Film News

ಪವನ್ ಕಲ್ಯಾಣ್ ಹೊಸ ಸಿನೆಮಾ ಶೂಟಿಂಗ್ ಪ್ರಾರಂಭ!

ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಜನಸೇನಾ ಪಕ್ಷದ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇದೀಗ ಮತ್ತೊಂದು ಸಿನೆಮಾದ ಶೂಟಿಂಗ್ ಪ್ರಾರಂಭಿಸಿದ್ದಾರೆ.

ನಟ ಪವನ್ ಕಲ್ಯಾಣ್ ಮಲಯಾಳಂ ಸಿನೆಮಾದ ರಿಮೇಕ್ ನಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೂಹೂರ್ತ ಸಹ ಕೆಲವು ದಿನಗಳ ಹಿಂದೆಯೇ ನೆರವೇರಿತ್ತು. ವಕೀಲ್ ಸಾಭ್ ಚಿತ್ರದ ಶೂಟಿಂಗ್ ಮುಗಿಸಿದ ಪವನ್ ವಿರಾಮ ತೆಗೆದುಕೊಳ್ಳದೇ ಮಲಯಾಳಂನ ಅಯ್ಯುಪನುಂ ಕೋಶಿಯುಂ ರಿಮೇಕ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಇನ್ನೂ ಈ ಶೂಟಿಂಗ್‌ನ ಕೆಲವೊಂದು ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದೆ.

ಗ್ರೀನ್ ಶರ್ಟ್, ಬ್ಲೂ ಪ್ಯಾಂಟ್ ಧರಿಸಿದ ಪವನ್ ಕಲ್ಯಾಣ್ ಹಳೇಯ ಬುಲೆಟ್ ಬೈಕ್‌ನ್ನು ಚಲಾಯಿಸಿಕೊಂಡು ಹೋಗುತ್ತಿರುವ ಚಿತ್ರ ಹಾಗೂ ನಿರ್ದೇಶಕ ತ್ರಿವಿಕ್ರಮ್ ಜೊತೆಗೆ ಟೀ ಕುಡಿಯುತ್ತಿರುವ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಪವನ್ ಬುಲೆಟ್ ಮೇಲೆ ಕುಳಿತುಕೊಂಡು ಸುಧಾ ಲಾಡ್ಜ್ ಎಂಬ ಕಟ್ಟಡದ ಕಾಂಪೌಂಡಿನಿಂದ ಕೋಪವಾಗಿ ಬೈಕ್ ಚಲಾಯಿಸಿಕೊಂಡು ಹೋಗುವ ದೃಶ್ಯ ಸಿನೆಮಾತಂಡ ತಮ್ಮ ಯೂಟೂಬ್ ನಲ್ಲಿ ಪ್ರಕಟಿಸಿದ್ದು, ಇದು ಸಹ ವೈರಲ್ ಆಗುತ್ತಿದೆ.

ಈ ಚಿತ್ರವನ್ನು ತ್ರಿವಿಕ್ರಮ್ ಆಪ್ತರಾದ ಸಾಗರ್ ಕೆ ಚಂದ್ರ ನಿರ್ದೇಶನ ಮಾಡುತ್ತಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಲಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ ರವರಿಗೆ ಸಂಬಂಧಿಸಿದಂತೆ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ರಾಜಕಾರಣ ಹಾಗೂ ಪೊಲೀಸ್ ಅಧಿಕಾರಿ ನಡುವೆ ನಡೆಯುವ ಸಂಘರ್ಷದ ಕುರಿತಂತೆ ಈ ಚಿತ್ರ ನಿರ್ಮಾಣವಾಗಲಿದೆ ಎನ್ನಲಾಗಿದೆ.

Trending

To Top