Film News

ಪವನ್ ಕಲ್ಯಾಣ್ PSPK27 ಚಿತ್ರ ಬಿಡುಗಡೆ ದಿನಾಂಕ ಘೋಷಣೆ!

ಹೈದರಾಬಾದ್: 17ನೇ ಶತಮಾನದಲ್ಲಿನ ರಿಯಲ್ ಸ್ಟೋರಿಗೆ ಸಂಬಂಧಿಸಿದಂತೆ ಸಿದ್ದವಾಗುತ್ತಿರುವ ಪವನ್ ಕಲ್ಯಾಣ್ ನಾಯಕನಾಗಿ ನಟಿಸುತ್ತಿರುವ ಚಿತ್ರ 2022 ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.

ದಕ್ಷಿಣ ಭಾರತದ ಸಿನಿರಂಗದಲ್ಲಿ ಸಂಕ್ರಾಂತಿ ಹಬ್ಬವೆಂದರೇ ಅದು ಸಿನೆಮಾ ಬಿಡುಗಡೆ ಹಬ್ಬವೆಂತಲೇ ಹೇಳುತ್ತಾರೆ. ಸ್ಟಾರ್ ಹಿರೋಗಳ ಸಿನೆಮಾಗಳೊಂದಿಗೆ ಅನೇಕ ಸಣ್ಣ ಹಿರೋಗಳ ಸಿನೆಮಾಗಳೂ ಸಹ ಸಂಕ್ರಾಂತಿ ಹಬ್ಬದಂದೇ ಬಿಡುಗಡೆಯಾಗುತ್ತವೆ. ಇದೀಗ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ PSPK27 ಚಿತ್ರ ಸಹ ಸಂಕ್ರಾಂತಿ ಹಬ್ಬದಂದೇ ತೆರೆಗೆ ಬರಲಿದೆ. ಇನ್ನೂ ಪ್ರಿನ್ಸ್ ಮಹೇಶ್‌ಬಾಬು ಅಭಿನಯದ ಸರ್ಕಾರುವಾರಿ ಪಾಟ ಸಿನೆಮಾ ಕೂಡ ಇದೇ ದಿನ ಬಿಡುಗಡೆಯಾಗಲಿದ್ದು, ಈ ಎರಡೂ ಸಿನೆಮಾಗಳ ನಡುವೆ ಬಿಗ್ ಪೈಟ್ ನಡೆಯಲಿದೆ ಎನ್ನಲಾಗುತ್ತಿದೆ.

ಇತ್ತೀಚಿಗಷ್ಟೆ ಸಿನೆಮಾ ರಂಗ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದು, ದೊಡ್ಡ ದೊಡ್ಡ ಸಿನೆಮಾಗಳು ಕೊರೋನಾ ಲಾಕ್‌ಡೌನ್ ಬಳಿಕ ತೆರೆಗೆ ಬರುತ್ತಿದೆ. ಈ ಹಾದಿಯಲ್ಲಿ ಟಾಲಿವುಡ್‌ನ ಕ್ರಾಕ್, ಕಾಲಿವುಡ್‌ನ ಮಾಸ್ಟರ್, ಸ್ಯಾಂಡಲ್‌ವುಡ್‌ನ ಪೊಗರು ಸಿನೆಮಾಗಳು ಲಾಭ ಕಂಡಿವೆ. ಇನ್ನೂ ಕಳೆದ ವರ್ಷ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಹಾಗೂ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಟಪುರಂಲೋ ಸಿನೆಮಾಗಳ ನಡುವೆ ಬಿಗ್ ಪೈಟ್ ಉಂಟಾಗಿ ಎರಡೂ ಚಿತ್ರಗಳೂ ಬಾಕ್ಸ್ ಆಫೀಸ್ ಲೂಟಿ ಹೊಡೆದಿತ್ತು. ಮುಂದಿನ ಸಂಕ್ರಾಂತಿ ಹಬ್ಬದಂದು ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು ಸಿನೆಮಾಗಳು ಮುಖಾಮುಖಿಯಾಗಲಿದೆ.

ಇನ್ನೂ ಖ್ಯಾತ ನಿರ್ದೇಶಕ ಕ್ರಿಷ್ ಸಾರಥ್ಯದಲ್ಲಿ ಮೂಡಿಬರಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರವೇ PSPK27 ಚಿತ್ರ. ಇನ್ನೂ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಕೆಲವೊಂದು ಫ್ಯಾನ್ ಮೇಡ್ ಪೋಸ್ಟರ್‌ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Trending

To Top