Film News

ದೊಡ್ಡಪ್ಪನ ಮೃತ ದೇಹದ ಮುಂದೆ ಕಣ್ಣೀರಾಕಿದ ಪ್ರಭಾಸ್, ಆತನನ್ನು ನೋಡಿ ತಾಳಲಾರೆವು ಎಂದ ಪ್ರಭಾಸ್ ಫ್ಯಾನ್ಸ್…!

ತೆಲುಗು ಸಿನಿರಂಗದ ಖ್ಯಾತ ನಟ ರೆಬೆಲ್ ಸ್ಟಾರ್‍ ಕೃಷ್ಣಂರಾಜು ಇಹಲೋಕ ತ್ಯೆಜಿಸಿದ್ದಾರೆ. ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಇನ್ನೂ ಕೃಷ್ಣಂರಾಜು ಎಂದರೇ ನಟ ಪ್ರಭಾಸ್ ಗೆ ತುಂಬಾ ಪ್ರಾಣ. ಕೃಷ್ಣಂರಾಜು ಸಹೋದರನ ಮಗನಾದ ಪ್ರಭಾಸ್ ಕಂಡರೇ ಕೃಷ್ಣಂರಾಜು ರವರಿಗೂ ಸಹ ತುಂಬಾನೇ ಪ್ರೀತಿ. ಇನ್ನೂ ತಾನು ಪ್ರೀತಿಸುವಂತಹ ದೊಡ್ಡಪ್ಪನ ಮೃತ ದೇಹವನ್ನು ಕಂಡ ಪ್ರಭಾಸ್ ಕಣ್ಣಿರಾಕುತ್ತಿದ್ದಾರೆ. ಇದನ್ನು ನೋಡಿ ಪ್ರಭಾಸ್ ಫ್ಯಾನ್ಸ್ ಸಹ ಭಾವುಕರಾಗಿ ನಿಮ್ಮನ್ನು ಈ ರೀತಿ ನೋಡಲಾರೆವು ಎನ್ನುತ್ತಿದ್ದಾರೆ.

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟನಾಗಿ ಅನೇಕ ಸಿನೆಮಾಗಳನ್ನು ಮಾಡಿದ ರೆಬೆಲ್ ಸ್ಟಾರ್‍ ಕೃಷ್ಣಂ ರಾಜು (83) ಇಂದು ಕೊನೆ ಉಸಿರನ್ನೇಳೆದಿದ್ದಾರೆ. ಸುಮಾರು 60 ವರ್ಷಕ್ಕೂ ಹೆಚ್ಚಿನ ಕಾಲ ಸಿನಿರಂಗದಲ್ಲಿ ಕೆರಿಯರ್‍ ಸಾಗಿಸಿದ್ದಾರೆ. ನಟನಾಗಿ, ಖಳನಟನಾಗಿ, ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಂರಾಜು ಇಂದು (ಸೆ.11) ರಂದು ಕಾಣದ ಲೋಕಕ್ಕೆ ಪಯಣ ಸಾಗಿಸಿದ್ದಾರೆ. ಇನ್ನೂ ಅವರ ಮರಣಕ್ಕೆ ಇಡೀ ಚಿತ್ರರಂಗವೇ ಮರುಗಿದೆ. ಗಣ್ಯಾದಿ ಗಣ್ಯರು ಕೃಷ್ಣಂರಾಜು ರವರ ಮೃತದೇಹವನ್ನು ದರ್ಶನ ಮಾಡಿಕೊಂಡು ಕಂಬಿನಿ ಮಿಡಿದಿದ್ದಾರೆ. ಜೊತೆಗೆ ಪ್ರಭಾಸ್ ರವರಿಗೆ ಹಾಗೂ ಅವರ ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ.

ಇನ್ನೂ ಪ್ರಭಾಸ್ ಹಾಗೂ ಕೃಷ್ಣಂರಾಜು ರವರ ನಡುವಣ ಬಾಂದವ್ಯವನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ. ಯಂಗ್ ರೆಬೆಲ್ ಸ್ಟಾರ್‍ ಆಗಿ ಕೃಷ್ಣರಾಂಜು ತನ್ನ ವಾರಸತ್ವವನ್ನು ಪ್ರಭಾಸ್ ಗೆ ನೀಡಿದ್ದರು. ಸಿನಿರಂಗದಲ್ಲಿ ಮುನ್ನುಗ್ಗುತ್ತಿರುವ ಪ್ರಭಾಸ್ ರವರನ್ನು ನೋಡಿ ಕೃಷ್ಣಂರಾಜು ಸಹ ತುಂಬಾನೆ ಖುಷಿಪಡುತ್ತಿದ್ದರು. ಸಿನಿರಂಗದಲ್ಲಿ ತನಗೆ ಸ್ಪೂರ್ತಿ ನನ್ನ ದೊಡ್ಡಪ್ಪ ಎಂದೇ ಹೇಳುತ್ತಿದ್ದರು ಪ್ರಭಾಸ್. ಇದೀಗ ಕೃಷ್ಣಂರಾಜು ರವರನ್ನು ಕಳೆದುಕೊಂಡ ಪ್ರಭಾಸ್ ರವರಿಗೆ ಇದ್ದಂತಹ ದೊಡ್ಡ ದಿಕ್ಕು ಸಹ ಕಳೆದುಕೊಂಡಂತಾಗಿದೆ. ಪ್ರಭಾಸ್ ಮುಖದಲ್ಲೂ ಸಹ ತುಂಬಾ ವಿಷಾದ ಮನೆಮಾಡಿದೆ. ಇನ್ನೂ ಕೃಷ್ಣಂರಾಜು ರವರ ಮೃತ ದೇಹವನ್ನು ನೋಡಲು ಬಂದ ಎಲ್ಲರೂ ಪ್ರಭಾಸ್ ರವರಿಗೆ ಸಾಂತ್ವನ ಹೇಳುತ್ತಿದ್ದರು. ಇದೇ ವೇಳೇ ಪ್ರಭಾಸ್ ರವರ ಕಣ್ಣಲ್ಲಿ ಕಣ್ಣೀರು ಹರಿದುಬಂತು. ಪ್ರಭಾಸ್ ಕಣ್ಣೀರು ಹಾಕುವ ಪೊಟೋಗಳು ಇದೀಗ ವೈರಲ್ ಆಗಿದೆ.

ಇನ್ನೂ ಪ್ರಭಾಸ್ ರವರು ಕಣ್ಣಿರಾಕುವಂತಹ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹೊರಬರುತ್ತಿದ್ದಂತೆ ಅವರ ಅಭಿಮಾನಿಗಳೂ ಸಹ ಭಾವುಕರಾಗಿದ್ದಾರೆ. ಸದಾ ಸಂತೋಷದಿಂದ ತುಂಬಾ ಎನರ್ಜಿಯಿಂದ ಇರುತ್ತಿದ್ದಂತಹ ಪ್ರಭಾಸ್ ರವರನ್ನು ನೋಡಿ ಆತನ ಅಭಿಮಾನಿಗಳೂ ಸಹ ಕಣ್ಣೀರಾಕಿದ್ದಾರೆ. ನಿಮ್ಮನ್ನು ಇಂತಹ ಸ್ಥಿತಿಯಲ್ಲಿ ನೋಡಲು ಆಗುತ್ತಿಲ್ಲ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಪ್ರಭಾಸ್ ರವರು ಧೈರ್ಯವಾಗಿರಬೇಕೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ಟಾಲಿವುಡ್ ನ ಸ್ಟಾರ್‍ ಗಳಾದ ಚಿರಂಜೀವಿ, ಕೃಷ್ಣ, ಮಹೇಶ್ ಬಾಬು, ಪವನ್ ಕಲ್ಯಾಣ್, ಎನ್.ಟಿ.ಆರ್‍ ಸೇರಿದಂತೆ ಅನೇಕರು ಕೃಷ್ಣಂರಾಜು ರವರ ಪಾರ್ಥಿವ ಶರೀರವನ್ನು ದರ್ಶನ ಮಾಡಿಕೊಂಡು ಪ್ರಭಾಸ್ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Trending

To Top