ಪೊಗರು ಬಿಡುಗಡೆ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ!

ಬೆಂಗಳೂರು: ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಜನವರಿ ಮಾಹೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ತಿಳಿಸಿದೆಯಂತೆ.

ಕೆಲವು ದಿನಗಳ ಹಿಂದೆಯಷ್ಟೆ ಪೊಗರು ಸಿನೆಮಾ ತಂಡ ಕ್ರಿಸ್ ಮಸ್ ಹಬ್ಬಕ್ಕೆ ರಿಲೀಸ್ ಮಾಡಲಾಗುವುದು ಎಂದು ಹೇಳಿತ್ತು. ಅಥವಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಲಾಗುವುದು ಎಂದೂ ಸಹ ಹೇಳಲಾಗಿತ್ತು. ಪ್ರಸ್ತುತ ಸಿನಿಪ್ರಿಯರು ಡಿಸೆಂಬರ್ 25 ರಂದು ಬಿಡುಗಡೆಯಾಗುವುದಿಲ್ಲ ಎಂಬ ಮಾಹಿತಿ ಅಧಿಕೃತವಾಗಿ ದೊರೆತಿದ್ದು. ಜನವರಿಯಲ್ಲಿ ಪೊಗರು ಸಿನೆಮಾ ಬಿಡುಗಡೆ ಮಾಡಲು ತೀರ್ಮಾನ ನಡೆಸಿದೆ ಎನ್ನಲಾಗಿದೆ. ಚಿತ್ರಮಂದಿರಗಳೂ ತೆರೆದಿದ್ದರೂ ಕೂಡ ಕೋವಿಡ್ ನಿಯಮಗಳನ್ವಯ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಿನೆಮಾ ಬಿಡುಗಡೆ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಪೊಗರು ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ರಿಲೀಸ್ ಆಗಲಿದ್ದು, ಒಂದೇ ಭಾರಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇನ್ನೂ ಪೊಗರು ಸಿನೆಮಾ ಹಿಂದಿ ಡಬ್ಬಿಂಗ್ 7.5 ಕೋಟಿಗೆ ಮಾರಾಟವಾಗಿದೆ ಎಂದು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿದೆ. ಚಿತ್ರದ ನಾಯಕಿಯಾಗಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದ ಟೀಸರ್ ಹಾಗೂ ಕರಾಬು ಗೀತೆ ರಿಲೀಸ್ ಆಗಿದ್ದು, ಸಖತ್ ಹವಾ ಸೃಷ್ಟಿ ಮಾಡಿದೆ.

Previous articleಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಸಾಂಗ್
Next articleಪ್ರಿನ್ಸ್ ಮಹೇಶ್ ಬಾಬು ಪುತ್ರಿಗೆ ಗಿಫ್ಟ್ ನೀಡಿದ ಆರ್.ಆರ್.ಆರ್. ಸೀತಾ