Saturday, May 21, 2022
HomeFilm Newsಸಲಾರ್ ಸಿನೆಮಾ ಅಪ್ಡೇಟ್‌ ಗಾಗಿ ಸೂಸೈಡ್ ಲೆಟರ್ ಬರೆದ ಪ್ರಭಾಸ್ ಅಭಿಮಾನಿ.…

ಸಲಾರ್ ಸಿನೆಮಾ ಅಪ್ಡೇಟ್‌ ಗಾಗಿ ಸೂಸೈಡ್ ಲೆಟರ್ ಬರೆದ ಪ್ರಭಾಸ್ ಅಭಿಮಾನಿ.…

ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಸಿನೆಮಾದ ಅಪ್ಡೇಟ್ ಗಾಗಿ ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಸೂಸೈಡ್ ಮಾಡಿಕೊಳ್ಳುವುದಾಗಿ ಟ್ವಿಟರ್‍ ಮೂಲಕ ತಿಳಿಸಿದ್ದ. ಇದೀಗ ಅಂತಹುದೇ ಘಟನೆ ಟಾಲಿವುಡ್ ನಲ್ಲೂ ಸಹ ನಡೆದಿದೆ. ಪ್ರಭಾಸ್ ಅಭಿಮಾನಿಯೊಬ್ಬ ಸಲಾರ್‍ ಸಿನೆಮಾ ಅಪ್ಡೇಟ್ ಬಾರದ ಕಾರಣ ಸೂಸೈಡ್ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್‍ ಬರುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಈಗಾಗಲೇ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ದೊಡ್ಡ ಸಂಖ್ಯೆಯಲ್ಲಿ ಫಾಲೊಯಿಂಗ್ ಹೊಂದಿದ್ದಾರೆ. ವಿಶ್ವದಾದ್ಯಂತ ಪ್ರಭಾಸ್ ಅಭಿಮಾನಿಗಳಿದ್ದಾರೆ.  ಇನ್ನೂ ಪ್ರಭಾಸ್ ರವರ ಸಲಾರ್‍ ಸಿನೆಮಾಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇತ್ತ ಸೋಷಿಯಲ್ ಮಿಡಿಯಾದಲ್ಲೂ ಸಹ ಪ್ರಭಾಸ್ ಸಲಾರ್‍ ಸಿನೆಮಾ ಕುರಿತು ಅಪ್ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.

ಆದರೆ ಒಬ್ಬ ಅಭಿಮಾನಿ ಸಲಾರ್‍ ಸಿನೆಮಾ ಅಪ್ಡೇಟ್ ನೀಡದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ನಿರ್ದೇಶಕ ಪ್ರಶಾಂತ್ ನೀಲ್ ರವರಿಗೆ ಸೂಸೈಡ್ ಲೆಟರ್‍ ಅನ್ನು ಪೋಸ್ಟ್ ಮಾಡಿದ್ದು, ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ಇನ್ನೂ ಈ ಹಿಂದೆ ಮೇ ಮಾಹೆಯಲ್ಲಿ ಸಲಾರ್‍ ಸಿನೆಮಾದ ಅಪ್ಡೇಟ್ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಈ ಕಾರಣದಿಂದ ನೊಂದ ಪ್ರಭಾಸ್ ಹಾರ್ಡ್‌ಕೋರ್‍ ಫ್ಯಾನ್ ಒಬ್ಬರು ಅಪ್ಡೇಟ್ ಗಾಗಿ ಆತ್ಮಹತ್ಯೆ ಪೋಸ್ಟ್ ಒಂದು ಪ್ರಶಾಂತ್ ನೀಲ್ ಗೆ ಕಳುಹಿಸಿದ್ದಾನೆ.

ಸಲಾರ್‍ ಸಿನೆಮಾಗೆ ಸಂಬಂಧಿಸಿದಂತೆ ಫಸ್ಟ್ ಗ್ಲಿಂಪ್ಸ್ ಮೇ ಮಾಹೆ ಒಳಗೆ ಮಾಡದೇ ಇದ್ದರೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾನೆ. ಇನ್ನೂ ಈ ಕುರಿತು ಪೊಲೀಸರು ಸಹ ರಿಯಾಕ್ಟ್ ಆಗಿದ್ದು, ಆ ಅಭಿಮಾನಿಯ ವಿವರಗಳನ್ನು ಕಳುಹಿಸಿ ಎಂದು ಪೋಸ್ಟ್ ಮಾಡಿದ್ದಾರಂತೆ. ಇನ್ನೂ ಕೆಲವರು ಇದೇನು ಹುಚ್ಚಾಟ. ನೀನು ಸತ್ತರೇ ನಿಮ್ಮ ಕುಟುಂಬಕ್ಕೆ ನಷ್ಟ ಬೇರೆಯವರಿಗೆ ಏನು ಇಲ್ಲ ಎಂದು ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಸಲಾರ್‍ ಚಿತ್ರತಂಡ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ.

- Advertisement -

You May Like

More