ಹೈದರಾಬಾದ್: ಮಲಯಾಳಂನಲ್ಲಿ ಹಿಟ್ ಹೊಡೆದ ಚಿತ್ರವೊಂದರ ಡಬ್ಬಿಂಗ್ ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಜೊತೆಯಾಗಿ ನಟಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸಿತಾರ ಎಂಟರ್ಟೈನ್ಮೆಂಟ್ ಸಂಸ್ಥೆಯು ಪ್ರೊಡಕ್ಷನ್ ನಂ-೧೨ ಎಂಬ ಹೆಸರಿನಲ್ಲಿ ಮೆಗಾ ಪ್ರಾಜೆಕ್ಟ್ ಘೋಷಣೆ ಮಾಡಿದ್ದು, ಈ ಚಿತ್ರದಲ್ಲಿಯೇ ಪವನ್ ಹಾಗೂ ರಾಣಾ ಒಂದಾಗಿ ಬಣ್ಣ ಹಚ್ಚಲಿದ್ದಾರಂತೆ. ಇನ್ನೂ ಈ ಚಿತ್ರದಲ್ಲಿ ಸ್ಟಾರ್ ನಟಿ ಸಾಯಿ ಪಲ್ಲವಿ ಸಹ ಅಭಿನಯಿಸಲಿದ್ದಾರೆ ಎಂಬ ವದಂತಿಗಳಿದ್ದರೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಅಂದಹಾಗೆ ಪವನ್ ಹಾಗೂ ರಾಣಾ ನಟಿಸಲಿರುವುದು ಮಲಾಯಾಳಂ ಚಿತ್ರ ಅಯ್ಯಪ್ಪನುಮ್ ಕೋಶಿಯಮ್ ಎಂಬ ಚಿತ್ರದ ರಿಮೇಕ್ ನಲ್ಲಿ. ಸಾಗರ್ ಕೆ ಚಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ತಮನ್ ಎಸ್ ಹಾಗೂ ನವೀನ್ ಸಂಕಲನ ಮಾಡಿದ್ದಾರೆ. ಇನ್ನೂ ಈ ಚಿತ್ರದ ಮೂಹೂರ್ತ ಸಹ ನೆರವೇರಿದ್ದು, ಮೂಹುರ್ತದಲ್ಲಿ ಪವನ್ ಕಲ್ಯಾಣ್ ಮಾತ್ರ ಭಾಗಿಯಾಗಿದ್ದರು.
ಸ್ಟಾರ್ ನಟರನ್ನೊಳಗೊಂಡ ಸಿನೆಮಾ ಅಂದ್ರೆ ಚಿತ್ರದ ಕುರಿತು ಈಗಾಗಲೇ ಭಾರಿ ನೀರಿಕ್ಷೆಗಳು ಹುಟ್ಟಕೊಂಡಿವೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿಯನ್ನಾಗಿ ಪವನ್ ಕಲ್ಯಾಣ್ ಗೆ ಜೋಡಿಯಾಗಿ ಸಾಯಿ ಪಲ್ಲವಿಯವರನ್ನು ಕರೆತರಲು ಪ್ಲಾನ್ ಸಹ ಮಾಡಲಾಗಿದೆ. ಆದರೆ ಇನ್ನೂ ಈ ಕುರಿತು ಅಧಿಕೃತವಾದ ಘೋಷಣೆಯಾಗಿಲ್ಲ.
ಸುಮಾರು ೨ ವರ್ಷಗಳ ನಂತರ ವಕೀಲ್ ಸಾಬ್ ಚಿತ್ರ ಮೂಲಕ ಪ್ರೇಕ್ಷಕರ ಮುಂದೆ ಪವನ್ ಕಲ್ಯಾಣ್ ಬರುತ್ತಿದ್ದು, ಸಿನೆಮಾ ತೆರೆಮೇಲೆ ಬರಲು ಸಿದ್ದವಾಗಿದೆ. ಪ್ರಸ್ತುತ ಹೊಸ ಸಿನೆಮಾ ಘೋಷಣೆ ಅದರಲ್ಲೂ ಪವನ್ ಮತ್ತು ರಾಣಾ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಚಿತ್ರವಾದ್ದರಿಂದ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.
