Film News

ಫೆಬ್ರವರಿ 12ಕ್ಕೆ ಮದಗಜ ತಂಡದಿಂದ ಮತ್ತೊಂದು ಫಸ್ಟ್ ಲುಕ್!

ಬೆಂಗಳೂರು: ಈಗಾಗಲೇ ಪೋಸ್ಟರ್ ಹಾಗೂ ಟೈಟಲ್ ಮೂಲಕವೇ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿರುವ ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನೆಮಾದ ಪ್ರಮುಖ ಪಾತ್ರವೊಂದರ ಫಸ್ಟ್ ಲುಕ್ ಇದೇ ಫೆ.12 ರಂದು ರಿವೀಲ್ ಆಗಲಿದೆ ಎಂಬ ಮಾಹಿತಿ ಚಿತ್ರತಂಡ ಬಹಿರಂಗಪಡಿಸಿದೆ.

ಮದಗಜ ಚಿತ್ರ ಪಾನ್ ಇಂಡಿಯಾ ಸಿನೆಮಾದಡಿ ಬಿಡುಗಡೆಯಾಗಲಿದ್ದು, ಕನ್ನಡ ಸೇರಿದಂತೆ ತೆಲುಗು ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಇನ್ನೂ ಈ ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ತಲುಪಿದ್ದು, ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದೀಗ ಮದಗಜ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಣೆ ಮಾಡಲಿರುವ ಟಾಲಿವುಡ್ ನ ಸ್ಟಾರ್ ನಟ ಜಗಪತಿ ಬಾಬು ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಫೆ.12 ರಂದು ಬೆಳಿಗ್ಗೆ 9.09 ಗಂಟೆಗೆ ಪೋಸ್ಟರ್ ರಿಲೀಸ್ ಆಗಲಿದೆ ಎಂದು ಉಮಾಪತಿ ಫಿಲ್ಮಂಸ್ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.

ಇನ್ನೂ ಕನ್ನಡ ಸೇರಿದಂತೆ ತೆಲುಗು, ತಮಿಳು ಮೂರು ಭಾಷೆಯಲ್ಲಿ ಮದಗಜ ಟೀಸರ್ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಇದೀಗ ಖಳನಾಯಕನ ಲುಕ್ ಕುರಿತು ಬಿಡುಗಡೆಯಾಗುವ ಪೋಸ್ಟರ್ ಕುರಿತು ಮತಷ್ಟು ಕುತೂಹಲ ಹೆಚ್ಚಿಸಿದೆ. ಫೆ.12 ರಂದೇ ಮದಗಜ ಚಿತ್ರದ ಖಳನಾಯಕನ ಪಾತ್ರ ಪೋಷಣೆ ಮಾಡುತ್ತಿರುವ ಜಗಪತಿ ಬಾಬು ರವರ ಹುಟ್ಟುಹಬ್ಬವಾಗಿರುವುದರಿಂದ ಅದೇ ದಿನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಜಗಪತಿ ಬಾಬು ರವರಿಗೆ ವಿಶೇಷ ಉಡುಗೊರೆ ಕೊಡಲು ಚಿತ್ರತಂಡ ಪ್ಲಾನ್ ಮಾಡಿದೆ.

Trending

To Top