8 ಭಾಷೆಯಲ್ಲಿ ಬಿಡುಗಡೆ ಆಗಲಿದೆ ಪೈಲ್ವಾನ್! ಕನ್ನಡ ಸಿನಿಮಾ ರಂಗಕ್ಕೆ ಮತ್ತೊಂದು ಗರಿ ತಂದುಕೊಟ್ಟ ಕಿಚ್ಚ ಸುದೀಪ್

pailwan1
pailwan1

ಇತ್ತೀಚಿಗೆ ನಮ್ಮ ಕನ್ನಡ ಚಿತ್ರಗಳು ಇಡೀ ದೇಶದ ಗಮನ ಸೆಳೆಯುತ್ತಿವೆ. ನಮ್ಮ ಭಾರತದ ದೊಡ್ಡ ದೊಡ್ಡ production ಹೌಸ್ ಗಳು ನಮ್ಮ ಕನ್ನಡ ಚಿತ್ರ ರಂಗದತ್ತ ಮುಖಮಾಡಿವೆ. ಇದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಇತ್ತೀಚಿಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ KGF ಚಿತ್ರ ಇಡೀ ಭಾರತದಲ್ಲಿ 5 ಭಾಷೆಯಲ್ಲಿ ಬಿಡುಗಡೆ ಆಗಿ ಎಲ್ಲರ ಪ್ರಶಂಸೆಗೆ ಕಾರಣ ವಾಗಿತ್ತು. ಈಗ ಪ್ರತಿಯೊಬ್ಬ ಕನ್ನಡಿಗ ಖುಷಿ ಪಡುವ ಮತ್ತೊಂದು ಸುದ್ದಿ ಬಂದಿದೆ. ಅದೇನಪ್ಪ ಅಂದರೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ ಕನ್ನಡ ಚಿತ್ರ ಪೈಲ್ವಾನ್ ಬರೋಬ್ಬರಿ 8 ಭಾಷೆಯಲ್ಲಿ ಡಬ್ ಆಗಲಿದೆ.
ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ! ನಮ್ಮ ಕಿಚ್ಚ ಸುದೀಪ್ ಅವರು ಈಗಾಗಲೇ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ನಟಿಸಿ ಇಡೀ ದೇಶದಲ್ಲಿ ಮನೆ ಮಾತಾಗಿದ್ದಾರೆ. ಈಗ ಅವರ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರಕ್ಕೆ ಬರೋಬ್ಬರಿ 30 ಕೋಟಿಯ ಡಬ್ಬಿಂಗ್ ರೈಟ್ಸ್ ಬಂದಿದೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಭಾರತದ 8 ಭಾಷೆಯಲ್ಲಿ ಡಬ್ ಆಗಲಿದೆ. ಇದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಾಗು ಕನ್ನಡಿಗರಿಗೆ ಸಂತೋಷ ತಂದಿರುವ ಸುದ್ದಿ ಎಂದೇ ಹೇಳಬಹುದು. ಕಿಚ್ಚ ಸುದೀಪ್ ಅವರಿಗೆ ಹಾಗು ಪೈಲ್ವಾನ್ ಚಿತ್ರ ತಂಡಕ್ಕೆ ಒಂದು ಸಲಾಂ!
ಕನ್ನಡದ ಬಹು ನಿರೀಕ್ಷೆಯ ಚಿತ್ರ ಪೈಲವಾನ್ ಚಿತ್ರದಲ್ಲಿ ಕಿಚ್ಚ ಸುದೀಪ್ , Aakanksha ಸಿಂಗ್, ಸುನಿಲ್ ಶೆಟ್ಟಿ, Kabir Duhan ಸಿಂಗ್ ಅವರು ನಟಿಸಿದ್ದಾರೆ. ಪೈಲ್ವಾನ್ ಚಿತ್ರವನ್ನು ಕನ್ನಡದ ace ನಿರ್ದೇಶಕ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಪೈಲ್ವಾನ್ ಚಿತ್ರವನ್ನು ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಇದಲ್ಲದೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಪೈಲ್ವಾನ್ ಚಿತ್ರಕ್ಕೆ ಸಂಗೀತವನ್ನು ಕಂಪೋಸ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ , ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.