Film News

ಆಚಾರ್ಯ ಚಿತ್ರದಲ್ಲಿನ ಪಾತ್ರಕ್ಕಾಗಿ ಪೂಜಾ ಕೇಳಿದ್ರು ದೊಡ್ಡ ಸಂಭಾವನೆ!

ಹೈದರಾಬಾದ್: ಟಾಲಿವುಡ್‌ನ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾದ ಆಚಾರ್ಯ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಸಹ ಬಣ್ಣ ಹಚ್ಚಲಿದ್ದು, ಈ ಪಾತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿದ್ದಾರಂತೆ.

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಚಿತ್ರ ಈಗಾಗಲೇ ಟಾಲಿವುಡ್ ಸೇರಿದಂತೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಈ ಚಿತ್ರ ಆಗಸ್ಟ್ ಮಾಹೆಯಲ್ಲಿ ಬಿಡುಗಡೆಯಾಗಲಿದ್ದು, ಅಭಿಮಾನಿಗಳನ್ನು ಥ್ರಿಲ್ ಮಾಡಲಿದೆ. ಇನ್ನೂ ಈ ಚಿತ್ರದಲ್ಲಿ ರಾಮ್ ಚರಣ್ ತೇಜ್ ಸಹ ಸಿದ್ದ ಎಂಬ ಪಾತ್ರವನ್ನು ಪೋಷಣೆ ಮಾಡಲಿದ್ದು, ಸಿದ್ದನಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಪಾತ್ರ ಸಣ್ಣದಾದರೂ ಕೂಡ ಹೆಚ್ಚು ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಪೂಜಾ. ನಟಿ ಪೂಜಾ ಹೆಗ್ಡೆ ರಾಧೆ ಶ್ಯಾಮ್ ಚಿತ್ರಕ್ಕೆ 2 ಕೋಟಿ ಸಂಭಾವನೆ ಪಡೆದಿದ್ದು, ಆಚಾರ್ಯ ಚಿತ್ರದಲ್ಲಿನ ಪಾತ್ರಕ್ಕಾಗಿ 1 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

 

ಇನ್ನೂ ಅಲಾ ವೈಕುಂಟಪುರಂಲೋ ಸಿನೆಮಾ ಸೂಪರ್ ಹಿಟ್ ಆದ ಬಳಿಕ ಪೂಜಾ ಹೆಗ್ಡೆ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ. ಜೊತೆಗೆ ಟಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಜೊತೆ ನಟಿಸುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಸಿನೆಮಾದಲ್ಲೂ ನಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತಷ್ಟು ಜನಪ್ರಿಯರಾಗಲಿದ್ದಾರೆ ಪೂಜಾ ಹೆಗ್ಡೆ.

ಆಚಾರ್ಯ ಚಿತ್ರದಲ್ಲಿನ ಒಂದು ಸೆಟ್‌ಗಾಗಿ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಇಡೀ ಏಷ್ಯಾದಲ್ಲಿಯೇ ಇಲ್ಲಿಯವರೆಗೂ ಯಾವ ಸಿನೆಮಾಗೂ ನಿರ್ಮಿಸದಂತಹ ಸೆಟ್ ಇದಾಗಿದೆ ಎನ್ನಲಾಗುತ್ತಿದೆ. ಆಚಾರ್ಯ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಕಾಜಲ್ ಅಗರ್ವಾಲ್ ಚಿರಂಜೀವಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನೂ ಖಳನಾಯಕನಾಗಿ ಸೋನು ಸೂದ್ ಸಹ ಅಭಿನಯಿಸಿದ್ದಾರೆ.

Trending

To Top