ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪೊಗರು ಚಿತ್ರದ ಶೂಟಿಂಗ್ ಮುಕ್ತಾಯಗೊಂಡು ಸುಮಾರು ವರ್ಷಗಳೇ ಕಳೆದಿದ್ದು, ಇದೀಗ ಪೊಗರು ಚಿತ್ರದ ಬಿಡುಗಡೆ ಕುರಿತು ಖಚಿತ ಮಾಹಿತಿ ಬಹಿರಂಗವಾಗಿದೆ. ಫೆಬ್ರವರಿ 19 ರಂದು ಪೊಗರು ಚಿತ್ರ ತೆರೆಮೇಲೆ ಬರಲಿದೆ.
ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದ ಬಹುನಿರೀಕ್ಷಿತ ಪೊಗರು ಚಿತ್ರ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದು, ಈ ಕುರಿತು ಚಿತ್ರದ ನಾಯಕ ಧ್ರುವ ಸರ್ಜಾ ರವರೇ ಇನ್ಸ್ಟಾಗ್ರಾಂ ಲೈವ್ ನಲ್ಲಿ ಬಹಿರಂಗಗೊಳಿಸಿದ್ದಾರೆ. ಸುಮಾರು ೩ ವರ್ಷಗಳ ಕಾಲ ಈ ಚಿತ್ರಕ್ಕಾಗಿ ಅನೇಕ ಕಲಾವಿದರು ಶ್ರಮ ಪಟ್ಟಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಕೇವಲ ಗಡ್ಡ ಬಿಟ್ಟುಕೊಂಡ ದೃಶ್ಯಗಳು ಮಾತ್ರ ಇರುತ್ತದೆ ಎಂದು ಭಾವಿಸಬೇಡಿ. ಬಾಲ್ಯದ ದೃಶ್ಯಗಳು ಸೇರಿದಂತೆ ಅನೇಕ ಸರ್ಪ್ರೈಸ್ ಗಳು ಈ ಚಿತ್ರದಲ್ಲಿದೆ. ಜೊತೆಗೆ ಪೊಗರು ಚಿತ್ರ ಎಂದ ಕೂಡಲೇ ಇದು ಬರೀ ಆಕ್ಷನ್ ಚಿತ್ರವಾಗಿದೆ ಎಂದೂ ಭಾವಿಸಬೇಡಿ. ಪೊಗರು ಚಿತ್ರದಲ್ಲಿ ಅಜ್ಜಿ ಸೆಂಟಿಮೆಂಟ್, ಮದರ್ ಸೆಂಟಿಮೆಂಟ್, ಎಮೋಷನ್ಸ್ ಸಹ ನಿರೀಕ್ಷೆ ಮಾಡಬಹುದಾಗಿದೆ.
ಇನ್ನೂ ಈ ಚಿತ್ರದಲ್ಲಿ 4 ಪೈಟ್ಸ್ ಇವೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ನ, ನಟ ಜಗಪತಿ ಬಾಬು, ಧನಂಜಯ್ ಸೇರಿದಂತೆ ಅನೇಕರು ಈ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ತಡವಾಗಿತ್ತು, ಇದೀಗ ಕನ್ನಡ ಸಿನಿರಂಗದ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಪ್ರೋತ್ಸಾಹದಿಂದ ಚಿತ್ರ ಬಿಡುಗಡೆಯಾಗಲಿದ್ದು, ಫೆ.19 ರಂದು ರಥಸಪ್ತಮಿ ದಿನದಂದು ಬಿಡುಗಡೆಯಾಗಲಿದ್ದು ಎಲ್ಲರೂ ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
