Film News

ಮುಂದಿನ ವಾರ ಪ್ರಭಾಸ್-ಕೃತಿ ಸನನ್ ಎಂಗೇಜ್ ಮೆಂಟ್ ಅಂತೆ, ಮಾಲ್ಡೀವ್ಸ್ ನಲ್ಲಿ ನಡೆಯಲಿದೆಯಂತೆ, ವೈರಲ್ ಆದ ಟ್ವೀಟ್…!

ತೆಲುಗು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಆದ ಪ್ರಭಾಸ್ ಕುರಿತು ಇತ್ತಿಚಿಗೆ ಮದುವೆ ರೂಮರ್‍ ಗಳು ಜೋರಾಗಿಯೇ ಕೇಳಿಬರುತ್ತಿವೆ. ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಸುಮಾರು ವರ್ಷಗಳಿಂದ ಸುದ್ದಿ ಹರಿದಾಡಿತ್ತು. ಇನ್ನೇನು ಇವರ ಮದುವೆ ಆಗಿಯೇ ಹೋಯಿತು ಎಂದು ಅಂದುಕೊಂಡುವಷ್ಟರಲ್ಲಿ ಇದೀಗ ಪ್ರಭಾಸ್ ಬಗ್ಗೆ ಮತ್ತೊಂದು ರೂಮರ್‍ ಹುಟ್ಟಿಕೊಂಡಿದೆ. ಪ್ರಭಾಸ್ ಹಾಗೂ ಬಾಲಿವುಡ್ ನಟಿ ಕೃತಿ ಸನನ್ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿ ಜೋರಾಗಿಯೇ ಕೇಳಿಬರುತ್ತಿದ್ದು, ಇದೀಗ ಒಂದು ಟ್ವೀಟ್ ಮತಷ್ಟು ವೈರಲ್ ಆಗುತ್ತಿದೆ.

ಮುಂದಿನ ವಾರದಲ್ಲಿ ಪ್ರಭಾಸ್ ಹಾಗೂ ಕೃತಿ ಸನನ್ ಎಂಗೇಜ್ ಮೆಂಟ್ ನಡೆಯಲಿದೆ. ಇದಕ್ಕಾಗಿ ಮಾಲ್ಡೀವ್ಸ್ ನಲ್ಲಿ ಸಿದ್ದತೆಗಳನ್ನು ಮಾಡಲಾಗಿದೆ ಎಂದು ಟ್ವೀಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಾಲಿವುಡ್ ಕ್ರಿಟಿಕ್ ಉಮೈರ್‍ ಸಂಧು ಈ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ ಎಂದರೇ ತಪ್ಪಾಗಲಾರದು. ಉಮೈರ್‍ ಸಂಧು ಟ್ವೀಟ್ ಮಾಡಿದಂತೆ ಬ್ರೆಕಿಂಗ್ ನ್ಯೂಸ್ ಕೃತಿ ಸನನ್, ಪ್ರಭಾಸ್ ನಿಶ್ಚಿತಾರ್ಥ ಮುಂದಿನ ವಾರ ಮಾಲ್ಡೀವ್ಸ್ ನಲ್ಲಿ ನಡೆಯಲಿದೆ. ಇದು ಅವರಿಬ್ಬರಿಗೂ ಸಂತೋಷಕರವಾದುದು ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೆ ತಡ ವಿವಿಧ ರೀತಿಯ ಕಾಮೆಂಟ್ ಗಳು, ವಿಮರ್ಶೆಗಳು, ಟೀಕೆಗಳು ಶುರುವಾಗಿದೆ. ಅನೇಕರು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ತರಾಟೆಗೂ ಸಹ ತೆಗೆದುಕೊಂಡಿದ್ದಾರೆ.

ಇನ್ನೂ ಉಮೈರ್‍ ಸಂಧು ಹಂಚಿಕೊಂಡ ಈ ಟ್ವೀಟ್ ಕ್ಷಣದಲ್ಲೇ ವೈರಲ್ ಆಗುತ್ತಿದೆ. ಏನು ನಿಜಕ್ಕೂ ಪ್ರಭಾಸ್-ಕೃತಿ ನಿಶ್ಚಿತಾರ್ಥವೇ ಎಂದು ಪ್ರಶ್ನೆಗಳನ್ನು ಸಹ ಮಾಡುತ್ತಿದ್ದಾರೆ. ಮತ್ತೆ ಕೆಲವರು ಆತನ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಇನ್ನೂ ಈ ಹಿಂದೆ ಸಹ ಬಾಲಿವುಡ್ ಸೆಲೆಬ್ರೆಟಿಗಳ ಬಗ್ಗೆ ಉಮೈರ್‍ ಸಂಧು ಟ್ವೀಟ್ ಮಾಡಿದ್ದರು. ಸೆಲೆಬ್ರೆಟಿಗಳ ವೈಯುಕ್ತಿಕ ವಿಚಾರಗಳ ಬಗ್ಗೆ ಟ್ವೀಟಿ ಮಾಡಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದರು. ಅನೇಕ ಬಾರಿ ಈತನ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ಸಹ ನಮೂದಾಗಿತ್ತು. ಈ ಹಾದಿಯಲ್ಲೇ ಇದೀಗ ಪ್ರಭಾಸ್ ಹಾಗೂ ಕೃತಿ ಎಂಗೇಜ್ ಮೆಂಟ್ ಬಗ್ಗೆ ಆತ ಮಾಡಿರುವ ಟ್ವೀಟ್ ಸಹ ಸುಳ್ಳು ಎಂದು ಅನೇಕರು ತಳ್ಳಿ ಹಾಕುತ್ತಿದ್ದಾರೆ.

ಆದರೆ ಬಾಲಿವುಡ್ ನಟ ವರುಣ್ ಧವನ್ ಕೃತಿ ಸನನ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ದೀಪಿಕಾ ಪಡುಕೊಣೆ ನಟಿಸುತ್ತಿರುವ ಬಿಗ್ ಬಜೆಟ್ ಸಿನೆಮಾದಲ್ಲಿನ ಹಿರೋ ಜೊತೆಗೆ ಕೃತಿ ಸನನ್ ಪ್ರೀತಿಯಲ್ಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದರು. ಅಂದರೇ ದೀಪಿಕಾ ಪ್ರಭಾಸ್ ಜೊತೆಗೆ ಪ್ರಾಜೆಕ್ಟ್ ಕೆ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಹೇಳಿಕೆಯ ಕಾರಣದಿಂದ ಅವರಿಬ್ಬರ ಡೇಟಿಂಗ್ ವಿಚಾರ ಮತಷ್ಟು ಬಲ ಪಡೆದುಕೊಂಡಿತ್ತು. ಇದೀಗ ಉಮೈರ್‍ ಸಂಧು ಮಾಡಿದ ಟ್ವೀಟ್ ಹಾಟ್ ಟಾಪಿಕ್ ಆಗಿದೆ.

Most Popular

To Top