Film News

ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಪರಭಾಷೆ ಚಿತ್ರಗಳು

ಬೆಂಗಳೂರು: ಕೊರೋನಾ ಕಾರಣದಿಂದಾಗಿ ತಿಂಗಳು ಕಾಲ ಬಂದ್ ಆಗಿದ್ದ ಚಿತ್ರಮಂದಿರಗಳು ಈಗ ತೆರೆದಿದ್ದು, ಶೇ.೫೦ ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಇದೀಗ ಕರ್ನಾಟಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರಗಳು ಸಂಕ್ರಾಂತಿ ಹಬ್ಬದಂದು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಕೊರೊನಾ ಲಾಕ್ ಡೌನ್ ನಿಯಮಗಳು ಹಂತ ಹಂತವಾಗಿ ಸಡಲಿಕೆ ಮಾಡಿದ ನಂತರ ಬಾಕಿಯಿದ್ದ ಚಿತ್ರದ ಶೂಟಿಂಗ್ ಗಳು ಸಹ ಪ್ರಾರಂಭವಾಗಿದ್ದು, ಸ್ಟಾರ್ ನಟರ ಚಿತ್ರಗಳು ಸಹ ಪೂರ್ಣಗೊಂಡಿದ್ದು, ಈಗಾಗಲೇ ಪೂರ್ಣಗೊಂಡ ಬಿಗ್ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಕಾಲಿವುಡ್ ನ ಸ್ಟಾರ್ ನಟ ವಿಜಯ್ ಅಭಿನಯದ ಮಾಸ್ಟರ್ ಹಾಗೂ ಟಾಲಿವುಡ್ ನ ಮಾಸ್ ಮಹಾರಾಜ ರವಿತೇಜ ಅಭಿನಯದ ಕ್ರ್ಯಾಕ್ ಚಿತ್ರಗಳು ಇದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ. ಆದರೆ ಕನ್ನಡದ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದ ಅನುಮಾನವಾಗಿದೆ.

ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಕನ್ನಡದಲ್ಲೂ ರಿಮೇಕ್ ಆಗಿದ್ದು, ಜ.೧೩ ರಂದು ಬಿಡುಗಡೆಯಾಗುತ್ತಿದೆ. ತಮಿಳು ಭಾಷೆಯ ಜೊತೆಗೆ ತೆಲುಗು, ಕನ್ನಡ ಭಾಷೆಯಲ್ಲೂ ಸಹ ಮಾಸ್ಟರ್ ರಿಲೀಸ್ ಆಗಲಿದ್ದು, ಬೆಂಗಳೂರಿನ ನರ್ತಕಿ, ವೀರೇಶ್, ವೀರಭದ್ರೇಶ್ವರ, ಕಾಮಾಕ್ಯ, ಶಾರದ, ಸಿದ್ದಲಿಂಗೇಶ್ವರ, ಗೋವಾರ್ಧನ್, ಭಾರತಿ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನೂ ರವಿತೇಜ ಅಭಿನಯದ ಕ್ರ್ಯಾಕ್ ಸಿನೆಮಾ ಸಹ ಜನವರಿ ೯ ರಂದು ಬಿಡುಗಡೆಯಾಗಲಿದ್ದು, ಬೆಂಗಳೂರು ಸೇರಿದಂತೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇನ್ನೂ ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ ಪೊಗರು, ರಾಬರ್ಟ್, ಸಲಗ, ಕೋಟಿಗೊಬ್ಬ ೩ ಚಿತ್ರಗಳು ಸಹ ಬಿಡುಗಡೆಗೆ ರೆಡಿಯಾಗಿದ್ದು, ಬಿಡುಗಡೆಯ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Trending

To Top