ಡಾಲಿಂಗ್ ಪ್ರಭಾಸ್ ಸಂಭಾವನೆ ಏರಿಕೆ. ಬರೊಬ್ಬರಿ 120 ಕೋಟಿ ಪಡೆಯುವ ಮೂಲಕ ಟಾಪ್ 2ನೇ ಸ್ಥಾನ…!

ದೇಶದಲ್ಲಿ ಪ್ಯಾನ್ ಇಂಡಿಯಾ ಸಿನೆಮಾಗಳು ಬಂದ ಮೇಲೆ ನಟರ ಸಂಭಾವನೆಯಲ್ಲೂ ಸಹ ಏರಿಕೆಯಾಗಿದೆ. ಕೇವಲ ನಟರು ಮಾತ್ರವಲ್ಲದೇ ಸಿನೆಮಾ ಮೇಕಿಂಗ್ ಕಂಪನಿಗಳು, ಕಲಾವಿದರ ಸ್ಥಿತಿ ಸಹ ತುಂಬಾನೆ ಬದಲಾಗಿದೆ. ಅನೇಕ ಸ್ಟಾರ್‍ ನಟರ ಸಂಭಾವನೆಗಳೂ ಸಹ ಏರಿದೆ. ಎಲ್ಲರೂ ನೂರು ಕೋಟಿ ಸಂಭಾವನೆಯತ್ತ ಸಾಗುತ್ತಿದ್ದಾರೆ. ದೇಶದ ಸಿನಿರಂಗದಲ್ಲಿ ನೂರು ಕೋಟಿ ಸಂಭಾವನೆ ಪಡೆಯುತ್ತಿದ್ದ ನಟರ ಪೈಕಿ ಹೆಚ್ಚಾಗಿ ಬಾಲಿವುಡ್ ನಟರೇ ಇದ್ದರು. ಇದೀಗ ಸೌತ್ ನಲ್ಲೂ ಸಹ ಕೆಲವು ನಟರು ನೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ದೇಶದ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಂಬರ್‍ ಸ್ಥಾನದಲ್ಲಿ ಕಾಲಿವುಡ್ ಸೂಪರ್‍ ಸ್ಟಾರ್‍ ರಜನೀಕಾಂತ್ ಸ್ಥಾನ ಪಡೆದುಕೊಂಡಿದ್ದರು. ಸುಮಾರು 150 ಕೋಟಿ ಸಂಭಾವನೆ ಪಡೆಯುವ ಮೂಲಕ ಟಾಪ್ ನಟರಾಗಿದ್ದರು. ಇದೀಗ ಈ ಸಾಲಿಗೆ ಪ್ರಭಾಸ್ ಸಹ ಸೇರಿದ್ದಾರೆ. ದೊಡ್ ಮಟ್ಟದ ಸಂಭಾವನೆ ಪಡೆದುಕೊಳ್ಳುವ ಮೂಲಕ ಟಾಪ್ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ನೂರು ಕೋಟಿ ಸಂಭಾವನೆ ಹೆಚ್ಚಿಸಿಕೊಂಡ ನಟರಲ್ಲಿ ಪ್ರಭಾಸ್ ಸಹ ಒಬ್ಬರಾಗಿದ್ದಾರೆ. ಬಾಲಿವುಡ್ ನ ಸಲ್ಮಾನ್ ಖಾನ್ ಸುಲ್ತಾನ್ ಹಾಗೂ ಟೈಗರ್‍ ಜಿಂದಾ ಹೈ ಎಂಬ ಸಿನೆಮಾ ಗಳಿಗಾಗಿ ನೂರು ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಅದೇ ರೀತಿಯ ಅಕ್ಷಯ್ ಕುಮಾರ್‍ ಬೆಲ್ ಬಾಟಂ ಸಿನೆಮಾಗಾಗಿ ನೂರು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. ಪ್ರಭಾಸ್ ಸಹ ನೂರು ಕೋಟಿ ಪಡೆಯುತ್ತಿದ್ದರು, ಇದೀಗ ನೂರು ಕೋಟಿ ಗಡಿ ದಾಟಿದ್ದಾರೆ.

ನಟ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಮುನ್ನುಗ್ಗುತ್ತಿದ್ದಾರೆ. ಬಾಹುಬಲಿ ಸಿನೆಮಾ ಬಳಿಕ ಪ್ರಭಾಸ್ ನ್ಯಾಷನಲ್ ಸ್ಟಾರ್‍ ಆದರು. ಪ್ರಭಾಸ್ ಬಹುನಿರೀಕ್ಷಿತ ಆದಿಪುರುಷ್ ಸಿನೆಮಾಗೆ ನೂರು ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಜೊತೆಗೆ 150 ಕೋಟಿ ಗೆ ಬೇಡಿಕೆ ಸಹ ಇಟ್ಟಿದ್ದರು ಎನ್ನಲಾಗುತ್ತಿತ್ತು. ಆದರೆ ಪ್ರಭಾಸ್ 25% ರಷ್ಟು ಸಂಭಾವನೆಯನ್ನು ಏರಿಸಿಕೊಂಡ ಹಿನ್ನೆಲೆಯಲ್ಲಿ ಅವರ ಸಂಭಾವನೆ ಈಗ ನೂರು ಕೋಟಿಯಿಂದ 120 ಕೋಟಿಗೆ ಏರಿಕೆ ಯಾಗಿದೆ. ಆ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯುವಂತ ನಟರಲ್ಲಿ ಟಾಪ್ 2 ಸ್ಥಾನದಲ್ಲಿದ್ದಾರೆ ನಟ ಪ್ರಭಾಸ್.

ಕಾಲಿವುಡ್ ಸೂಪರ ಸ್ಟಾರ್‍ ರಜನಿಕಾಂತ್ ರವರು ಅವರ 169ನೇ ಸಿನೆಮಾಗಾಗಿ ಬರೊಬ್ಬರಿ 150 ಕೋಟಿ ಸಂಭಾವನೆ ಪಡೆದುಕೊಳ್ಳುವ ಮೂಲಕ ದೇಶದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಟಾಪ್ 1 ಸ್ಥಾನದಲ್ಲಿದ್ದಾರೆ. ಇದೀಗ ಪ್ರಭಾಸ್ ಟಾಪ್2 ಸ್ಥಾನದಲ್ಲಿದ್ದಾರೆ. ಇನ್ನೂ ನಟ ಪ್ರಭಾಸ್ ರವರು ಮತಷ್ಟು ಸಂಭಾವನೆ ಏರಿಕೆ ಮಾಡಿಕೊಳ್ಳುವ ಕಾಲ ಹತ್ತಿರದಲ್ಲೇ ಇದೆ. ಇದಕ್ಕೆ ಕಾರಣ ಸಲಾರ್‍, ಆಧಿಪುರುಷ್, ಪ್ರಾಜೆಕ್ಟ್ ಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಈ ಸಿನೆಮಾಗಳ ಬಳಿಕ ಅವರ ಸಂಭಾವನೆ ಮತಷ್ಟು ಏರಲಿದೆ ಎಂದು ಹೇಳಲಾಗುತ್ತಿದೆ.

Previous articleನಟ ದಿಗಂತ್ ಗೆ ಈಗ ಹೇಗಿದ್ದಾರೆ? ಯಾವಾಗ ಡಿಸ್ಚಾಜ್ ಆಗ್ತಾರೆ? ಐಂದ್ರಿತಾ ಏನು ಹೇಳಿದ್ರು..!
Next articleಜಾಕ್ ಪಾಟ್ ಹೊಡೆದ ರಶ್ಮಿಕಾ ಮಂದಣ್ಣ, ಸಲ್ಲು ಭಾಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರಶ್…!