Film News

ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ಮರಣದ ಬಳಿಕ ಮೊದಲ ಬಾರಿ ಎಮೋಷನಲ್ ಪೋಸ್ಟ್….!

ಕಳೆದೆರಡು ದಿನಗಳ ಹಿಂದೆಯಷ್ಟೆ ತೆಲುಗು ಸಿನಿರಂಗದ ಖ್ಯಾತ ನಟ ಕೃಷ್ಣಂರಾಜು ಅನಾರೋಗ್ಯದ ನಿಮಿತ್ತ ಮೃತಪಟ್ಟರು. ಸ್ವಂತ ತಂದೆಯಂತೆ ಕಾಣುತ್ತಿದ್ದ ಪ್ರಭಾಸ್ ರವರಿಗೆ ಕೃಷ್ಣಂರಾಜು ರವರನ್ನು ಕಳೆದುಕೊಂಡಿದ್ದು ತುಂಬಾನೆ ನೋವಿನ ಸಂಗತಿಯಾಗಿತ್ತು. ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದ ಪ್ರಭಾಸ್ ತನ್ನ ದೊಡ್ಡಪ್ಪ ಮರಣದ ಬಳಿಕ ಮೊದಲ ಬಾರಿಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಭಾಸ್ ಮಾಡಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ…

ತೆಲುಗು ಸಿನಿರಂಗದ ರೆಬೆಲ್ ಸ್ಟಾರ್‍ ಕೃಷ್ಣಂರಾಜು ಮರಣದ ಬಳಿಕ ಅವರ ಇಡೀ ಫ್ಯಾಮಿಲಿ ಶೋಕಸಾಗರದಲ್ಲಿ ಮುಳುಗಿದೆ. ಅದರಲ್ಲೂ ಪ್ರಭಾಸ್ ರವರಿಗೆ ಕೃಷ್ಣಂರಾಜು ರವರೆಂದರೇ ತುಂಬಾ ಇಷ್ಟ. ಈ ಕಾರಣದಿಂದಾಗಿ ಪ್ರಭಾಸ್ ಸಹ ತುಂಭಾ ನೋವನ್ನು ಅನುಭವಿಸುತ್ತಿದ್ದಾರೆ. ಇನ್ನೂ ಸಿನೆಮಾ ಶೂಟಿಂಗ್ ಗೂ ಸಹ ಬ್ರೇಕ್ ಕೊಟ್ಟು, ಮನೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನೂ ದೊಡ್ಡಪ್ಪನನ್ನು ಕಳೆದುಕೊಂಡ ಪ್ರಭಾಸ್ ರವರಿಗೆ ಇಡೀ ದೇಶದಾದ್ಯಂತ ಅನೇಕರಿಂದ ಧೈರ್ಯ ತುಂಬುವ ಕೆಲಸ ಸಹ ಆಗಿದೆ.  ಕೃಷ್ಣಂರಾಜು ರವರ ವಾರಸುದಾರನಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಪ್ರಭಾಸ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಫೇಮ್ ದಕ್ಕಿಸಿಕೊಂಡಿದ್ದಾರೆ. ಇನ್ನೂ ತನ್ನ ದೊಡ್ಡಪ್ಪನನ್ನು ಕಳೆದುಕೊಂಡ ನೋವಿನಿಂದ ಪ್ರಭಾಸ್ ಇದೀಗ ಕೊಂಚ ಕೊಂಚ ಹೊರಬರುತ್ತಿದ್ದಾರೆ.

ಇನ್ನೂ ಪ್ರಭಾಸ್ ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿದಿದ್ದರು. ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಅಪ್ಡೇಟ್ ನೀಡುತ್ತಿದ್ದರು. ಕೆಲವೊಂದು ಅವಶ್ಯಕ ವಿಚಾರಗಳಿದ್ದರೇ ಮಾತ್ರ ಸ್ಪಂದನೆ ನೀಡುತ್ತಿದ್ದರು. ಇದೀಗ ಕೃಷ್ಣಂರಾಜು ರವರ ಮರಣ ಹೊಂದಿದ ಬಳಿಕ ಮೊದಲ ಬಾರಿಗೆ ಪ್ರಭಾಸ್ ಎಮೋಷನಲ್ ಪೋಸ್ಟ್ ಶೇರ್‍ ಮಾಡಿದ್ದು, ಇದೀಗ ಎಲ್ಲರನ್ನೂ ಈ ಪೋಸ್ಟ್ ಆಕರ್ಷಣೆ ಮಾಡುತ್ತಿದೆ. ಪ್ರಭಾಸ್ ತನ್ನ ಇನ್ಸ್ಟಾ ಖಾತೆಯಲ್ಲಿ ಈ ಪೋಸ್ಟ್ ಅನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಪ್ರಭಾಸ್ ಅಭಿಮಾನಿಗಳು ಕೃಷ್ಣಂರಾಜು ಹಾಗೂ ಪ್ರಭಾಸ್ ರವರ ಸಿನೆಮಾಗಳಲ್ಲಿನ ಕೆಲವೊಂದು ಸನ್ನಿವೇಶಗಳನ್ನು ಒಗ್ಗೂಡಿಸಿ ವಿಡಿಯೋ ನಿರ್ಮಾಣ ಮಾಡಿದ್ದಾರೆ. ಇನ್ನೂ ಇದೇ ವಿಡಿಯೋವನ್ನು ಪ್ರಭಾಸ್ ಸಹ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾರ್ಟ್ ಸಿಂಬಲ್ ಹಾಗೂ ನಮಸ್ಕಾರ ಸಿಂಬಲ್ ಅನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಮಾಡಿದಂತಹ ಅಭಿಮಾನಿಗಳಿಗೆ ಸಹ ಪ್ರಭಾಸ್ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನೂ ಈ ವಿಡಿಯೋದಲ್ಲಿ ಪ್ರಭಾಸ್ ಹಾಗೂ ಕೃಷ್ಣಂರಾಜು ರವರ ಹಾವಭಾವಗಳಿಗೆ ತಕ್ಕಂತೆ ಮ್ಯಾಚ್ ಆಗುವಂತೆ ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ದೃಶ್ಯಗಳು ಒಂದು ರೀತಿಯಾದರೇ, ಅದಕ್ಕೆ ಛತ್ರಪತಿ ಸಿನೆಮಾದ ಸಾಂಗ್ ಮ್ಯೂಸಿಕ್ ಅನ್ನು ಸೇರಿದ್ದಾರೆ. ಇನ್ನೂ ಈ ವಿಡಿಯೋ ಪ್ರಭಾಸ್ ಅಭಿಮಾನಿಗಳು ಕ್ರಿಯೇಟ್ ಮಾಡಿದ್ದು, ಇದೇ ವಿಡಿಯೋ ಅನ್ನು ಪ್ರಭಾಸ್ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಇದೇ ಮಾಹೆಯ 29 ರಂದು ಮೊಗಲ್ತೂರು ಗ್ರಾಮದಲ್ಲಿ ಕೃಷ್ಣಂರಾಜು ರವರ ಸ್ಮರಣೆ ಸಭೆಯನ್ನು ಆಯೋಜಿಸಲಾಗಿದೆ.

Trending

To Top