Film News

ಡಿ.21 ರಂದು ಶರಣ್ ನ್ಯೂ ಮೂವಿ ಟೈಟಲ್ ಘೋಷಣೆ!

ಬೆಂಗಳೂರು: ಕನ್ನಡ ಸಿನಿರಂಗದ ಕಾಮಿಡಿ ನಟ ಶರಣ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ನೂತನ ಸಿನೆಮಾ ಬರಲಿದ್ದು, ಟೈಟಲ್ ಡಿ.21 ರಂದು ಘೋಷಣೆಯಾಗಲಿದೆಯಂತೆ.

ಇನ್ನೂ ಈ ಚಿತ್ರವನ್ನು ಶರಣ್ ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದು, ಹೊಸ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಿರ್ದೇಶಕ ತರುಣ್ ಸುಧೀರ್ ತಮ್ಮ ಹುಟ್ಟುಹಬ್ಬದಂದು ಶರಣ್ ಜೊತೆಗೆ ಸಿನೆಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಪ್ರೋಡಕ್ಷನ್ ನಂ.3 ಎಂಬ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ಮೇಲೆ ವಿಸಿಲ್ ಇಟ್ಟು ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದ್ದರು. ಆದರೆ ಪೋಸ್ಟರ್ ಗುಟ್ಟು ಡಿ.21 ರಂದು ಬಯಲಾಗಲಿದೆ ಎನ್ನಲಾಗಿದೆ.

ನಿರ್ದೇಶಕ ತರುಣ್ ತಮ್ಮ ಟ್ವಿಟರ್ ನಲ್ಲಿ ’ಲಡ್ಡು ಸಿನೆಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟೀವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಟೈಟಲ್ ಡಿ.21 ರಂದು ಬಿಡುಗಡೆ ಮಾಡಲಾಗುವುದು’ಎಂದು ಬರೆದುಕೊಂಡಿದ್ದಾರೆ.

ಇನ್ನೂ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರಲಿರುವ ಅವತಾರ ಪುರುಷ ಸಿನೆಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಚಿತ್ರದಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ನಟಿಸಿದ್ದು, 2021 ವರ್ಷದಲ್ಲಿ ತೆರೆ ಮೇಲೆ ಬರಲಿದೆ.

Trending

To Top