Film News

ಹೊಸ ವರ್ಷಕ್ಕೆ ಪೊಗರು ಸಿನಿಮಾ ತಮಿಳು ಟೀಸರ್ !

ಬೆಂಗಳೂರು: ಸ್ಯಾಂಡಲ್ ವುಡ್‌ನ ಬಹುನಿರೀಕ್ಷಿತ ಚಿತ್ರ ಪೊಗರು ಚಿತ್ರ ಹಲವು ಪೋಸ್ಟರ್ ಗಳ ಮೂಲಕ ಮಾಸ್ ಅಭಿಮಾನಿಗಳ ಮನ ಗೆದ್ದಿದೆ. ಇನ್ನೂ ಪೊಗರು ಚಿತ್ರ ಜನವರಿ ಮಾಹೆಯಲ್ಲಿ ಬಿಡುಗಡೆಯಾಗುವ ಸಾಧ್ಯೆತೆಯಿದೆ.

ಪೊಗರು ಚಿತ್ರ ಕನ್ನಡ, ಹಿಂದಿ ಹಾಗೂ ತೆಲಗು ಭಾಷೆಯಲ್ಲಿ ಬಿಡುಗಡೆಯಾಗುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಪೊಗರು ತಂಡದಿಂದ ಮತ್ತೊಂದು ನ್ಯೂಸ್ ಹೊರಬಂದಿದೆ. ಅದು ಏನೆಂದರೇ, ಪೊಗರು ಚಿತ್ರ ತಮಿಳು ಭಾಷೆಯ್ಲಲೂ ಸಹ ರಿಲೀಸ್ ಆಗಲಿದೆ ಎನ್ನಲಾಗಿದೆ. ಈಗಾಗಲೇ ತಮಿಳು ಭಾಷೆಯಲ್ಲಿ ಸಿನೆಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದ್ದು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವುದರ ಜೊತೆಗೆ ತಮಿಳು ಭಾಷೆಯಲ್ಲಿ ಪೊಗರು ಪೋಸ್ಟರ್ ಸಹ ರಿಲೀಸ್ ಮಾಡಲಾಗಿದೆ.

ಇನ್ನೂ ಪೊಗರು ತಮಿಳು ಭಾಷೆಯಲ್ಲಿ ಸೆಮ್ಮಾ ತಿಮಿರು ಎಂದು ಟೈಟಲ್ ಸಹ ಇಡಲಾಗಿದೆ. ಆ ಮೂಲಕ ತಮಿಳುನಾಡಿನಲ್ಲೂ ಸಹ ಪೊಗರು ಹವಾ ಸೃಷ್ಟಿ ಮಾಡಲಿದೆ. ಇನ್ನೂ ರಶ್ಮೀಕಾ ಈಗಾಗಲೇ ತಮಿಳಿನ  ಸುಲ್ತಾನ್ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಜೊತೆಗೆ ಪೊಗರು ಚಿತ್ರ ಸಹ ತಮಿಳಿನಲ್ಲಿ ಬಿಡುಗಡೆ ಮಾಡುವ ಮೂಲಕ ರಶ್ಮೀಕಾ ಮತಷ್ಟು ಅಭಿಮಾನಿಗಳನ್ನು ಗಳಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಕೊರೋನ ಹಿನ್ನೆಲೆಯಲ್ಲಿ ಪೊಗರು ಚಿತ್ರ ಬಿಡುಗಡೆ ತಡವಾಗಿದ್ದು, ಅಭಿಮಾನಿಗಳು ಪೊಗರು ಎಂಬ ಆಕ್ಷನ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಜೊತೆಗೆ ತೆಲುಗು ಭಾಷೆಯಲ್ಲಿ ಪೊಗರು ಚಿತ್ರದ ಹಾಡು ಸಹ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಭಾರಿ ರೆಸ್ಪಾನ್ಸ್ ಸಿಕ್ಕಿದೆ ಎನ್ನಲಾಗಿದೆ.

Trending

To Top