ಕಂಗನಾರವರ ಧಾಖಡ್ ಗೆ ದೊಡ್ಡ ಸೋಲು, ಈ ಸೋಲಿಗೆ ಖುಷಿ ಪಟ್ಟ ಮತ್ತೋರ್ವ ನಟಿ…

ಬಹುನಿರೀಕ್ಷೆ ಹುಟ್ಟಿಸಿದ ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ಅಭಿನಯ ಧಾಕಡ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿಬಿಟ್ಟಿದೆ. ಒಂದು ದಿನಕ್ಕೆ ಐವತ್ತು ಲಕ್ಷ ಸಹ ಗಳಿಸುತ್ತಿಲ್ಲ. ಜೊತೆಗೆ ಅನೇಕ ಕಡೆ ಸಿನೆಮಾ ಪ್ರದರ್ಶನವಾಗದೇ ಸಿನೆಮಾವನ್ನು ಸಹ ತೆಗೆದುಹಾಕಿದ್ದಾರಂತೆ. ಧಾಕಡ್ ಸಿನೆಮಾ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡ ನಿರ್ಮಾಪಕರು ಸಹ ಈಗ ತಲೆ ಮೇಲೆ ಕೈಹಾಕಿಕೊಂಡಿದ್ದಾರೆ. ಇದೀಗ ಈ ಸಿನೆಮಾ ಸೋಲನ್ನು ಕಂಡಿದ್ದು ಓರ್ವ ನಟಿಗೆ ತುಂಬಾ ಖುಷಿಯಾಗಿದೆ.

ಈಗಾಗಲೇ ಅನೇಕ ಬಾರಿ ನಟಿ ಕಂಗನಾ ನನಗೆ ಬಾಲಿವುಡ್ ನಲ್ಲಿ ಯಾರೂ ಗೆಳೆಯರಿಲ್ಲ ಎಂದು ಹೇಳಿದ್ದಾರೆ. ಸದಾ ಸ್ಟಾರ್‍ ನಟರನ್ನೂ ಬಿಡದೇ ಎಲ್ಲರ ವಿರುದ್ದ ಮಾತನಾಡುತ್ತಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅವರ ಸ್ವಭಾವವಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾದ ಧಾಖಡ್ ಸಿನೆಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದೊಡ್ಡ ಮಟ್ಟದ ಸೋಲನ್ನು ಕಂಡಿದ್ದಾರೆ. ಇದೊಂದು ಆಕ್ಷನ್ ಸಿನೆಮಾ ಆಗಿದ್ದು ಕಂಗನಾ ಗೂಢಾಚಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಈ ಸಿನೆಮಾ ಸಂಪೂರ್ಣವಾಗಿ ಪ್ಲಾಫ್ ಆಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಿನೆಮಾ ಕಲೆಕ್ಷನ್ ಉತ್ತಮ ಉದಾಹರಣೆಯಾಗಿದೆ.

ಇನ್ನೂ ಧಾಖಡ್ ಸಿನೆಮಾ ಸೋಲಿಗೆ ಬಾಲಿವುಡ್ ನ ಅನೇಕರು ಸಖತ್ ಖುಷಿ ಪಟ್ಟಿದ್ದಾರೆ. ಕೆಲವರು ಒಳಗೊಳಗೆ ಖುಷಿ ಪಡುತ್ತಿದ್ದರೆ. ಒಬ್ಬ ನಟಿ ಮಾತ್ರ ಬಹಿರಂಗವಾಗಿದೆ ಖುಷಿ ಪಟ್ಟಿದ್ದಾರೆ. ಧಾಖಡ್ ಸಿನೆಮಾ ಸೋಲಿಗೆ ಬಾಲಿವುಡ್ ನಟ ಪಾಯಲ್ ರೋಹಟ್ಗಿ ಸಖತ್ ಖುಷಿಯಾಗಿದ್ದಾರೆ. ಈ ಕುರಿತು ಪಾಯಲ್ ಸೋಷಿಯಲ್ ಮಿಡಿಯಾ ಮೂಲಕ ಖುಷಿಯನ್ನು ಹಂಚಿಕೊಂಡಿದ್ದಾರೆ.  ಇತ್ತಿಚಿಗೆ ಲಾಕ್ ಅಪ್ ಎಂಬ ರಿಯಾಲಿಟಿ ಶೋನಲ್ಲಿ ಪಾಯಲ್ ಸಹ ಭಾಗಿಯಾಗಿದ್ದು, ಇದರಲ್ಲಿ ಪಾಯಲ್ ಸೋತಿದ್ದರು. ಇದರಿಂದ ಕೋಪಗೊಂಡ ಪಾಯಲ್ ಧಾಖಡ್ ಸೋಲಲಿ ಎಂದು ಹೇಳಿಕೊಂಡಿದ್ದರು.  ಇದೀಗ ಧಾಖಡ್ ಸೋತಿದ್ದು, ಪಾಯಲ್ ಪುಲ್ ಖುಷಿಯಾಗಿ ಸೋಷಿಯಲ್ ಮಿಡಿಯಾ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಕಂಗನಾ ಅಭಿನಯದ ಧಾಖಡ್ ಸಿನೆಮಾ ಮೊದಲನೇ ದಿನ ಗಳಿಸಿದ್ದು 50 ಲಕ್ಷ ಮಾತ್ರ ಎಂಬ ಸುದ್ದಿಯನ್ನು ಹಂಚಿಕೊಂಡು, ಕರ್ಮ ಎಂಬುದು ತುಂಬಾ ಕೆಟ್ಟದ್ದು. ಯಾರಿಗೆ ಯಾವ ಸಮಯದಲ್ಲಿ ಹೇಗೆ ಆಡಿಸುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. 18 ಲಕ್ಷ ಮತಗಳು ಸಿಕ್ಕಿತೀ ಅವರ ಸಿನೆಮಾ ಬಗ್ಗೆ ಪ್ರಚಾರ ಮಾಡಲಿಲ್ಲ. ನಕಲಿ ಫಾಲೋವರ್ಸ್‌ಗಳು ಬಂದು ಸಿನೆಮಾ ನೋಡಲಿಲ್ಲ. ಇನ್ನೂ ಸೀತೆಯ ಪಾತ್ರದಲ್ಲಿ ಕಂಗನಾ ಸಿನೆಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೀತೆಯನ್ನು ಅವಮಾನಿಸಿದವನಿಗೆ ಆ ಸಿನೆಮಾದಲ್ಲಿ ಪಾತ್ರ ಸಿಕ್ಕರೂ ಸಿಗಬಹುದು ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಸದ್ಯ ಧಾಖಡ್ ಸಿನೆಮಾ ಮಾತ್ರ ಫೇಲ್ ಆಗಿದ್ದು, ಮೇ.20 ರಂದು ಬಿಡುಗಡೆಯಾದ ಸಿನೆಮಾ ಇನ್ನೂ ಎರಡು ಕೋಟಿಯನ್ನು ಸಹ ಗಳಿಸಿಲ್ಲವಂತೆ.

Previous articleನಟ ಯಶ್ ಮಗಳು ಐರಾ ಕ್ಯೂಟ್ ಸ್ಮೈಲ್ ಗೆ ಫಿದಾ ಆದ ನೆಟ್ಟಿಗರು.. ಪೊಟೋ ವೈರಲ್
Next articleಬಿಕಿನಿ ಪೋಸ್ ಗಳ ಮೂಲಕ ಸೋಷಿಯಲ್ ಮಿಡಿಯಾ ಅಲುಗಾಡಿಸುತ್ತಿರುವ ನಟಿ ಕೋಮಲ್ ಶರ್ಮಾ….