Film News

ಜ.26 ರಂದು ಮೆಗಾ ಫ್ಯಾನ್ಸ್ ಬಿಗ್ ಸರ್ಪೈಸ್!

ಹೈದರಾಬಾದ್: ದೇಶದಾದ್ಯಂತ ಇರುವ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಇದೇ ಜ.26 ರಂದು ಬಿಗ್ ಸರ್ಪೈಸ್ ದೊರೆಯಲಿದೆ ಎನ್ನಲಾಗಿದ್ದು, ಈ ಸರ್ಪೈಸ್ ಆದರೂ ಏನು ಎಂಬುದರ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು.

ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಆಚಾರ್ಯ ಸಿನೆಮಾದ ಶೂಟಿಂಗ್ ಭರದಿಂದ ಕಾಯುತ್ತಿದ್ದು, ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಜೆಟ್ ಸಿನೆಮಾ ಇದಾಗಿದ್ದು, ಚಿತ್ರದ ಕೆಲವೊಂದು ಸನ್ನಿವೇಶಗಳ ಚಿತ್ರೀಕರಣಕ್ಕಾಗಿಯೇ ಕೋಟ್ಯಂತರ ರೂಪಾಯಿಗಳಲ್ಲಿ ಸೆಟ್ ಸಹ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಚಿತ್ರ ಬಾಕ್ಸ್ ಆಫಿಸ್ ಬ್ರೇಕ್ ಮಾಡಲಿದೆ ಎಂದೇ ಹೇಳಲಾಗುತ್ತಿದ್ದು, ಇಲ್ಲಿಯವರೆಗೂ ಚಿತ್ರದ ರಿಲೀಸ್ ಡೇಟ್ ಕುರಿತಂತೆ ಯಾವುದೇ ಮಾಹಿತಿ ದೊರೆತಿರಲಿಲ್ಲ.

ಅಂದಹಾಗೆ ಇದೀಗ ಬಂದ ರೂಮರ್‍ಸ್ ಪ್ರಕಾರ ಜನವರಿ 26, ಗಣರಾಜ್ಯೋತ್ಸವ ದಿನದಂದು ಆಚಾರ್ಯ ಸಿನೆಮಾ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಸಂಕ್ರಾಂತಿ ಹಬ್ಬದಂದೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತಂತೆ, ಆದರೆ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಟೀಸರ್ ಸಹ ಬಿಡುಗಡೆಯಾಗಿದ್ದರಿಂದ ಜ,೨೬ ರಂದು ಟೀಸರ್ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಈಗಾಗಲೇ  ಆಚಾರ್ಯ ಸಿನೆಮಾ ಸಹ ಮೇ ಮಾಹೆಯಲ್ಲಿ ರಿಲೀಸ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಇದಕ್ಕೆ ಕಾರಣ ಮೇ 9 ಮೆಗಾಸ್ಟಾರ್ ರವರಿಗೆ ಸೆಂಟಿಮೆಂಟ್ ಡೇ ಎಂದು ಹೇಳಲಾಗುತ್ತಿದ್ದು, 90 ರ ದಶಕದಲ್ಲಿ ಬಿಡುಗಡೆಯಾಗಿ ಹಿಟ್ ಹೊಡೆದ ಜಗದೇಕ ವೀರುಡು ಅತಿಲೋಕ ಸುಂದರಿ, ಗ್ಯಾಂಗ್ ಲೀಡರ್ ಸಿನೆಮಾಗಳು ಭರ್ಜರಿಯಾಗಿ ಹಿಟ್ ಹೊಡೆದಿತ್ತು. ಇದೇ ರೀತಿ ಆಚಾರ್ಯ ಚಿತ್ರ ಕೂಡ ಮೇ.9 ರಂದೇ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

Trending

To Top