ತ್ರಿಷಾ ಬಗ್ಗೆ ಮತ್ತೊಮ್ಮೆ ಕೆಟ್ಟ ಕಾಮೆಂಟ್ಸ್, ತ್ರಿಷಾ ಬಗ್ಗೆ ಅಣ್ಣಾ ಡಿಎಂಕೆ ಮಾಜಿ ನಾಯಕ ಅಸಭ್ಯಕರ ಕಾಮೆಂಟ್ಸ್….!

ಸೌತ್ ಸಿನಿರಂಗದ ಸ್ಟಾರ್‍ ನಟಿ ತ್ರಿಷಾ ರವರ ಬಗ್ಗೆ ಖಳನಾಯಕ ಮನ್ಸೂರ್‍ ಅಲಿ ಖಾನ್ ರವರ ವಿರುದ್ದ ಭಾರಿ ಆಕ್ರೋಷ ವ್ಯಕ್ತವಾಗಿತ್ತು. ಅಭಿಮಾನಿಗಳು, ಸಾಮಾನ್ಯರಿಂದ ಹಿಡಿದು ಅನೇಕ ಸ್ಟಾರ್‍ ನಟ-ನಟಿಯರು ಸಹ ಮನ್ಸೂರ್‍ ಅಲಿ…

ಸೌತ್ ಸಿನಿರಂಗದ ಸ್ಟಾರ್‍ ನಟಿ ತ್ರಿಷಾ ರವರ ಬಗ್ಗೆ ಖಳನಾಯಕ ಮನ್ಸೂರ್‍ ಅಲಿ ಖಾನ್ ರವರ ವಿರುದ್ದ ಭಾರಿ ಆಕ್ರೋಷ ವ್ಯಕ್ತವಾಗಿತ್ತು. ಅಭಿಮಾನಿಗಳು, ಸಾಮಾನ್ಯರಿಂದ ಹಿಡಿದು ಅನೇಕ ಸ್ಟಾರ್‍ ನಟ-ನಟಿಯರು ಸಹ ಮನ್ಸೂರ್‍ ಅಲಿ ಖಾನ್ ವಿರುದ್ದ ಆಕ್ರೋಷ ಹೊರಹಾಕಿದರು. ಇದೀಗ ಅಣ್ಣಾ ಡಿಎಂಕಿ ಮಾಜಿ ನಾಯಕ ಎ.ವಿ.ರಾಜು ತ್ರಿಷಾ ಬಗ್ಗೆ ಅಸಭ್ಯಕರವಾದ ಕಾಮೆಂಟ್ಸ್ ಮಾಡಿದ್ದು, ಆತನ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಆತನ ವಿರುದ್ದ ಅನೇಕರು ಆಕ್ರೋಷ ಹೊರಹಾಕುತ್ತಿದ್ದಾರೆ.

ಸ್ಟಾರ್‍ ನಟಿ ತ್ರಿಷಾ ಬಗ್ಗೆ ಅಣ್ಣಾ ಡಿಎಂಕೆ ಮಾಜಿ ನಾಯಕ ಎ.ವಿ.ರಾಜು ಅಸಭ್ಯಕರವಾದ ಕಾಮೆಂಟ್ ಗಳನ್ನು ಮಾಡಿದ್ದಾರೆ. ತ್ರಿಷಾ ಬಗ್ಗೆ ಆತ ಮಾತನಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು, ನೆಟ್ಟಿಗರು ಆತನ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಕೂಡಲೇ ಆತನ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಜೊತೆಗೆ ಅನೇಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ತ್ರಿಷಾಗೆ ಬೆಂಬಲ ನೀಡುತ್ತಿದ್ದಾರೆ. ಇನ್ನೂ ಈ ಕುರಿತು ತ್ರಿಷಾ ಸಹ ರಿಯಾಕ್ಟ್ ಆಗಿದ್ದಾರೆ. ಫೇಮಸ್ ಆಗೋಕೆ ಎಂತಹ ಕೆಟ್ಟ ಕೆಲಸ ಮಾಡೋಕೆ ಆದರೂ ಕೀಳು ಮಟ್ಟಕ್ಕೆ ಇಳಿಯುವಂತಹ ಜೀವನಗಳು ಅವರದ್ದು, ಪದೇ ಪದೇ ಅಂತಹ ನೀಚವಾದ ಮನುಷ್ಯರನ್ನು ನೋಡುತ್ತಿದ್ದರೇ ಅಸಹ್ಯವಾಗಿದೆ. ಈ ಬಗ್ಗೆ ಕೂಡಲೇ ಕಾನೂನಿನಂತೆ ಕ್ರಮ ವಹಿಸುತ್ತೇನೆ. ಈ ಬಗ್ಗೆ ನಮ್ಮ ಲೀಗಲ್  ತಂಡ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಎ.ವಿ.ರಾಜು ತ್ರಿಷಾ ಬಗ್ಗೆ ಮಾಡಿದಂತಹ ಕಾಮೆಂಟ್ ಗಳ ವಿಡಿಯೋ ಇದೀಗ ಸಿನಿರಂಗದಲ್ಲಿ ಚರ್ಚನೀಯವಾದ ವಿಚಾರವಾಗಿದೆ. ಈ ಹಿಂದೆ ಓರ್ವ ಎಂ.ಎಲ್.ಎ ಹಣ ಕೊಟ್ಟು ತ್ರಿಷಾರನ್ನು ರೆಸಾರ್ಟ್‌ಗೆ ಕರೆದುಕೊಂಡು ಬಂದಿದ್ದರೆಂದು ಎ.ವಿ.ರಾಜು ಕಾಮೆಂಟ್ ಮಾಡಿದ್ದರು. ಯಾವುದೇ ಆಧಾರವಿಲ್ಲದೇ ತ್ರಿಷಾ ಬಗ್ಗೆ ಈ ರೀತಿಯ ಕಾಮೆಂಟ್ ಗಳನ್ನು ಮಾಡಿರುವುದು ಸರಿಯಲ್ಲ. ಆತನನ್ನು ಕೂಡಲೇ ಬಂಧನ ಮಾಡಬೇಕು. ಅಂತಹವರ ಮೇಲೆ ನಟಿನಟರ ಸಂಘ ಪೊಲೀಸರು ಸಹ ಯಾವುದೇ ಆಧಾರ ವಿಲ್ಲದೇ ಈ ರೀತಿಯ ಕೆಟ್ಟ ಹೇಳಿಕೆಗಳನ್ನು ನೀಡುವವರ ವಿರುದ್ದ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಇನ್ನೂ ಸೀನಿಯರ್‍ ನಟಿ ತ್ರಿಷಾ ವಯಸ್ಸಾದರೂ ಸಹ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಪೊನ್ನಿಯನ್ ಸೆಲ್ವನ್, ಲಿಯೋ ಸಿನೆಮಾದ ಮೂಲಕ ಭಾರಿ ಸಕ್ಸಸ್ ಪಡೆದುಕೊಂಡ ತ್ರಿಷಾ ಸದ್ಯ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ವಿಶ್ವಂಭರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.