Film News

ಬಿಡುಗಡೆಯಾಯ್ತು ರಾಧೆ-ಶ್ಯಾಮ್ ಚಿತ್ರದ ಪ್ರೀ ಟೀಸರ್: ಫಿದಾ ಆದ ಅಭಿಮಾನಿಗಳು

ಹೈದರಾಬಾದ್: ಟಾಲಿವುಡ್‌ನ ಖ್ಯಾತ ನಟ ಬಾಹುಬಲಿ ಪ್ರಭಾಸ್ ಅಭಿನಯದ ರಾಧೆ-ಶ್ಯಾಮ್ ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಟೀಸರ್‌ಗೂ ಮುನ್ನವೇ ಪ್ರೀ ಟೀಸರ್ ಬಿಡುಗಡೆಯಾಗಿದ್ದು, ಇದನ್ನು ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಲಾಗಿದೆ.

ನಟ ಪ್ರಭಾಸ್ ಹಾಗೂ ನಟಿ ಪೂಜಾ ಹೆಗ್ಡೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿದ್ದವಾಗಿರುವ ರಾಧೆ-ಶ್ಯಾಮ್ ಚಿತ್ರ ಪಕ್ಕಾ ಲವ್‌ಸ್ಟೋರಿಯಾಗಿದ್ದು, ಪ್ರೇಮಿಗಳ ದಿನದಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಇದೀಗ ರಾಧೆ-ಶ್ಯಾಮ್ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮತ್ತಷ್ಟು ಥ್ರಿಲ್ ಹುಟ್ಟಿಸಿದೆ. ಇನ್ನೂ ಬಿಡುಗಡೆಯಾದ ಟೀಸರ್‌ನಲ್ಲಿ ಪ್ರಭಾಸ್ ಅಭಿನಯಿಸಿದ ಕೆಲವು ಸೆಕೆಂಡುಗಳ ಸಣ್ಣ ವಿಡಿಯೋ ಇದ್ದು, ಇದರಲ್ಲಿ ಬಾಹುಬಲಿ, ಸಾಹೋ ಚಿತ್ರಗಳಲ್ಲಿ ಪ್ರಭಾಸ್ ರವರ ಮೈಕಟ್ಟು, ಧೈರ್ಯ, ಆಕ್ಷನ್ ನೋಡಿದ್ದೀರಿ ಆದರೆ ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ರವರ ಹೃದಯ ಕಾಣುತ್ತೀರಿ ಎಂದು ಪ್ರೀ ಟೀಸರ್‌ನಲ್ಲಿ ಹೇಳಲಾಗಿದೆ.

ಇನ್ನೂ ರಾಧೆ ಶ್ಯಾಮ್ ಚಿತ್ರ ಸುಮಾರು ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ನಡೆದ ಕಥೆಯೇ ರಾಧೆ ಶ್ಯಾಮ್ ಚಿತ್ರವಾಗಿದೆ. ಜೊತೆಗೆ ಪಕ್ಕಾ ಲವ್ ಸ್ಟೋರಿಯಿಂದ ಕೂಡಿದ ಚಿತ್ರವಾಗಿದ್ದು, ಯಾವುದೇ ಆಕ್ಷನ್ ಸೀನ್‌ಗಳು ಈ ಚಿತ್ರದಲ್ಲಿ ಇಲ್ಲ ಎನ್ನಲಾಗುತ್ತಿದೆ. ಜೊತೆಗೆ ಪಕ್ಕಾ ಯುವಜನತೆಯನ್ನು ಆಕರ್ಷಿಸಲಿದೆ ಎನ್ನಲಾಗುತ್ತಿದೆ.

ಇನ್ನೂ ನಟ ಪ್ರಭಾಸ್ ಸ್ಯಾಂಡಲ್‌ವುಡ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಸಲಾರ್ ಚಿತ್ರದಲ್ಲಿ ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿಬರಲಿರುವ ಆದಿಪುರುಷ್ ಚಿತ್ರದಲ್ಲಿ ಒಟ್ಟಗೆ ನಟಿಸುತ್ತಿದ್ದಾರೆ.

Trending

To Top