ಲೈಗರ್ ನ್ಯೂಡ್ ಪೋಸ್ಟರ್ ರಿಲೀಸ್, ಹಾಟ್ ನಟಿಯರ ಹಾಟ್ ಕಾಮೆಂಟ್ಸ್, ಕ್ರೇಜಿ ಕಾಮೆಂಟ್ಸ್ ಹಂಚಿಕೊಂಡ ನಟಿಯರು..!

ಟಾಲಿವುಡ್ ನಲ್ಲಿ ಬಹುನಿರೀಕ್ಷಿತ ಚಿತ್ರ ಲೈಗರ್‍ ಸಿನೆಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿದೆ. ಪೋಸ್ಟರ್‍, ಫಸ್ಟ್ ಗ್ಲಿಂಪ್ಸ್ ಹಾಗೂ ಟೀಸರ್‍ ಗಳ ಮೂಲಕವೇ ಹವಾ ಸೃಷ್ಟಿ ಮಾಡಿದೆ. ಡೇರಿಂಗ್ ಅಂಡ್ ಡಾಷಿಂಗ್ ಡೈರೆಕ್ಟರ್‍ ಪೂರಿ ಜಗನ್ನಾಧ್ ಹಾಗೂ ರೌಡಿ ಹಿರೋ ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಲೈಗರ್‍ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಇದೀಗ ಸಿನೆಮಾದ ಪೊಸ್ಟರ್‍ ಬಿಡುಗಡೆಯಾಗಿದ್ದು, ಈ ಪೊಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಕೆಲ ನಟಿಯರು ಸಹ ಹಾಟ್ ಕಾಮೆಂಟ್ಸ್ ಹಾಕಿದ್ದನ್ನು ಕಂಡರೇ ಪೋಸ್ಟರ್‍ ಕ್ರೇಜ್ ಎಷ್ಟಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

ಲೈಗರ್‍ ಸಿನೆಮಾ ರಿಲೀಜ್ ಗೂ ಮುನ್ನವೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಪ್ಯಾನ್ ಇಂಡಿಯಾ ಸಿನೆಮಾ ಲೈಗರ್‍ ಈಗಾಗಲೇ ಎಲ್ಲರ ಗಮನ ಸೆಳೆಯುತ್ತಿದ್ದು, ಇದೀಗ  ಸಿನೆಮಾದ ಹೊಸ ಪೋಸ್ಟರ್‍ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಲೈಗರ್‍ ಸಿನೆಮಾದ ಪೋಸ್ಟರ್‍ ಒಂದು ರಿಲೀಸ್ ಮಾಡಿದ್ದು, ಪೋಸ್ಟರ್‍ ಬಿಡುಗಡೆಯಾದ ಕಡಿಮೆ ಸಮಯದಲ್ಲಿ ನ್ಯಾಷನಲ್ ವೈಡ್ ಹಾಟ್ ಟಾಪಿಕ್ ಆಗಿದೆ. ಇನ್ನೂ ಈ ರೇಂಜ್ ನಲ್ಲಿ ಪೋಸ್ಟರ್‍ ವೈರಲ್ ಆಗಲು ಕಾರಣ ನೆವರ್‍ ಬಿಫೋರ್‍ ಬೋಲ್ಡ್ ಲುಕ್ಸ್ ವಿಜಯ್ ದೇವರಕೊಂಡ ನ್ಯೂಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಪೋಸ್ಟರ್‍ ರಿಲೀಸ್ ಕೂಡಲೇ ಸೋಷಿಯಲ್ ಮಿಡಿಯಾದಲ್ಲಿ ಸೆಕ್ಸಿಯೆಸ್ಟ್ ಪೋಸ್ಟರ್‍ ಎವರ್‍ ಎಂಬ ಟ್ರೆಂಡ್ ಶುರುವಾಗಿದೆ. ಇನ್ನೂ ವಿಜಯ್ ದೇವರಕೊಂಡ ಹೊಸ ಲುಕ್ಸ್ ಅನೇಕ ನಟಿಯರು ಫ್ಯಾನ್ಸ್ ಆಗಿಬಿಟ್ಟಿದ್ದಾರೆ. ಸ್ಟಾರ್‍ ನಟಿಯರಾದ ಸಮಂತಾ, ಜಾನ್ವಿ ಕಪೂರ್‍, ಪೂಜಾ ಹೆಗ್ಡೆ, ರಷ್ಮಿಕಾ ಮಂದಣ್ಣ, ತಮನ್ನಾ ಮೊದಲಾದವರು ವಿಜಯ್ ದೇವರಕೊಂಡ ನ್ಯೂಡ್ ಲುಕ್ ಗೆ ಫಿದಾ ಆಗಿ ಕಾಮೆಂಟ್ಸ್ ಹಾಕಿದ್ದಾರೆ.

ಇನ್ನೂ ವಿಜಯ್ ನ್ಯೂಡ್ ಲುಕ್ ಗೆ ಸಮಂತಾ ಕಾಮೆಂಟ್ ಮಾಡಿದ್ದು, ಅವನಿಗೆ ರೂಲ್ಸ್ ಗೊತ್ತು, ರೂಲ್ಸ್ ಬ್ರೇಕ್ ಮಾಡುವುದು ಗೊತ್ತು, ಗಟ್ಸ್ ಅಂಡ್ ಗ್ಲೋರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಸಹ ಇನ್ಸ್ಟಾ ಸ್ಟೋರಿಯಲ್ಲಿ ಕಾಮೆಂಟ್ ಮಾಡಿದ್ದು, ನಮಗೆ ವಿಜಯ್ ದೇವರಕೊಂಡ ರೂಪದಲ್ಲಿ ಬಾಳಿವುಡ್ ಗೆ ಸ್ಪೇಷಲ್ ಡಿಲೆವರಿಯೊಂದು ಬರಲಿದೆ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಪೂಜಾ ಹೆಗ್ಡೆ ಸಹ ಆಸಕ್ತಿಕರವಾದ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಗುಡ್ ಲಕ್ ಮೈ ಜನಗಣಮನ ಗ್ಯಾಂಗ್. ಲೈಗರ್‍ ಸಿನೆಮಾ ಗಾಗಿ ತುಂಬಾ ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಮುಂದುವರೆದೂ ನಟಿ ರಶ್ಮಿಕಾ ಮಂದಣ್ಣ ಸಹ ಕಾಮೆಂಟ್ ಮಾಡಿದ್ದು, ನಾನು ಇಲ್ಲಿವರೆಗೂ ನಿನ್ನ ಇನ್ಸಿಪಿರೇಷನ್ ಯಾರು ಎಂದು ಕೇಳಿದರೇ ಯಾರ ಹೆಸರನ್ನು ಹೇಳುತ್ತಿರಲಿಲ್ಲ. ಇನ್ನು ಮುಂದೆ ವಿಜಯದೇವರಕೊಂಡ ಎಂದು ಹೇಳುತ್ತೇನೆ. ಲೈಗರ್‍ ನಿನಗೆ ನಮ್ಮ ಪ್ರೀತಿಯ ಸರ್ಪೋರ್ಟ್ ಇದೆ, ಈ ದೇಶಕ್ಕೆ ನೀನು ಏನು ಎಂಬುದನ್ನು ತೋರಿಸು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಲೈಗರ್‍ ನ ಈ ಪೋಸ್ಟರ್‍ ಬಗ್ಗೆ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹಾಕುತ್ತಿದ್ದರೂ ಸಹ ಈ ಹಾಟ್ ನಟಿಯರು ಹಂಚಿಕೊಂಡ ರಿಯಾಕ್ಷನ್ ಮಾತ್ರ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಈ ಪೋಸ್ಟರ್‍ ವರ್ಲ್ಡ್ ವೈಡ್ ಸೆನ್ಷೇಷನ್ ಆಗಿದೆ. ಇನ್ನೂ ಸಿನೆಮಾ ಬಿಡುಗಡೆಯಾಗುವುದರ ಒಳಗೆ ಸಿನೆಮಾದಿಂದ ಮತಷ್ಟು ಇಂತಹ ಅಪ್ಡೇಟ್ ಗಳು ಬರಬಹುದು ಎಂದು ಹೇಳಲಾಗುತ್ತಿದೆ.

Previous articleಟೋನ್ಡ್ ಬ್ಯೂಟಿಯೊಂದಿಗೆ ಟ್ರೆಂಡ್ ಕ್ರಿಯೇಟ್ ಮಾಡಿದ ರಿಚಾ ಚಡ್ಡಾ..!
Next articleಸರ್ಜರಿ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷನಾದ ದೂದ್ ಪೇಡ ದಿಗಂತ್…!