ಅಮೇರಿಕಾದ ಕ್ಯಾಲಿಪೋರ್ನಿಯಾ ಬೀದಿಯಲ್ಲಿ ಹೂ ಅಂಟಾವಾ ಮಾಮ ಹಾಡಿನ ಹವಾ….

ಟಾಲಿವುಡ್ ನಲ್ಲಿ ಕಳೆದ ವರ್ಷ ಬಿಗೆಸ್ಟ್ ಹಿಟ್ ಆದ ಸಿನೆಮಾಗಳಲ್ಲಿ ಪುಷ್ಪಾ ಸಹ ಒಂದಾಗಿದೆ. ಈ ಸಿನೆಮಾದಲ್ಲಿ ಕೆಲವೊಂದು ಡೈಲಾಗ್ ಗಳು ಹಾಗೂ ಹಾಡುಗಳು ಎಲ್ಲರ ಬಾಯಲ್ಲಿ ಬರುತ್ತಿರುತ್ತವೆ. ಇಂದಿಗೂ ಸಹ ಈ ಸಿನೆಮಾದ ತಗ್ಗೇದೆ ಲೇ ಎಂಬ ಡೈಲಾಗ್, ಸಮಂತಾ ಹೆಜ್ಜೆ ಹಾಕಿರುವ ಹೂ ಅಂಟಾವಾ ಮಾಮ ಹಾಡಂತೂ ಮೋಸ್ಟ್ ಪಾಪ್ಯುಲರ್‍ ಆಗಿಬಿಟ್ಟಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಸ್ಟಾರ್‍ ಗಳೂ ಸಹ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ವಿದೇಶದಲ್ಲೂ ಸಹ ಹೂ ಅಂಟಾವಾ ಮಾಮಾ ಹಾಡು ಸದ್ದು ಮಾಡುತ್ತಿದೆ.

ಟಾಲಿವುಡ್ ನಿರ್ದೇಶಕ ಸುಕುಮಾರ್‍ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ತೆರೆಕಂಡ ಪುಷ್ಪಾ ದಿ ರೈಸ್ ಸಿನೆಮಾ ಸಿನಿರಂಗದಲ್ಲಿ ದೊಡ್ಡ ಸೆನ್ಷೆಷನಲ್ ಹಿಟ್ ಆದ ಸಿನೆಮಾ. ಸಿನೆಮಾ ಬಿಡುಗಡೆಯಾಗಿ ಸುಮಾರು ತಿಂಗಳುಗಳು ಕಳೆದರೂ ಸಿನೆಮಾದ ಹವಾ ಮಾತ್ರ ಕಡಿಮೆಯಾಗಿಲ್ಲ. ದೇಶದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ಸಿನೆಮಾಗಳ ಸಾಲಿನಲ್ಲಿ ಪುಷ್ಪ ಸಹ ಸ್ಥಾನ ಸಂಪಾದಿಸಿದೆ. ಇನ್ನೂ ಸಮಂತಾ ಮೊದಲ ಬಾರಿಗೆ ಐಟಂ ಸಾಂಗ್ ನಲ್ಲಿ ಹೆಜ್ಜೆಹಾಕಿದ್ದಾರೆ. ಪುಷ್ಪಾ ಸಿನೆಮಾದ ಹೂ ಅಂಟಾವಾ ಮಾಮ ಎಂಬ ಹಾಡಿಗೆ ಕಡಿಮೆ ಪ್ರಮಾಣ ಡ್ರಸ್ ಧರಿಸಿ, ಟ್ಯೂನ್ ಗೆ ತಕ್ಕಂತೆ ಸ್ಟೇಪ್ಸ್ ಹಾಕಿದ್ದಾರೆ. ಸಮಂತಾಳ ಗ್ಲಾಮರಸ್ ಪೋಸ್ ಗೆ, ಭರ್ಜರಿ ಸ್ಟೆಪ್ಸ್ ಗೆ ಸಿನಿರಂಗದಲ್ಲಿ ಸಖತ್ ಸೌಂಡ ಮಾಡಿತ್ತು. ಪ್ರತಿಯೊಬ್ಬರೂ ಸಹ ಈ ಹಾಡಿಗೆ ಫಿಧಾ ಆಗಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಪುಷ್ಪಾ ಸಿನೆಮಾದ ಡೈಲಾಗ್ ಹಾಗೂ ಸ್ಪೇಷಲ್ ಸಾಂಗ್ ಎಲ್ಲರ ಬಾಯಲ್ಲೂ ಸ್ಥಿರವಾಗಿದೆ. ಸಾಮಾನ್ಯರಿಂದ ಸೆಲೆಬ್ರೆಟಿಗಳು, ಕ್ರಿಕೆಟಿಗರೂ ಸಹ ಈ ಸಿನೆಮಾ ಡೈಲಾಗ್ ಹಾಗೂ ಐಟಂ ಸಾಂಗ್ ಗೆ ಮಾರುಹೋಗಿದ್ದರು. ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ನಲ್ಲಿ ಹೂ ಅಂಟಾವಾ ಮಾಮ ಸಾಂಗ್ ಸಖತ್ ವೈರಲ್ ಆಗಿದೆ. ಇಂದಿಗೂ ಸಹ ರೀಲ್ಸ್ ಗಳಲ್ಲಿ ಇದೇ ಸಾಂಗ್ ಸಖತ್ ಫೇಮಸ್ ಆಗಿದೆ. ಇನ್ನೂ ಇತ್ತೀಚಿಗಷ್ಟೆ ಅಮೇರಿಕಾದ ಕ್ಯಾಲಿಫೋರ್ನಿಯಾ ಬೀದಿಯಲ್ಲೂ ಸಹ ಹೂ ಅಂಟಾವಾ ಮಾಮ ಹಾಡು ಹವಾ ಸೃಷ್ಟಿಸಿದೆ. ಹದಿಮೂರು ವರ್ಷದ ಹುಡುಗಿಯೊಬ್ಬಳು ವಯಲೀನ್ ಮೂಲಕ ಹೂ ಅಂಟಾವಾ ಮಾಮ ಹಾಡಿಗೆ ಮ್ಯೂಸಿಕ್ ನೀಡಿದ್ದಾರೆ.

ಕರೋಲಿನಾ ಪ್ರೊಟ್ಸೆಂಕೋ ಎಂಬ ಹುಡುಗಿ ಪುಷ್ಪಾ ಸಿನೆಮಾದ ಹೂ ಅಂಟಾವಾ ಮಾಮ ಹಾಡಿಗೆ ಭರ್ಜರಿಯಾಗಿ ವಯಲೀನ್ ಮೂಲಕ ಮ್ಯೂಸಿಕ್ ನೀಡಿದ್ದಾಳೆ. ವಯಲಿನ್ ಮೂಲಕ ಹೂ ಅಂಟಾವಾ ಮಾಮ ಹಾಡಿಗೆ ಕವರ್‍ ಸಾಂಗ್ ಮಾಡಿ ಎಲ್ಲರ ದೃಷ್ಟಿಯನ್ನು ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಕರೋಲಿನಾ ಪುಷ್ಪಾ ಸಿನೆಮಾದ ಶ್ರೀವಲ್ಲಿ ಹಾಡಿಗೆ ವಯಲೀನ್ ಮೂಲಕ ಮ್ಯೂಸಿಕ್ ನೀಡಿದ್ದರು. ಆ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

Previous articleಬ್ರಾ ಲೆಸ್ ನಲ್ಲಿ ಕಾಣಿಸಿಕೊಂಡ ನಟಿ ಈಶಾ ಗುಪ್ತಾ.. ನಟಿಯ ಬೋಲ್ಡ್ ಲುಕ್ ಗೆ ಫಿದಾ ಆದ ಅಭಿಮಾನಿಗಳು…
Next articleಅಣ್ಣಮ್ಮ ದೇವಾಲಯದಲ್ಲಿ ನಟಿ ಅಮೂಲ್ಯ ಕುಟುಂಬ.. ಮಕ್ಕಳೊಂದಿಗೆ ದೇವರ ಹರಕೆ ತೀರಿಸಿಕೊಂಡರು…