Film News

ಧ್ರುವ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ!

ಬೆಂಗಳೂರು: ಈಗಾಗಲೇ ದಕ್ಷಿಣ ಭಾರತದ ಸಿನಿರಂಗದಲ್ಲಿ ಭಾರಿ ಕ್ರೇಜ್ ಹುಟ್ಟಿಸಿದ ಸಿನೆಮಾಗಳಲ್ಲಿ ಒಂದಾದ ಪೊಗರು ಚಿತ್ರ ತಂಡ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ಒಂದನ್ನು ನೀಡಲಿದ್ದಾರೆ.

ನಟ ಧ್ರುವ ಸರ್ಜಾ ಮತ್ತು ರಶ್ಮೀಕಾ ಮಂದಣ್ಣ ನಟನೆಯ ಪೊಗರು ಚಿತ್ರ ಬಿಡುಗಡೆ ಸಿದ್ದವಾಗಿದ್ದು, ಮುಂದಿನ ವರ್ಷದಲ್ಲಿ ಮೊದಲಾರ್ಧದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಡೈಲಾಗ್ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿನಿರಂಗದಲ್ಲಿ ಹವಾ ಸೃಷ್ಟಿಸಿದೆ.

ಇದೀಗ ಹೊಸ ವರ್ಷಕ್ಕೆ ಧ್ರುವ ಸರ್ಜಾ ಉಡುಗೊರೆ ನೀಡುತ್ತಿರುವುದು ತೆಲುಗು ಪ್ರೇಕ್ಷಕರಿಗೆ. ಹೌದು ಹೊಸ ವರ್ಷಕ್ಕೆ ಡೈಲಾಗ್ ತೆಲುಗು ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದ್ದು, ಜನವರಿ ೧ ರಂದು ಮಧ್ಯಾಹ್ನ ೧೨.೧೨ ಗಂಟೆಗೆ ತೆಲುಗು ಭಾಷೆಯಲ್ಲಿ ಪೊಗರು ಸಿನೆಮಾದ ಡೈಲಾಗ್ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ಧ್ರುವ ಸರ್ಜಾ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಡೈಲಾಗ್ ಗಳ ಮೂಲಕವೇ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿರುವ ಪೊಗರು ಚಿತ್ರದ ಕನ್ನಡ ಡೈಲಾಗ್ ಗಳು ಒಂದು ವರ್ಷದ ಹಿಂದೆಯೇ ಬಿಡುಗಡೆಯಾಗಿತ್ತು. ಇನ್ನೂ ತೆಲುಗು ಭಾಷೆಯಲ್ಲಿ ಪೊಗರು ಡೈಲಾಗ್ ಗಳ ಹವಾ ಶುರುವಾಗಲಿದೆ ಎನ್ನಲಾಗಿದೆ.

Trending

To Top