ಪಠಾನ್ ಸಿನೆಮಾ ಬೇಷರಮ್ ಹಾಡಿನಿಂದ ಪಠಾನ್ ಬ್ಯಾನ್ ಟ್ರೆಂಡ್, ವಲ್ಗರ್ ದೃಶ್ಯಗಳನ್ನು ತೆಗೆದು ಹಾಕುವಂತೆ ವಾರ್ನಿಂಗ್…!

ಸುಮಾರು ವರ್ಷಗಳ ಬಳಿಕ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪಠಾನ್ ಸಿನೆಮಾದ ಮೂಲಕ ತೆರೆಗೆ ಬರಲಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಪಠಾನ್ ಸಿನೆಮಾದ ಫಸ್ಟ್ ಸಿಂಗಲ್ ಬಿಡುಗಡೆಯಾಗಿತ್ತು. ಬೇಷರಮ್ ಹಾಡು ಸಿಕ್ಕಪಟ್ಟೆ ಸದ್ದು ಮಾಡಿತ್ತು. ಅದೇ ರೀತಿ ಟ್ರೋಲ್ ಸಹ ಜೋರಾಗಿಯೇ ನಡೆಯುತ್ತಿದೆ. ಇದೀಗ ಈ ಹಾಡಿನಲ್ಲಿನ ವಲ್ಗರ್‍ ದೃಶ್ಯಗಳನ್ನು ತೆಗೆದು ಹಾಕಬೇಕು. ಇಲ್ಲವಾದಲ್ಲಿ ಸಿನೆಮಾವನ್ನು ಬ್ಯಾನ್ ಮಾಡಬೇಕಾಗುತ್ತದೆ ಎಂದು ವಾರ್ನಿಂಗ್ ಗಳು ಸಹ ಹರಿದುಬರುತ್ತಿವೆ.

ಇತ್ತೀಚಿಗೆ ಬಾಲಿವುಡ್ ಸಿನೆಮಾಗಳನ್ನು ಬ್ಯಾನ್ ಮಾಡಬೇಕೆಂದು ಬಾಯ್ ಕಟ್ ಬಾಲಿವುಡ್ ಟ್ರೆಂಡ್ ಜಾಸ್ತಿ ನಡೆಯುತ್ತಿದೆ. ಇದೀಗ ಶಾರುಖ್ ಖಾನ್ ಪಠಾನ್ ಸಿನೆಮಾ ಸಹ ಬಾಯ್ ಕಟ್ ಬೀತಿಗೆ ತುತ್ತಾಗಿದೆ. ಸತತ ಸೋಲುಗಳಿಂದ ಕಂಗೆಟ್ಟ ಶಾರುಖ್ ಖಾನ್ ಸುಮಾರು ವರ್ಷಗಳ ಬಳಿಕ  ಪಠಾನ್ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಳ್ಳಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ಸಿನೆಮಾ ಜ.25 ರಂದು ಭರ್ಜರಿಯಾಗಿ ಈ ಸಿನೆಮಾ ರಿಲೀಸ್ ಆಗಲಿದೆ. ನಿರ್ದೇಶಕ ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಈ ಸಿನೆಮಾ ಹೈವೋಲ್ಟೇಜ್ ಆಕ್ಷನ್ ಸಿನೆಮಾ ಆಗಲಿದೆ. ಇನ್ನೂ ಇದೀಗ ಈ ಸಿನೆಮಾದ ಮೊದಲ ಹಾಡು ಸಖತ್ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ತುಂಬಾ ಓವರ್‍ ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಅಡ್ಡಿಯಿಲ್ಲ ಎಂಬಂತೆ ಗ್ಲಾಮರ್‍ ಶೋ ಮಾಡಿದ್ದಾರೆ ದೀಪಿಕಾ ಪಡುಕೋಣೆ. ಆಕೆ ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಠಾನ್ ಸಿನೆಮಾದ ಮೊದಲನೇ ಹಾಡಾದ ಬೇಷರಮ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಈ ಹಿಂದೆ ಎಂದೂ ಇಲ್ಲದಂತಹ ಮಾದರಿಯಲ್ಲಿ ದೀಪಿಕಾ ಓವರ್‍ ಗ್ಲಾಮರ್‍ ಶೋ ಮಾಡಿದ್ದಾರೆ. ಈ ಕಾರಣದಿಂದಲೇ ಪಠಾನ್ ಸಿನೆಮಾ ವಿವಾದದಲ್ಲಿ ಸಿಲುಕಿಕೊಂಡಿದೆ. ದೀಪಿಕಾಳ ಈ ಓವರ್‍ ಗ್ಲಾಮರ್‍ ಶೋ ಅನೇಕರಿಗೆ ಹಿಡಿಸಿಲ್ಲ. ಜೊತೆಗೆ ಶಾರುಖ್ ಖಾನ್ ಸಹ ದೀಪಿಕಾ ರವರನ್ನು ಅಸಭ್ಯಕರವಾಗಿ ಮುಟ್ಟಿದ್ದಾರೆ. ಈ ಕಾರಣದಿಂದ ದಿನದಿಂದ ದಿನಕ್ಕೆ ವಿವಾದ ಹೆಚ್ಚಾಗುತ್ತಲೇ ಇದೆ. ಈ ಕಾರಣದಿಂದ ಪಠಾನ್ ಸಿನೆಮಾವನ್ನು ಬಾಯ್ಕಟ್ ಮಾಡಬೇಕೆಂದು ಟ್ರೋಲ್ ಗಳು ಸಹ ಶುರುವಾಗಿದೆ.

ಇದೀಗ ಮಧ್ಯಪ್ರದೇಶದ ಗೃಹ ಮಂತ್ರಿ ನರೊತ್ತಮ ಮಿಶ್ರಾ ಪಠಾನ್ ಸಿನೆಮಾದ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಿನೆಮಾದಲ್ಲಿನ ಅಸಭ್ಯಕರವಾದ ದೃಶ್ಯಗಳನ್ನು ತೆಗೆಯದೇ ಇದ್ದರೇ ಸಿನೆಮಾವನ್ನೇ ತೊಲಗಿಸಬೇಕಾಗುತ್ತದೆ ಎಂದು ವಾರ್ನ್ ಮಾಡಿದ್ದಾರೆ. ಜೊತೆಗೆ ಬೇಷರಮ್ ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ಅಸಭ್ಯವಾಗಿ ಚಿತ್ರೀಕರಣ ಮಾಡಿದ್ದು, ಸರಿಯಲ್ಲ ಎಂದು ಆರೋಪಿಸಿದ್ದಾರೆ. ಇನ್ನೂ ಈ ಸಿನೆಮಾ ಬಿಡುಗಡೆಗೂ ಮುಂಚೆಯೇ ಅನೇಕ ವಿವಾದಗಳಿಗೆ ಎದುರಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Previous articleಪಿಂಕ್ ಡ್ರೆಸ್ ನಲ್ಲಿ ಫನ್ನಿ ಪೋಸ್ ಕೊಟ್ಟ ಮಲಯಾಳಿ ಬ್ಯೂಟಿ ಅನುಪಮಾ, ಗ್ಲಾಮರಸ್ ಪೋಟೊಸ್ ವೈರಲ್…!
Next articleಥೈಸ್, ಕ್ಲೀವೇಜ್ ಪೊಟೋಸ್ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಹಾಟ್ ಬ್ಯೂಟಿ ಕಿಯಾರಾ….!