ಕರ್ನಾಟಕದ ಹೆಮ್ಮೆಯ ನಟನಾ ಪ್ರತಿಭೆ ನಟ ಪ್ರಕಾಶ್ ರಾಜ್. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿ ತಮ್ಮ ನಟನಾ ಚಾತುರ್ಯತೆಯನ್ನು ಮೆರೆದ ನಟ. ಪ್ರಕಾಶ್ ರಾಜ್ ಅವರು ನಟನೆಯಲ್ಲಿ ಮಾತ್ರವಲ್ಲದೆ ಸಮಾಜಸೇವೆಯಲ್ಲಿ ಸಹ ತಮ್ಮನ್ನು ತಾವು ಅತಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಲಾ’ಕ್ ಡೌ’ನ್ ಸಮಯದಲ್ಲಿ ತಮ್ಮ ಕೆಲಸಗಾರರೆಲ್ಲರಿಗೂ ಮೂರು ತಿಂಗಳ ಸಂಬಳವನ್ನು ಮೊದಲೇ ನೀಡಿದ್ದರು. ಜೊತೆಗೆ, ತಾವು ವಾಸ ಮಾಡುತ್ತಿರುವ ಪ್ರದೇಶದ ಸುತ್ತ ಮುತ್ತ ಇರುವ ಹಳ್ಳಿ ಜನರಿಗೆ, ಬಡವರಿಗೆ ನಿರ್ಗತಿಕರಿಗೆ ಲಾ’ಕ್ ಡೌ’ನ್ ಸಮಯದಲ್ಲಿ ಆಹಾರ ಒದಗಿಸಿದ್ದರು. ಬಡವರಿಗೆ ಸಹಾಯ ಮಾಡಲು ತಾವು ಸದಾ ಸಿದ್ಧ, ತಮ್ಮ ಆ’ಸ್ತಿಯೆಲ್ಲಾ ಖಾ’ಲಿಯಾದರೂ ಚಿಂತೆ ಇಲ್ಲ ಎಂದಿದ್ದರು.
ಇದೀಗ ಕಷ್ಟದಲ್ಲಿದ್ದ ವಿದ್ಯಾರ್ಥಿನಿಯೊಬ್ಬರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ, ಆ ಕುಟುಂಬದ ಬದುಕಿಗೆ ಬೆಳಕಾಗಿದ್ದಾರೆ ಪ್ರಕಾಶ್ ರಾಜ್. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ವಿದ್ಯಾರ್ಥಿನಿ ಟಿಗರಪಲ್ಲಿ ಸಿರಿಚಂದನ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಕಾಶ್ ರಾಜ್ ಸಹಾಯ ಮಾಡಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇತ್ತೀಚೆಗೆ ಪದವಿ ಮುಗಿಸಿರುವ ಸಿರಿಚಂದನ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಗರದ ಪ್ರತಿಷ್ಠಿತ ಸಾಲ್ಫೋರ್ಡ್ ಯೂನಿವರ್ಸಿಟಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆದಿದ್ದಾರೆ. ಆದರೆ ಅವರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ಅಲ್ಲಿಗೆ ತೆರಳಿ ವಿದ್ಯಾಭ್ಯಾಸ ಮುಂದುವರೆಸಲು ಕಷ್ಟವಾಗಿತ್ತು. ಈ ವಿಚಾರ ನಟ ಪ್ರಕಾಶ್ ರೈ ಅವರಿಗೆ ತಲುಪಿದ ಕೂಡಲೇ, ಅವರು ಸಿರಿಚಂದನರಿಗೆ ಸಹಾಯ ಮಾಡಿದ್ದಾರೆ. ಆಕೆಯ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಹಣ ಹಾಗೂ ದೂರದ ದೇಶದಲ್ಲಿ ಆಕೆ ಜೀವನ ಸಾಗಿಸಲು ಬೇಕಾಗಿರುವ ವೆಚ್ಚವನ್ನು ಭರಿಸಿದ್ದಾರೆ.
ತಮಗೆ ಸಹಾಯ ಮಾಡಿದ ಪ್ರಕಾಶ್ ರಾಜ್ ರನ್ನು ಭೇಟಿ ಮಾಡಿರುವ ಸಿರಿಚಂದನ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರೆ. ಈ ಕುರಿತು ರಾಷ್ಟ್ರಿಯ ಮಾಧ್ಯಮಗಳ ಮುಂದೆ ಮಾತನಾಡಿರುವ ಸಿರಿಚಂದನ, 9 ವರ್ಷ ಇದ್ದಾಗಲೇ ನನ್ನ ತಂದೆ ತೀ’ರಿ’ಹೋದರು, ನಂತರ ಎಲ್ಲಾ ಜವಾಬ್ದಾರಿ ನನ್ನ ತಾ’ಯಿಯ ತೆಗೆದುಕೊಂಡರು. ಪದವಿ ನಂತರ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆ’ಸೆ ನನಗೆ ಇತ್ತು. ಆದರೆ ಅಷ್ಟೊಂದು ಹಣ ಭರಿಸಲು ನಮಗೆ ಸಾಧ್ಯವಿರಲಿಲ್ಲ. ಅದೇ ಸಮಯದಲ್ಲಿ ನನ್ನ ಸ್ನೇಹಿತೆಯೊಬ್ಬರ ಮೂಲಕ ಈ ವಿಚಾರ ನಟ ಪ್ರಕಾಶ್ ರಾಜ್ ಅವರನ್ನು ತಲುಪಿತು ನಂತರ ನನಗೆ ಸಹಾಯ ಮಾಡಲು ಮುಂದೆ ಬಂದರು. ನನ್ನ ವಿದ್ಯಾಭ್ಯಾಸದ ವೆಚ್ಚ ಹಾಗೂ ದಿನನಿತ್ಯದ ವೆಚ್ಚವನ್ನು ಸಹ ಪ್ರಕಾಶ್ ರಾಜ್ ಅವರೇ ಭರಿಸಿದ್ದಾರೆ, ನಾನು ಯಾವಾಗಲೂ ಅವರಿಗೆ ಚಿರಋಣಿಯಾಗಿರುತ್ತೇನೆ. ಇತರರಿಗೆ ಸಹಾಯ ಮಾಡುವ ಬಗ್ಗೆ ಅವರು ನನಗೆ ಕಳಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ ಸಿರಿಚಂದನ.
