Film News

ಜೂನ್ ಅಥವಾ ಜುಲೈನಲ್ಲಿ ಪ್ರಭಾಸ್-ದೀಪಿಕಾ ಸಿನೆಮಾ ಶೂಟಿಂಗ್?

ಹೈದರಾಬಾದ್: ಟಾಲಿವುಡ್‌ನ ಖ್ಯಾತ ನಟ ರೆಬೆಲ್‌ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಚಿತ್ರ ಇದೇ ವರ್ಷದ ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಕೆಲಸ ಪ್ರಾರಂಭವಾಗಲಿದೆಯಂತೆ.

ಈ ಹಿಂದೆ ವರ್ಷಕ್ಕೆ ಒಂದು ಚಿತ್ರದಲ್ಲಿ ಮಾತ್ರ ನಟಿಸುತ್ತಿದ್ದ ಪ್ರಭಾಸ್ ಇದೀಗ ಒಂದೇ ವರ್ಷದಲ್ಲಿ ಎರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್ ನಿರ್ದೇಶಕ ಪ್ರಶಾಂತ್ ನೀಲ್ ರವರ ಸಲಾರ್ ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದ ಆದಿಪುರುಷ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೋರ್ವ ನಿರ್ದೇಶಕ ನಾಗ್ ಅಶ್ವಿನ್ ಸಾರಥ್ಯದಲ್ಲಿ ಬರಲಿರುವ ಸೈನ್ಸ್ ಫಿಕ್ಷನ್ ಆಧಾರಿತ ಸಿನೆಮಾದಲ್ಲಿ ಪ್ರಭಾಸ್ ನಟಿಸಲಿದ್ದು, ಪ್ರಭಾಸ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಬಾಲಿವುಡ್ ಮೇರು ನಟ ಅಮಿತಾಭ್ ಬಚ್ಚನ್ ಸಹ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ನಿರ್ದೇಶಕ ನಾಗ್ ಅಶ್ವಿನ್ ಫೆ.೨೬ ರಂದು ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಲಿರುವ ಚಿತ್ರದ ಕುರಿತು ಅಪ್ಡೇಟ್ ನೀಡುತ್ತೇನೆ ಎಂದಿದ್ದರು, ಇದೀಗ ಅಭಿಮಾನಿಗಳ ಬಳಿ ಕ್ಷಮೆ ಕೋರಿರುವ ನಾಗ ಅಶ್ವಿನ್ ಸಿನೆಮಾದ ಬಗ್ಗೆ ಅಪ್ಡೇಟ್ ನೀಡುವ ಸೂಕ್ತ ಸಮಯ ಇದಲ್ಲ. ರಾಧೆ ಶ್ಯಾಮ್ ಚಿತ್ರದ ಬಳಿಕ ಮಾರ್ಚ್ ಮಾಹೆಯಲ್ಲಿಯೇ ಶೂಟಿಂಗ್ ಪ್ರಾರಂಭವಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಸಿನೆಮಾ ತಡವಾಗಿದೆ. ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಕೆಲಸಗಳು ಪ್ರಾರಂಭವಾಗಬಹುದೆಂದು ನಾಗ್ ಅಶ್ವಿನ್ ಹೇಳಿದ್ದಾರೆ ಎನ್ನಲಾಗಿದೆ.

Trending

To Top