Saturday, May 21, 2022
HomeFilm Newsಜಾತಿರತ್ನಾಲು ಸಿನೆಮಾದ ನಟಿಯನ್ನು ಕಂಡು ಷಾಕ್ ಆದ ಪ್ರಭಾಸ್!

ಜಾತಿರತ್ನಾಲು ಸಿನೆಮಾದ ನಟಿಯನ್ನು ಕಂಡು ಷಾಕ್ ಆದ ಪ್ರಭಾಸ್!

ಹೈದರಾಬಾದ್: ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಾತಿರತ್ನಾಲು ಚಿತ್ರದ ನಟಿ ಫಾರಿಯಾ ಅಬ್ದುಲ್ಲಾ ಹೈಟ್ ನೋಡಿ ಷಾಕ್ ಆಗಿದ್ದಾರಂತೆ ನಟ ಪ್ರಭಾಸ್. ಆಕೆಯ ಪಕ್ಕದಲ್ಲಿ ನಿಂತುಕೊಂಡು ಹೈಟ್ ಚೆಕ್ ಮಾಡಿಕೊಳ್ಳುವುದರ ಜೊತೆಗೆ ಈಕೆ ಏನು ಅಷ್ಟು ಹೈಟ್ ಇದ್ದಾಳೆ ಎಂದು ಸಹ ಹೇಳಿದ್ದಾರೆ.

ಜಾತಿರತ್ನಾಲು ಸಿನೆಮಾ ಯುವಜನಾಂಗವನ್ನು ಸೆಳೆಯುವಂತಹ ಸಿನೆಮಾ ಆಗಿದೆ. ಸಿನೆಮಾ ಪುಲ್ ಕಾಮಿಡಿ ಎಂಟರ್‌ಟ್ರೈನಮೆಂಟ್ ಆಗಿದೆ. ಈ ಚಿತ್ರ ಇದೇ ಮಾರ್ಚ್ ೧೧ ರಂದು ಬಿಡುಗಡೆಯಾಗಲಿದ್ದು, ಚಿತ್ರದ ಪ್ರಮೋಷನ್ ಸಹ ಕಾಮಿಡಿಯಾಗೇ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ನಟ ಪ್ರಭಾಸ್ ರವರ ಮೂಲಕ ಪ್ರಮೋಷನ್ ಮಾಡಿಸಲು ಚಿತ್ರತಂಡ ಮುಂಬೈಗೆ ತೆರಳಿದ್ದು, ಅಲ್ಲಿ ಈ ಚಿತ್ರದ ನಟಿಯನ್ನು ಕಂಡು ಷಾಕ್ ಆಗಿದ್ದಾರೆ.

ಮುಂಬೈನಲ್ಲಿ ಪ್ರಭಾಸ್ ಆದಿಪುರುಷ್ ಚಿತ್ರದ ಶೂಟಿಂಗ್‌ನಲ್ಲಿದ್ದು, ಅಲ್ಲಿಗೇ ಜಾತಿರತ್ನಾಲು ಚಿತ್ರದ ಟ್ರೈಲರ್ ಬಿಡುಗಡೆಗಾಗಿ ಚಿತ್ರತಂಡ ತೆರಳಿದೆ. ಇನ್ನೂ ಟ್ರೈಲರ್ ನೋಡಿ ಎಂಜಾಯ್ ಮಾಡಿರುವ ಪ್ರಭಾಸ್ ಚಿತ್ರತಂಡದೊಂದಿಗೆ ಸ್ವಲ್ಪ ಸಮಯ ಸಂತಸದಿಂದ ಕಳೆದಿದ್ದಾರೆ. ಇದೇ ಸಮಯದಲ್ಲೇ ಚಿತ್ರದ ಹಿರೋಯಿನ್ ಫಾರಿಯಾ ಅಬ್ದುಲ್ಲಾ ಷಾಕ್ ಆಗಿದ್ದು, ಆಕೆಯ ಪಕ್ಕ ನಿಂತು ಹೈಟ್ ಸಹ ಚೆಕ್ ಮಾಡಿಕೊಂಡಿದ್ದಾರೆ. ಜೊತೆಗೆ ಈವಿಡೇಂಟಿ ಇಂತ ಪೊಡುಗು ಉಂದಿ ಎಂದು ಸಹ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಚಿತ್ರದ ಹೀರೊ ನವೀನ್ ಪೊಲಿಶೆಟ್ಟಿ ಕಾಮಿಡಿಯಾಗಿ ಚಿತ್ರಕ್ಕೆ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಾಗ್ ಆಶ್ವಿನ್ ನಿರ್ಮಾಣ ಮಾಡಿದ್ದು, ಅನುದಿಪ್ ಸಿನೆಮಾವನ್ನು ನಿರ್ದೇಶಿಸಿದ್ದಾರೆ.

- Advertisement -

You May Like

More