Film News

ಪ್ರಜ್ವಲ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಬಿಡುಗಡೆ ದಿನಾಂಕ ಘೋಷಣೆ

ಬೆಂಗಳೂರು: ಕೊರೋನಾ ಲಾಕ್‌ಡೌನ್ ಸಡಲಿಕೆ ನಂತರ ಚಿತ್ರಮಂದಿರಗಳಲ್ಲಿ ಶೇ.೫೦ ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೂ, ಒಂದೊಂದೆ ಸಿನೆಮಾಗಳು ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಹಾದಿಯಲ್ಲಿ ಸ್ಯಾಂಡಲ್‌ವುಡ್‌ನ ಡೈನಾಮಿಕ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ.

ಸಂಕ್ರಾಂತಿ ಹಬ್ಬದ ಬಳಿಕ ಸಿನಿಪ್ರೇಕ್ಷರಿಗೆ ಸುಗ್ಗಿ ಪ್ರಾರಂಭವಾಗಿದೆ ಎನ್ನಲಾಗುತ್ತಿದೆ. ಫೆಬ್ರವರಿ ಮಾಹೆಯಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಸಿನಿಪ್ರೇಕ್ಷರು ಕುಣಿದು ಕುಪ್ಪಳಿಸಲಿದ್ದಾರೆ. ಬಹುನಿರೀಕ್ಷಿತ ಪೊಗರು ಚಿತ್ರ ಸಹ ಬಿಡುಗಡೆಯಾಗಲಿದೆ. ಇನ್ನೂ ಪ್ರಜ್ವಲ್ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರ ಫೆಬ್ರವರಿ ೫ ರಂದು ಬಿಡುಗಡೆಯಾಗಲಿದ್ದು, ಜನವರಿ ೨೬ ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ಇನ್ನೂ ಮುಖ್ಯವಾಗಿ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಪ್ರಜ್ವಲ್ ಇನ್ಸ್ಟಾಗ್ರಾಂ ನಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನೂ ಈ ವಿಚಾರ ಬಹಿರಂಗವಾಗುತ್ತಿದ್ದಂತೆ ದಚ್ಚು ಪಾತ್ರ ಹೇಗಿರಲಿದೆ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ. ಇನ್ನೂ ಪ್ರಜ್ವಲ್ ಇನ್ಸ್ಟಾಗ್ರಾಂ ಲೈವ್‌ನಲ್ಲಿಯೇ ದರ್ಶನ್ ಅಭಿಮಾನೋರ್ವ ನಮ್ಮ ಡಿ ಬಾಸ್ ಪಾತ್ರ ಹೇಗಿರಲಿದೆ ಎಂದು ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರಿಸಿದ ಪ್ರಜ್ವಲ್ ದರ್ಶನ್ ರವರೊಂದಿಗೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ನಾನು ತುಂಬಾ ಲಕ್ಕಿ, ದರ್ಶನ್ ಅಣ್ಣನ ಪಾತ್ರದ ಕುರಿತು ಸದ್ಯ ಏನು ಹೇಳುವುದಿಲ್ಲ, ಸಿನೆಮಾದಲ್ಲಿ ನೋಡಿ ಅವಾಗ ಮಜಾ ಬರುತ್ತೆ, ಎಲ್ಲಾ ಈಗ ಹೇಳಿದ್ರೆ ಕ್ರೇಜ್ ಇರೊಲ್ಲ ಎಂದಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಪ್ರಜ್ವಲ್ ಪೋಲಿಯಾಗಿರುತ್ತಾರೆ, ಆದರೆ ಪೊಲೀಸ್ ಅಧಿಕಾರಿಯಾಗಿ ನಿಷ್ಟಾವಂತ ಹಾಗೂ ಖಡಕ್ ಅಧಿಕಾರಿಯಾಗಿರುತ್ತಾರೆ. ಪ್ರಜ್ವಲ್ ಗೆ ನಾಯಕಿಯಾಗಿ ನಟಿ ಭಾವನಾ ಕಾಣಿಸಿಕೊಂಡಿದ್ದು, ಶ್ರೀನರಸಿಂಹ ಚಿತ್ರವನ್ನು ನಿರ್ದೇಶಿಸಿದ್ದಾರೆ.

Trending

To Top