ಹೈದರಾಬಾದ್; ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಇದೀಗ ಅಭಿಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ.
ಸುಮಾರು ೩ ವರ್ಷಗಳ ಬಳಿಕ ಪವನ್ ಕಲ್ಯಾಣ್ ಮತ್ತೆ ತೆರೆ ಮೇಲೆ ಅಬ್ಬರಿಸಲಿದ್ದು, ವಕೀಲ್ ಸಾಭ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇದೀಗ ವಕೀಲ್ ಸಾಬ್ ಚಿತ್ರದ ಟೀಸರ್ ಬಿಡುಗಡೆಗೆ ಸಂಬಂಧಿಸಿದಂತೆ ದಿನಾಂಕ ಹಾಗೂ ಸಮಯವನ್ನು ಘೋಷಣೆ ಮಾಡಿದೆ ಚಿತ್ರತಂಡ. ಜನವರಿ ೧೪ ರಂದು ಸಂಜೆ ೬.೦೩ ನಿಮಿಷಕ್ಕೆ ಟೀಸರ್ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಬಾಲಿವುಡ್ ನ ಪಿಂಕ್ ಸಿನೆಮಾದ ರಿಮೇಕ್ ಆದ ಈ ವಕೀಲ್ ಸಾಬ್ ಚಿತ್ರದಲ್ಲಿ ನಟ ಪವನ್ ಕಲ್ಯಾಣ್ ರೌಡಿ ವಕೀಲನಾಗಿ ಕಾಣಿಸಿಕೊಳ್ಳಲಿದ್ದಾರೆ. ೨೦೧೮ ರಲ್ಲಿ ತೆರೆ ಕಂಡ ಅಜ್ಞಾತವಾಸಿ ಚಿತ್ರದ ಬಳಿಕ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಪವನ್ ಕಲ್ಯಾಣ್ ಅದರ ನಡುವೆಯೇ ವಕೀಲ್ ಸಾಭ್ ಚಿತ್ರೀಕರಣದಲ್ಲೂ ಸಹ ಭಾಗಿಯಾಗುತ್ತಿದ್ದರು.
ಇದೀಗ ಪವನ್ ಕಲ್ಯಾಣ್ ವಕೀಲ್ ಸಾಭ್ ಟೀಸರ್ ಬಿಡುಗಡೆ ಸುದ್ದಿ ತಿಳಿದ ಅಭಿಮಾನಿಗಳು ಫಿಧಾ ಆಗಿದ್ದಾರೆ. ಬಾಲಿವುಡ್ ಪಿಂಕ್ ಚಿತ್ರದ ರಿಮೇಕ್ ಇದಾಗಿದ್ದು, ಹಿಂದಿ ಚಿತ್ರದ ಕಥೆಗಿಂತಲೂ ಅನೇಕ ಬದಲಾವಣೆಗಳನ್ನು ಚಿತ್ರದಲ್ಲಿ ಮಾಡಲಾಗಿದೆ ಎನ್ನಲಾಗಿದೆ. ಇನ್ನೂ ಈ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಪವನ್ ಕಲ್ಯಾಣ್ ರವರು ಮಲಯಾಳಂನ ಅಯ್ಯಪ್ಪನುಂ ಕೋಶಿಯಂ ಎಂಬ ಚಿತ್ರದ ರಿಮೇಕ್ ನಲ್ಲಿ ನಡಿಸಲಿದ್ದಾರೆ. ಶೀಘ್ರದಲ್ಲಿಯೇ ಶೂಟಿಂಗ್ ಕೆಲಸಗಳು ಸಹ ಪ್ರಾರಂಭವಾಗಲಿ ಎಂದು ತಿಳಿದು ಬಂದಿದೆ.
ಇನ್ನೂ ವಕೀಲ್ ಸಾಭ್ ಚಿತ್ರದ ಕ್ಲೈಮ್ಯಾಕ್ಸ್ ಪೈಟ್ ದೃಶ್ಯಗಳು ಲೀಕ್ ಆಗಿದ್ದು, ವ್ಯಬಿಚಾರ ನಡೆಯುತ್ತಿರುವ ಮನೆಯೊಂದರಲ್ಲಿ ತೊಂದರೆಯನುಭವಿಸುತ್ತಿರುವ ಯುವತಿಯರನ್ನು ರಕ್ಷಿಸುವ ಕುರಿತಂತೆ ನಡೆಯುವ ಫೈಟ್ ಸೀನ್ ದೃಶ್ಯಗಳು ಲೀಕ್ ಆಗಿದ್ದು, ಯಾವ ಕಾರಣಕ್ಕೆ ಲೀಕ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
