ಬೆಂಗಳೂರು: ಕೊರೋನಾ ಲಾಕ್ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಸಿನೆಮಾ ಪೊಗರು ಅಬ್ಬರ ಬಲು ಜೋರಾಗಿದ್ದು, ಕನ್ನಡ ಸೇರಿದಂತೆ ತೆಲುಗು ತಮಿಳು ಭಾಷೆಗಳಲ್ಲೂ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ. ಇನ್ನೂ ಈ ಚಿತ್ರಕ್ಕೆ ಸಿನಿರಸಿಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಪೊಗರು ಚಿತ್ರದ ಒಟ್ಟಾರೆ ಕಥೆಯ ಬಗ್ಗೆ ಹೇಳುವುದಾದರೇ, ಪೊಗರು ಸಿನೆಮಾದಲ್ಲಿ ನಟ ಮಲತಂದೆಯ ಮೇಲೆ ದ್ವೇಷ ಬೆಳೆಸಿಕೊಂಡಿರುತ್ತಾರೆ, ತನ್ನ ಸ್ವಂತ ತಾಯಿಯನ್ನು ಪಡೆಯಲು ಹಠಕ್ಕೆ ಬಿದ್ದ ಒರಟು ಯುವಕನ ಕಥೆಯಾಗಿದೆ. ದುಡ್ಡೇ ದೊಡ್ಡಪ್ಪ ಹಾಗೂ ದಬ್ಬಾಳಿಕೆಯಿಂದಲೇ ಗೌರವ ಪಡೆಯಬೇಕೆಂದು ನಂಬಿದ ಯುವಕನಲ್ಲಿ ಮಾನವೀಯತೆ ಹುಟ್ಟುವಂತಹ ಹಾಗೂ ಪ್ರೀತಿಯನ್ನು ಅರ್ಥಪಡಿಸುವ ಕೆಲವೊಂದು ಸನ್ನಿವೇಶಗಳು, ಮದರ್ ಸೆಂಟಿಮೆಂಟ್, ವಿಲನ್ ಆಗಿದ್ದ ಯುವಕ ಹಿರೋ ಆಗಿ ಬದಲಾಗುವುದು, ಹೈ ವೋಲ್ಟೇಜ್ ನಿಂದ ಕೂಡಿದ ಆಕ್ಷನ್ ಪೈಟ್ಗಳು ಜೊತೆಗೆ ಮದರ್ ಸೆಂಟಿಮೆಂಟ್ ಈ ಚಿತ್ರದಲ್ಲಿ ಸಿನಿರಸಿಕರನ್ನು ರಂಜಿಸುತ್ತಿದೆ.
ಇನ್ನೂ ಈ ಹಿಂದೆ ಧೃವ ಅಭಿನಯದ ಚಿತ್ರಗಳಲ್ಲಿ ಲವ್ ಸ್ಟೋರಿಗೆ ಹೆಚ್ಚಿನ ಒತ್ತನ್ನು ನೀಡಲಾಗಿತ್ತು. ಆದರೆ ಪೊಗರು ಚಿತ್ರದಲ್ಲಿ ಲವ್ ಸ್ಟೋರಿಗೆ ಅಷ್ಟೊಂದು ಒತ್ತು ನೀಡಿಲ್ಲ ಎಂಬುದು ಅಭಿಮಾನಿಗಳ ಮಾತಾಗಿದೆ. ಆದರೆ ತಾಯಿ ಸೆಂಟಿಮೆಂಟ್ ಗೆ ತುಂಬಾ ಪ್ರಾಶಸ್ತ್ಯ ನೀಡಿರುವ ನಿರ್ದೇಶಕ ಆಕ್ಷನ್ ಸೀನ್ಗಳಿಗೂ ಜಾಗ ಕೊಟ್ಟಿದ್ದಾರೆ. ಕೆಲವೊಂದು ಸೀನ್ಗಳು ಪ್ರೇಕ್ಷಕರಿಗೆ ಓವರ್ ಎನಿಸಿದರೂ ಕೂಡ ಪಕ್ಕಾ ಹಿಟ್ ಆಗುವ ಸಿನೆಮಾ ಆಗಲಿದೆ ಎನ್ನಲಾಗುತ್ತಿದೆ.
ಸುಮಾರು ನಾಲ್ಕು ವರ್ಷಗಳಿಂದ ಪೊಗರು ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್, ಕಾಮೆಡಿ ಹೀಗೆ ಎಲ್ಲವನ್ನೂ ಚಿತ್ರದಲ್ಲಿ ತರಲು ನಿರ್ದೇಶಕ ನಂದಕಿಶೋರ್ ತುಂಬಾ ಕಷ್ಟಪಟ್ಟಿದ್ದಾರೆ. ಕಷ್ಟ ಪಟ್ಟು ಸಿನೆಮಾ ಮಾಡಿದ್ದು, ಎಲ್ಲರೂ ಚಿತ್ರಮಂದಿರಗಳಲ್ಲಿಯೇ ಬಂದು ಸಿನೆಮಾ ನೋಡಬೇಕಾಗಿ ಚಿತ್ರತಂಡ ಮನವಿ ಮಾಡಿದೆ.
