ಹತ್ತೇ ದಿನಕ್ಕೆ ಬರೋಬ್ಬರಿ 11 ಕೋಟಿ ಕಲೆಕ್ಷನ್ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಆರೆಂಜ್!

ganesh
ganesh

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಅವರ ಇತ್ತೀಚಿಗೆ ಬಿಡುಗಡೆ ಆದ ಆರೆಂಜ್ ಚಿತ್ರ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಆರೆಂಜ್ ಚಿತ್ರವನ್ನು ಪ್ರಶಾಂತ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹೀರೋಯಿನ್ ಆಗಿ ಪ್ರಿಯ ಆನಂದ್ ಅವರು ನಟಿಸಿದ್ದಾರೆ. ಆರೆಂಜ್ ಚಿತ್ರವನ್ನು ಕನ್ನಡಿಗರು ಗೆಲ್ಲಿಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಆರೆಂಜ್ ಚಿತ್ರ 10 ದಿನದಲ್ಲಿ ಬರೋಬ್ಬರಿ 11 ಕೋಟಿಯನ್ನು ಗಳಿಸಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಸದ್ಯ ಕನ್ನಡದಲ್ಲಿ ಬಹಳ ಬ್ಯುಸಿ ಇರುವ ಸ್ಟಾರ್ ನಟ. ಗೋಲ್ಡನ್ ಸ್ಟಾರ್ ಗಣೇಶ್ ಮಾಡಿರುವ 80 % ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇನ್ನೊಂದು ವಿಶೇಷ ಏನಪ್ಪಾ ಅಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸಿರುವ ಚಿತ್ರಗಳು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದರೆ ಅದು ಬ್ಲಾಕ್ ಬಸ್ಟರ್ ಎಂದೇ ಹೇಳಬಹುದು. ಗಣೇಶ್ ನಟಿಸಿರುವ ಮುಂಗಾರು ಮಳೆ, ಮಳೆಯಲಿ ಜೊತೆಯಲಿ, ಶ್ರಾವಣಿ ಸುಬ್ರಮಣ್ಯ, ಚಮಕ್ ಹಾಗು ಈಗ ಆರೆಂಜ್. ಎಲ್ಲಾ ಡಿಸೆಂಬರ್ ನಲ್ಲಿ ಬಿಡುಗಡೆ ಆದ ಚಿತ್ರಗಳು.
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಹೊಸ ಚಿತ್ರಗಳಾದ ಗಿಮ್ಮಿಕ್, ಗೀತಾ ಹಾಗು 99 ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಮೂರು ಚಿತ್ರಗಳು ಮುಂದಿನ ವರ್ಷ ತೆರೆ ಕಾಣಲಿದೆ. ಇದಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಿರುತೆರೆಯಲ್ಲಿ ನಡೆಸಿ ಕೊಡುವ ಸೂಪರ್ ಮಿನಿಟ್ ಗೇಮ್ ಶೋ ಕೂಡ TRP ಅಲ್ಲಿ ಬೇರೆ ಎಲ್ಲಾ ಶೋಗಳನ್ನು ಮೀರಿಸಿದೆ ಎಂದೇ ಹೇಳಬಹುದು.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿಗಳಿಗೆ ವರ್ಷ ಪೂರ್ತಿ ಹಬ್ಬ ಎಂದೇ ಹೇಳಬಹುದು. ಗಣೇಶ್ ಅವರು ಪ್ರತಿ ವರ್ಷ ಸುಮಾರ್ 2 ರಿಂದ 3 ಸೂಪರ್ ಹಿಟ್ ಚಿತ್ರಗಳನ್ನು ಕೊಡುತ್ತಲೇ ಬಂದಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಆರೆಂಜ್ ಚಿತ್ರಕ್ಕೆ ಈಗಾಗಲೇ ಬಹಳಷ್ಟು ಬೇರೆ ಭಾಷೆಯ ನಿರ್ಮಾಪಕರು ಡಬ್ಬಿಂಗ್ ರೈಟ್ಸ್ ಕೊಳ್ಳಲು ರೆಡಿ ಇದ್ದಾರೆ. ಇದಲ್ಲದೆ ಆರೆಂಜ್ ಚಿತ್ರವನ್ನು ಅಮೆಜಾನ್ ಹಾಗು ನೈಟ್ಲಿಫ್ಲಿಸ್ ಅವರಿಗೆ ಕೂಡ ಮಾರಾಟ ಮಾಡಲಾಗಿದೆ.

Previous articleGolden star Ganesh starrer Orange collects a whooping 10 crore in 10 days! Sets a new record
Next article(video)ಜೋಗಿ ಪ್ರೇಮ್ ಆಫೀಸ್ ಮುಂದೆ ಹುಡುಗರಿಗೆ ಹೊಡೆಯಲು ಹೋದ ಕನಕಪುರ ಶ್ರೀನಿವಾಸ್! ಶಾಕಿಂಗ್ ವಿಡಿಯೋ