Film News

ಡಿ.24 ರಂದೇ ವಂಡರ್ ವುಮನ್ 1984 ಭಾರತದಲ್ಲಿ ಬಿಡುಗಡೆ

ನವದೆಹಲಿ: ಹಾಲಿವುಡ್ ಸೂಪರ್ ಹೀರೋ ಆಧಾರಿತ ಚಿತ್ರಗಳಲ್ಲಿ ಒಂದಾದ ವಂಡರ್ ವುಮನ್ 1984 ಚಲನಚಿತ್ರ ಅಮೇರಿಕಾ ದೇಶಕ್ಕಿಂತಲೂ ಮುಂಚೆಯೇ ಡಿ.24 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ಹಾಲಿವುಡ್ ನಟಿ ಗಾಲ್ ಗಡೊಟ್ ಅಭಿನಯದ ಸೂಪರ್ ಹಿರೋ ಚಿತ್ರ ವಂಡರ್ ವುಮನ್ 1984 ಡಿ.24ರಂದು ಕ್ರಿಸ್‌ಮಸ್ ಹಬ್ಬದಂದು ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ. ಡಿ.25 ರಂದು ಅಮೇರಿಕಾದಲ್ಲಿ ಬಿಡುಗಡೆಯಾಗಲಿದೆ. ಸುಮಾರು 200 ಮಿಲಿಯನ್ ಮೊತ್ತದ ಭಾರಿ ಬಜೆಡ್ ಚಿತ್ರ 2020 ರ ಮೊದಲನೆ ವರ್ಷದಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್ ಹಿನ್ನೆಲೆಯಲ್ಲಿ ವಿಳಂಭವಾಗಿತ್ತು. ಈ ಚಿತ್ರವೂ ಸಹ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಇಂಗ್ಲೀಷ್ ಸೇರಿದಂತೆ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದು ಸೂಪರ್ ಹೀರೋ ಪಾತ್ರಗಳೊಂದಿಗೆ ಸೂಪರ್ ಹಿರೋ ಮೂಲಕ ಹೇಳಲಾದ ಒಂದು ಶ್ರೇಷ್ಟ ಕಥನವಾಗಿದೆ. ಸಾಕಷ್ಟು ಆಕ್ಷನ್ ಹಾಗೂ ಸಸ್ಪೆನ್ಸ್‌ಗಳಿಂದ ಕೂಡಿದ್ದು, ನೂತನ ಯುದ್ದ, ಹೊಸ ರಕ್ಷಾ ಕವಚ, ನೂತನ ಖಳನಾಯಕರು, ದೀರ್ಘಕಾಲ ಕಳೆದುಹೋದ ಪ್ರೀತಿಯೊಂದಿಗೆ ಪುನಃ ಭೇಟಿಯೊಂದಿಗೆ ಅದ್ಭುತ ಯುಗದ ಆರಂಭವನ್ನು ಚಿತ್ರ ಪಡೆಯಲಿದೆ. ಇನ್ನೂ ಈ ಚಿತ್ರವನ್ನು ಪ್ಯಾಟಿ ಜೆಂಕಿನ್ಸ್ ನಿರ್ದೇಶನ ಮಾಡಿದ್ದಾರೆ.

Trending

To Top