್ ರಸಿಕರು ಫಿದಾ ಹಾಕಿದ್ದಾರೆ.

ಈ ಹಿಂದೆ ಪ್ರಶಾಂತ್ ನೀಲ್ ಹಾಗೂ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಸಿನೆಮಾದ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಈ ಕುರಿತು ಪ್ರಶಾಂತ್ ನೀಲ್ ಸಹ ಹೇಳಿದ್ದರು. ಸದ್ಯ ಸಲಾರ್‍ ಸಿನೆಮಾ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಬಿಡುವು ಸಿಕ್ಕಾಗ ಎನ್.ಟಿ.ಆರ್‍ ಸಿನೆಮಾಗಾಗಿ ಕಾಸ್ಟಿಂಗ್ ಹಾಗೂ ಪ್ರೀಪ್ರೊಡಕ್ಷನ್ ಕೆಲಸಗಳಲ್ಲೂ ಸಹ ಬ್ಯುಸಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಈ ಕ್ರೇಜಿ ಕಾಂಬಿನೇಷನ್ ನಲ್ಲಿ ಬರಲಿರುವ ಸಿನೆಮಾ ಬಗ್ಗೆ ಎಲ್ಲರೂ ಬೆರಗಾಗುವಂತಹ ಪೋಸ್ಟರ್‍ ಅಪ್ಡೇಟ್ ನೀಡಿದರು. ಯಂಗ್ ಟೈಗರ್‍ ಎನ್.ಟಿ.ಆರ್‍ ಹುಟ್ಟುಹಬ್ಬದ ನಿಮಿತ್ತ ಪ್ರಶಾಂತ್ ನೀಲ್ NTR31 ಸಿನೆಮಾದ ಪೋಸ್ಟರ್‍ ಹಂಚಿಕೊಳ್ಳುವ ಮೂಲಕ ಗಿಫ್ಟ್ ಕೊಟ್ಟಿದ್ದಾರೆ.

ಇನ್ನೂ ಬಿಡುಗಡೆಯಾದ NTR31 ಸಿನೆಮಾದ ಪೋಸ್ಟರ್‍ ನಲ್ಲಿ ಡಾರ್ಕ್ ಕಲರ್‍ ಬ್ಯಾಂಕ್‌ಗ್ರೌಂಡ್ ನಲ್ಲಿ ಎನ್.ಟಿ.ಆರ್‍ ರಗಡ್ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‍ ಜೊತೆಗೆ ರಕ್ತದಲ್ಲಿ ತೊಯ್ದ ಚರಿತ್ರೆಯನ್ನು ಈ ಭೂಮಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅವನ ನೆಲ, ಅವನ ಚರಿತ್ರೆ ಅಷ್ಟೆ, ಅದು ಅವರನ ರಕ್ತ ಅಲ್ಲ ಎಂಬ ಡೈಲಾಗ್ ಸಹ ಹೊರಬಂದಿದೆ. ಸದ್ಯ ಈ ಡೈಲಾಗ್ ಮೂಲಕವೇ ಸಿನೆಮಾ ಯಾವ ರೇಂಜ್ ನಲ್ಲಿ ಇರಬಹುದು ಎಷ್ಟರ ಮಟ್ಟಿಗೆ ಮಾಸ್ ಆಗಿರಬಹುದು ಎಂಬ ಕುತೂಹಲ ಸಹ ಅಭಿಮಾನಿಗಳಲ್ಲಿ ಮನೆ ಮಾಡಿದೆ.  ಸದ್ಯ ಈ ಸಿನೆಮಾ ಪೋಸ್ಟರ್‍ ಮಾತ್ರ ಸಖತ್ ವೈರಲ್ ಆಗುತ್ತಿದೆ.

https://twitter.com/prashanth_neel/status/1527539714885971969

ಕೆಜಿಎಫ್-1 ಸಿನೆಮಾ ಪೂರ್ಣಗೊಂಡಾಗಿನಿಂದಲೂ ಪ್ರಶಾಂತ್ ನೀಲ್ ಹಾಗೂ ಜೂ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಸಿನೆಮಾ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ ಬಿಡುಗಡೆಯಾದ ಪೋಸ್ಟರ್‍ ಈ ಕ್ರೇಜಿ ಕಾಂಬಿನೇಷನ್ ನಲ್ಲಿ ಸಿನೆಮಾ ಬರುವುದು ಪಕ್ಕಾ ಆಗಿದೆ. ಇನ್ನೂ ಪ್ರಶಾಂತ್ ಸಲಾರ್‍ ಸಿನೆಮಾ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಲಾರ್‍ ಮುಗಿದ ಕೂಡಲೇ NTR31 ಸಿನೆಮಾದ ಕೆಲಸಗಳು ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಸ್ವತಃ ಪ್ರಶಾಂತ್ ನೀಲ್ ಎನ್.ಟಿ.ಆರ್‍ ರವರ ಬಿಗ್ ಫ್ಯಾನ್ ಆಗಿದ್ದು ಅವರಿಗಾಗಿ ಪವರ್‍ ಪುಲ್ ಸಿನೆಮಾ ನಿರ್ದೇಶನ ಮಾಡಲು ನೀಲ್ ಸಿದ್ದವಾಗುತ್ತಿದ್ದಾರೆ. ಇನ್ನೂ ನಿನ್ನೆಯಷ್ಟೆ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ನಿರ್ದೇಶನದ ಸಿನೆಮಾ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು. ಆ ಪೋಸ್ಟರ್‍ ಸಹ ಮಾಸ್ ಅಭಿಮಾನಿಗಳನ್ನು ಮೆಚ್ಚಿಸಿದೆ.

You May Like