Film News

ಪ್ರಭಾಸ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ: ಸ್ವಾಗತ ಕೋರಿದ ಅಪ್ಪು

ಬೆಂಗಳೂರು: ಹೊಂಬಾಳೆ ಬ್ಯಾನರ್‌ನಡಿ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಅಭಿನಯದ ಸಲಾರ್ ಸಿನೆಮಾ ಫಸ್ಟ್ ಲುಕ್ ಪೋಸ್ಟರ್‌ನ್ನು ಶೇರ್ ಮಾಡಿರುವ ಪುನಿತ್ ರಾಜ್‌ಕುಮಾರ್ ತೆರೆದ ಬಾಹುಗಳಿಂದ ನಮ್ಮ ಕನ್ನಡ ನಾಡಿಗೆ ನಿಮಗೆ ಭವ್ಯ ಸ್ವಾಗತ ಪ್ರಭಾಸ್ ಎಂದು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ನಿನ್ನೆಯಷ್ಟೆ ಹೊಂಬಾಳೆ ಫಿಲಂ ಬ್ಯಾನರ್‌ನಡಿ ಪ್ರಭಾಸ್ ಅಭಿನಯಿಸಲಿರುವ ಸಲಾರ್ ಚಿತ್ರ ಇಡೀ ಇಂಡಿಯಾದಲ್ಲೇ ಟ್ರೆಂಡ್ ಸೃಷ್ಟಿಸಿದೆ. ಹಲವಾರು ದಿನಗಳಿಂದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಪೋಸ್ಟರ್ ಬಿಡುಗಡೆಗೊಳಿಸಿ ಚರ್ಚೆಗೆ ಅಂತ್ಯವಾಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಟ್ರೆಂಡ್ ಶುರುವಾಗಿದ್ದು, ಪ್ರಭಾಸ್ ಅಭಿಮಾನಿಗಳು ಭಾರಿ ಮಟ್ಟದಲ್ಲಿ ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ಹೊಂಬಾಳೆ ಫಿಲಂ ಬ್ಯಾನರ್‌ನಡಿಯಲ್ಲಿಯೇ ಪುನಿತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿತ್ರ ಸಹ ತೆಲುಗಿನಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗುತ್ತಿದೆ ಎನ್ನಲಾಗಿದೆ. ಇನ್ನೂ ಪುನೀತ್ ರಾಜ್‌ಕುಮಾರ್‌ರವರನ್ನು ಸಹ ಪ್ರಭಾಸ್ ತೆಲುಗು ಚಿತ್ರರಂಗಕ್ಕೆ ಸ್ವಾಗತ ನೀಡಿದ್ದು, ಇಬ್ಬರೂ ನಟರು ಪರಸ್ಪರ ಸ್ವಾಗತ ಕೋರಿಕೊಂಡಿದ್ದಾರೆ.

ಒಟ್ಟಿನಲ್ಲಿ ಭಾರಿ ನೀರಿಕ್ಷೆಯಲ್ಲಿ ಚಿತ್ರೀಕರಣ ಕೈಗೊಂಡಿರುವ ಹೊಂಬಾಳೆ ಫಿಲಂ ತಂಡ ಇಡಿ ದೇಶದಲ್ಲಿಯೇ ಸುದ್ದಿ ಮಾಡುತ್ತಿದೆ. ಅದರಲ್ಲೂ ಕನ್ನಡ ನಿರ್ಮಾಣ ಸಂಸ್ಥೆ ಈ ಮಟ್ಟಿಗೆ ಹೆಸರು ಮಾಡುತ್ತಿರುವುದು ಕನ್ನಡಿಗರೆಲ್ಲರ ಹೆಮ್ಮೆಯಾಗಿದೆ ಎನ್ನಲಾಗುತ್ತಿದೆ.

Trending

To Top