Film News

ಪೊಗರು ಚಿತ್ರಕ್ಕೆ ತಮಿಳಿನಲ್ಲೀ ಬಾರಿ ಬೇಡಿಕೆ

ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟಿಸಿರುವ ಪೊಗರು ಚಲನಚಿತ್ರದ ಕಾಪಿರೈಟ್ಸ್‌ಗೆ ಇತರೇ ಭಾಷೆಗಳಲ್ಲಿ ಭಾರಿ ಬೇಡಿಕೆ ಬಂದಿದ್ದು, ಸುಮಾರು ೭ ಕೋಟಿ ರೂಪಾಯಿಗೆ ಹಿಂದಿ ಡಬ್ಬಿಂಗ್ ಹಕ್ಕುಗಳ ಮಾರಾಟವಾಗಿದ್ದು, ಇದೀಗ ತಮಿಳುನಲ್ಲೂ ಸಹ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಕರಾಬು ಬಾಸು ಕರಾಬು ಪೊಗರು ಗೀತೆಯ ಮೂಲಕ ಸ್ಯಾಂಡಲ್‌ವುಡ್ ನಲ್ಲಿ ಭಾರಿ ಹವಾ ಹುಟ್ಟಿಸಿರುವ ಪೊಗರು ಚಿತ್ರ ಟ್ರೈಲರ್ ಗಳ ಮೂಲಕವೇ ಭಾರಿ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಸ್ತುತ ಹಿಂದಿ ಭಾಷೆಗೆ ಅಧಿಕ ಮೊತ್ತದಲ್ಲಿ ಡಬ್ಬಿಂಗ್ ಹಕ್ಕುಗಳು ಮಾರಾಟವಾಗುತ್ತಿದ್ದಂತೆ ತಮಿಳು ಭಾಷೆಯಲ್ಲಿ ನಾಲ್ಕೈದು ನಿರ್ಮಾಣ ಸಂಸ್ಥೆಗಳು ಡಬ್ಬಿಂಗ್ ಹಕ್ಕುಗಳು ಖರೀದಿಸಲು ದುಂಬಾಲು ಬಿದ್ದಿವೆ ಎನ್ನಲಾಗುತ್ತಿದೆ.

ಮುಖ್ಯವಾಗಿ ಪಕ್ಕ ಆಕ್ಷನ್ ಸಿನೆಮಾ ಪೊಗರು ಚಿತ್ರದಲ್ಲಿ ವಿದೇಶಿ ಚಿತ್ರರಂಗದ ಬಾಡಿ ಬಿಲ್ಡರ್‌ಗಳು ನಟಿಸಿರುವುದು ವಿಶೇಷವಾಗಿದೆ. ಕನ್ನಡ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆರೆಗೆ ಬಂದ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಮಂದಣ್ಣ ರವರ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಪೊಗರು ಚಲನಚಿತ್ರ ಪಕ್ಕಾ ಆಕ್ಷನ್ ನಿಂದ ಕೂಡಿದ್ದ, ಆಕ್ಷನ್ ಚಿತ್ರಗಳಿಗಾಗಿ ಕಾಯುತ್ತಿರುವ ಸಿನಿರಸಿಕರಿಗೆ ಇದೇ ಕ್ರಿಸ್‌ಮಸ್ ಅಥವಾ ಸಂಕ್ರಾಂತಿ ಹಬ್ಬದ ವೇಳೆ ಥಿಯೇಟರ್‌ಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಚಿತ್ರವನ್ನು ನಂದ ಕಿಶೋರ್ ನಿರ್ದೇಶಿಸಿದ್ದು, ಏಕಕಾಲದಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

Trending

To Top